ಎಚ್ಚರಿಕೆಯ ನಡುವೆಯು ಪ್ರವಾಸಿಗರ ಹುಚ್ಚಾಟ – ಮುರುಡೇಶ್ವರದಲ್ಲಿ ಸಮುದ್ರದ ಪಾಲಾದ ಯುವಕ
ಅಲೆಯ ಅಬ್ಬರಕ್ಕೆ ಯುವಕನೋರ್ವ ಸಮುದ್ರದಲ್ಲಿ ಕೊಚ್ಚಿ ಹೋದ ಘಟನೆ ಮುರುಡೇಶ್ವರದಲ್ಲಿ ಸೋಮವಾರ ನಡೆದಿದೆ. ಈ ವೇಳೆ ಮುಳುಗುತ್ತಿದ್ದ ಇಬ್ಬರನ್ನು ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.ಹುಬ್ಬಳ್ಳಿಯ ಸಂತೋಷ್ ಹುಲಿಗುಂಡ (19) ಸಮುದ್ರಪಾಲಾದ ಯುವಕನಾಗಿದ್ದು, ಹಸನ್ ಮಜಗೀಗೌಡ (20) ಹಾಗೂ ಸಂಜೀವ್ (20) ಎಂಬುವವರನ್ನು ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಅಲೆಗೆ ಕೊಚ್ಚಿಹೋದ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment