".

Header Ads

ಮಹಿಳೆಯರ ಉಚಿತ ಪ್ರಯಾಣಕ್ಕೆ ಜೆರಾಕ್ಸ್ ಸಾಕು

ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಭಾನುವಾರ ಚಾಲನೆ ನೀಡಲಾಗಿದ್ದು, ಉಚಿತ ಪ್ರಯಾಣಕ್ಕೆ ಐಡಿ ಪ್ರೂಫ್ ತೋರಿಸಬೇಕು ಎಂದು ಹೇಳಲಾಗಿತ್ತು. ಆದರೆ ಒರಿಜಿನಲ್ ತೋರಿಸಬೇಕಾ ಅಥವಾ ಝರಾಕ್ಸ್ ಸಾಕಾ ಎಂಬ ಬಗ್ಗೆ ಗೊಂದಲಗಳಿದ್ದವು.

ಹೀಗಾಗಿ ರಾಜ್ಯದ ಹಲವೆಡೆ ಐಡಿ ಪ್ರೂಫ್​ ವಿಚಾರಕ್ಕೆ ಕಂಡಕ್ಟರ್ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಗಲಾಟೆ, ಮಾತಿನ ಚಕಮಕಿಗಳು ನಡೆದಿದ್ದವು. ಇದರಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ನಕಲು ಪ್ರತಿ ತೋರಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಿಸಬಹುದು ಎಂದು ಸ್ಪಷ್ಟಪಡಿಸಿದೆ.

Powered by Blogger.