".

Header Ads

ಸೀತಾನದಿ ಜಕ್ಕನಮಕ್ಕಿ ಬಳಿ ಭೀಕರ ರಸ್ತೆ ಅಪಘಾತಕ್ಕೆ ಉಡುಪಿಯ ಇಬ್ಬರು ಶಿಕ್ಷಕರು ಬಲಿ…!!


ಉಡುಪಿಯಿಂದ ಆಗುಂಬೆ ಹೋಗುತ್ತಿರುವ ಬಸ್ ಹಾಗೂ ಚೆನ್ನಗಿರಿಯಲ್ಲಿ ಮದುವೆ ಮುಗಿಸಿ ಉಡುಪಿಗೆ ಬರುತ್ತಿರುವ ಶಿಕ್ಷಕರ ಕಾರಿನ ನಡುವೆ ಅಪಘಾತ ನಡೆದಿದೆ.  

ಕಾರು ಹಾಗೂ ಖಾಸಗಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಶಿಕ್ಷಕರು ಸಾವನಪ್ಪಿರುವ ಘಟನೆ ಸೀತಾನದಿ ಜಕ್ಕನಮಕ್ಕಿ ಬಳಿ ನಡೆದಿದೆ.

ಮೃತರನ್ನು ಉಡುಪಿ ಡಿಡಿಪಿಐ ಆಫೀಸ್ ನ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ಬಣ್ಣ ಗಾಣಿಗ ಹಾಗೂ ಉಡುಪಿ ಇಂದಿರಾ ನಗರ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಸೋಮ ಶೇಖರ ಎನ್ನಲಾಗಿದೆ. ಅಪಘಾತದಲ್ಲಿ ಮತ್ತೊಬ್ಬ ಶಿಕ್ಷಕನ ಪರಿಸ್ಥಿತಿ ಗಂಭಿರವಾಗಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.  ತುರ್ತು ಚಿಕಿತ್ಸೆ ಸಿಗದೆ ಇಬ್ಬರು ಮೃತಪಟ್ಟಿದ್ದಾರೆ.


Powered by Blogger.