".

Header Ads

ಭಾರತಕ್ಕೆ ಕೊನೆಗೂ ಬಂದ ಮಾನ್ಸೂನ್: ಕೇರಳದಲ್ಲಿ ವ್ಯಾಪಕ ಮಳೆ

 


 ಗುರುವಾರ ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ   ಮಾಹಿತಿ ನೀಡಿದೆ. ಕೇರಳದಲ್ಲಿ ಈಗಾಗಲೇ ಮಾನ್ಸೂನ್ ಪ್ರಾರಂಭವಾಗಿದ್ದು, ಸಾಮಾನ್ಯಕ್ಕಿಂತ ಒಂದು ವಾರ ತಡವಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ವ್ಯಾಪಕ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ.

'ನೈಋತ್ಯ ಮಾನ್ಸೂನ್ ಇಂದು ಅಂದರೆ ಜೂನ್ 08, 2023 ರಂದು ಬಂದಿದೆ. ಇದು ಸಾಮಾನ್ಯವಾಗಿ ಜೂನ್‌ 01 ಕ್ಕೆ ಬರಬೇಕು. ಆದ್ದರಿಂದ, ಈ ಬಾರಿಯ ಮಾನ್ಸೂನ್‌ ಒಂದು ವಾರ ತಡವಾಗಿದೆ' ಎಂದು ಐಎಂಡಿ ಟ್ವೀಟ್‌ ಮಾಡಿದೆ.

'ನೈಋತ್ಯ ಮಾನ್ಸೂನ್ ದಕ್ಷಿಣ ಅರೇಬಿಯನ್ ಸಮುದ್ರ ಮತ್ತು ಮಧ್ಯ ಅರೇಬಿಯನ್ ಸಮುದ್ರದ ಕೆಲವು ಸಮೀಪದ ಪ್ರದೇಶಗಳು, ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಭಾಗಗಳು, ಕೊಮೊರಿನ್ ಪ್ರದೇಶದ ಉಳಿದ ಭಾಗಗಳಲ್ಲಿ ಆರಂಭವಾಗಿದೆ' ಎಂದು ತಿಳಿದುಬಂದಿದೆ.


Powered by Blogger.