ಸಾವಿರಾರು ಹೃದಯ ಸಂಬಂಧಿ ಸರ್ಜರಿ ಮಾಡಿದ್ದ ಖ್ಯಾತ ಹೃದ್ರೋಗ ತಜ್ಞ ಹೃದಯಾಘಾತದಿಂದ ನಿಧನ
ಸೋಮವಾರ (ಜೂ.5 ರಂದು) ಸಾಮಾನ್ಯ ದಿನದಂತೆ ಆಸ್ಪತ್ರೆಗೆ ತೆರಳಿ, ರೋಗಿಗಳನ್ನು ಪರೀಕ್ಷೆ ಮಾಡಿದ್ದಾರೆ. ರಾತ್ರಿ ಮನೆಗೆ ಬಂದ ಬಳಿಕ ಊಟ ಮಾಡಿ ಮಲಗಿದ್ದಾರೆ. ಮಂಗಳವಾರ ಮುಂಜಾನೆ 6 ಗಂಟೆಯ ಹೊತ್ತಿಗೆ ಮನೆಯವರು ಅವರನ್ನು ಎಬ್ಬಿಸಲು ಹೋಗುವಾಗ ಗೌರವ್ ಪ್ರಜ್ಞೆ ತಪ್ಪಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಆದರೆ ಪರೀಕ್ಷೆ ಮಾಡಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು ʼಆಜ್ ತಕ್ʼ ವರದಿ ತಿಳಿಸಿದೆ.
ಅವರು ವೈದ್ಯಕೀಯ ವೃತ್ತಿಜೀವನದ ಅವಧಿಯಲ್ಲಿ 16,000 ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ವರದಿಯಾಗಿದೆ.
Post a Comment