ವಸಾಯಿ ತಾಲ್ಲೂಕಿನ ತುಳು ಕನ್ನಡಿಗರ ವತಿಯಿಂದ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆಗೆ ಸಾರ್ವಜನಿಕ ಅಭಿನಂದನೆ
ಸಾಮಾಜಿಕ ಸೇವೆಗೆ ಶಕ್ತಿ ತುಂಬಿದವರು ಮುಂಬೈ ತುಳು ಕನ್ನಡಿಗರು:ಸುರೇಶ್ ಶೆಟ್ಟಿ ಗುರ್ಮೆ
ನಲ್ಲಸೋಪಾರ: ಕಾಪಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡ ನಾಲಾಸೋಪಾರ ಹೋಟೆಲ್ ಉದ್ಯಮಿ ಸಮಾಜಸೇವಕ ಹರೀಶ್ ಶೆಟ್ಟಿ ಗುರ್ಮೆಯವರ ಹಿರಿಯ ಸಹೋದರ, ಮುಂಬೈ ನಗರದಲ್ಲಿ ಬಹಳ ವರ್ಷಗಳಿಂದ ಹೋಟೆಲ್ ಉದ್ಯಮವನ್ನು ನಡೆಸುತ್ತಾ ಬಂದಿರುವ ಸುರೇಶ್ ಶೆಟ್ಟಿ ಗುರ್ಮೆ ಯವರನ್ನು ಜೂನ್ 5ರಂದು ನಾಲಾಸೋಪಾರ ಪೂರ್ವಅಗರ್ವಾಲ್ ಸರ್ಕಲ್ ನ ಹತ್ತಿರ,ಫೈರ್ ಬ್ರಿಗೇಡ್ ಎದುರು,ರೀಜೆನ್ಸಿ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಸಾಯಿ ತಾಲ್ಲೂಕಿನ ತುಳು ಕನ್ನಡಿಗರ ವತಿಯಿಂದ ಸಾರ್ವಜನಿಕವಾಗಿ ಅಭಿನಂದಿಸಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಸುರೇಶ್ ಶೆಟ್ಟಿ ಗುರ್ಮೆ ಯವರು, ಕಾಪಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾಗುವಲ್ಲಿ ಮುಂಬೈಯ ಅದರಲ್ಲೂ ಈ ಪರಿಸರದ ತುಳು ಕನ್ನಡಿಗರು ವಿಶೇಷವಾದ ಕಾಳಜಿಯನ್ನು ವಹಿಸಿ ನನ್ನ ಗೆಲುವಿಗೆ ಅಪಾರವಾಗಿ ಶ್ರಮಿಸಿದ್ದಾರೆ ಅವರೆಲ್ಲರಿಗೂ ಮೊದಲು ಅಭಿನಂದನೆ ಸಲ್ಲಿಸುತ್ತೇನೆ, ಸರಕಾರ ದ ವಿರೋಧ ಪಕ್ಷದಲ್ಲಿದ್ದು ನನ್ನೂರಿನ ಮತ್ತು ನನ್ನಿಂದ ಆಗುವ ಸೇವೆಗಳನ್ನು ನಿರಂತರ ಮಾಡುತ್ತೇನೆ, ನನ್ನಲ್ಲಿ ಅಗತ್ಯದ ಯಾವುದೇ ಸೇವಾ ಕಾರ್ಯಗಳಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಊರಿನ ಅಭಿವೃದ್ಧಿಗೆ ಶಾಸಕನಾಗಿ ನಾನೆಷ್ಟು ಸೇವೆ ಮಾಡಬೇಕೆ ಅದನ್ನು ಮಾಡುತ್ತೇನೆ ನೀವು ಕೂಡ ನಿಮ್ಮೂರಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ನುಡಿದರು.
ತುಳು ಕೂಟ ಫೌಂಡೇಶನ್ ನಲ್ಲಸೋಪಾರ ಇದರ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಮಾತನಾಡುತ್ತಾ ಈ ಪರಿಸರದ ತುಳು ಕನ್ನಡಿಗರು ಸುರೇಶ್ ಶೆಟ್ಟಿ ಗುರ್ಮೆ ಅವರು ಕಾಪು ಕ್ಷೇತ್ರದಲ್ಲಿ ಶಾಸಕರಾಗಬೇಕೆಂಬ ಪ್ರಯತ್ನದಿಂದ ಅಪಾರ ರೀತಿಯ ಸಹಕಾರ ನೀಡಿದ್ದಾರೆ ಚುನಾವಣೆಯ ಸಂದರ್ಭದಲ್ಲಿ ಅವರೊಂದಿಗಿದ್ದು ಗೆಲುವಿಗೆ ಶ್ರಮಿಸಿದ್ದಾರೆ, ಶಾಸಕರಾಗಿ ಗೆಲುವು ಸಂಭ್ರಮಿಸಿದ ದಿನದಿಂದಲೇ ಕಾಪು ಕ್ಷೇತ್ರದ ಬಂಧುಗಳು ಅಪಾರ ರೀತಿಯ ಸಮಸ್ಯೆಗಳನ್ನು ಅವರ ಬಳಿಗೆ ತಂದಿದ್ದಾರೆ ಅದೆಲ್ಲವನ್ನು ಅವರು ಸರಿಪಡಿಸುತ್ತಾರೆ ಎನ್ನುವ ಅಭಿಮಾನದಿಂದ ಅದಕ್ಕಾಗಿ ಅವರು ಶ್ರಮಿಸಿದ್ದನ್ನು ಕೂಡ ನಾನು ಕಂಡಿದ್ದೇನೆ, ಶಾಸಕರಾಗಿ ಬಲಿಷ್ಠಗೊಳ್ಳಲು ಮುಂಬೈಯಲ್ಲಿದ್ದ ಸುರೇಶ್ ಶೆಟ್ಟಿ ಅವರ ಅಭಿಮಾನಿಗಳೆಲ್ಲರೂ ಅವರಿಗೆ ಅಗತ್ಯದ ಸಹಕಾರವನ್ನು ನೀಡಬೇಕು, ರಾಜಕೀಯದ ಲಾಭಕ್ಕಾಗಿ ಅವರು ಸಾಮಾಜಿಕ ಸೇವೆಗಳನ್ನು ಮಾಡಿದವರಲ್ಲ ಅವರು ಮಾಡಿದ ದಾನ-ಧರ್ಮಗಳು ಸಮಾಜ ಗುರುತಿಸಿದೆ ಪಕ್ಷ ಕೂಡ ಗುರುತಿಸಿದೆ ಆದ್ದರಿಂದ ಅವರನ್ನು ಕಾಪಕ್ಷೇತ್ರದ ಮತದಾರರು ಬಾರಿ ಅಂತರದಿಂದ ಚುನಾಯಿಸಿದ್ದಾರೆ ಶಾಸಕರಾಗಿ ಮುಂಬೈ ನಗರಕ್ಕೆ ಆಗಮಿಸಿದ ಶಾಸಕರನ್ನು ಈ ಪರಿಸರದಲ್ಲಿ ಅಭಿನಂದಿಸ ಬೇಕೆನ್ನುವ ಆಲೋಚನೆಗೆ ಕ ಡಿಮೆ ಸಮಯದಲ್ಲಿ ಈ ಪರಿಸರದ ತುಳು ಕನ್ನಡಿಗರ ಎಲ್ಲರೂ ಒಗ್ಗಟ್ಟಾಗಿದ್ದೀರಿ ನಿಮಗೆಲ್ಲರಿಗೂ ಕೃತಜ್ಞತೆ ನಮ್ಮ ಒಗ್ಗಟ್ಟು ಹೀಗೆ ಮುಂದಿನ ದಿನಗಳಲ್ಲಿ ಇರಲಿ ಎಂದು ನುಡಿದರು.
ಸಮಾರಂಭದಲ್ಲಿ ಬಂಟರ ಸಂಘದ ವಸಾಯಿ-ದಹಾನು ಪ್ರಾದೇಶಿಕ ಸಮಿತಿಯ, ಕಾರ್ಯಾಧ್ಯಕ್ಷ ಹರೀಶ್ ಪಾಂಡು ಶೆಟ್ಟಿ,ವಿರಾರ್-ನಲ್ಲಸೋಪರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕರ್ಕೇರ,
ವಸಾಯಿ ತಾಲ್ಲೂಕಿನ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ಭರತ್ ಪಾಂಡು ಶೆಟ್ಟಿ,ಬಿಲ್ಲವರ ಅಸೋಸಿಯೇಷನ್ನ ವಸಾಯಿ ಸ್ಥಳೀಯ ಕಾರ್ಯಾಧ್ಯಕ್ಷ ಕರುಣಾಕರ ಅಮೀನ್,ಬಿಲ್ಲವರ ಅಸೋಸಿಯೇಷನ್ನ ವಿರಾರ್-ನಲ್ಲಸೋಪರ ಸ್ಥಳೀಯ ಕಾರ್ಯಾಧ್ಯಕ್ಷ ಗಣೇಶ್ ಸುವರ್ಣ, ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ದೇವೇಂದ್ರ ಬುನ್ನನ್ ಪರ್ಮುದ್, ಕಟೀಲು ಯಕ್ಷಕಲ ವೇದಿಕೆಯ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ, ಹಿರಿಯ ಹೋಟೆಲ್ ಉದ್ಯಮಿಗಳಾದ ಮೋಹನ್ ಬಿ ಶೆಟ್ಟಿ , ರಾಮ ಮಡಿವಾಳ, ಸುರೇಶ್ ಶೆಟ್ಟಿ ಗುರ್ಮೆ ಅವರ ಸಹೋದರ ಹರೀಶ್ ಶೆಟ್ಟಿ ಗುರ್ಮೆ ವಸಾಯಿ ತಾಲ್ಲೂಕಿನ ಹೋಟೆಲ್ ಮಾಲಕರು ಸಂಚಾಲಕರು, ವಿರಾರ್-ನಲ್ಲಸೋಪರ ಕರ್ನಾಟಕ ಸಂಸ್ಥೆಯ, ಪದಾಧಿಕಾರಿಗಳು ಸದಸ್ಯರು ತುಳು ಕೂಟ ಫೌಂಡೇಶನ್ ನಲ್ಲಸೋಪಾರ ಪದಾಧಿಕಾರಿಗಳು ಸದಸ್ಯರು, ವಸಾಯಿ-ದಹಾನು ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಸದಸ್ಯರು,ಹಾಗೂ ಸಮಸ್ತ ತುಳು- ಉಪಸ್ಥಿತರಿದ್ದರು.
ಬಂಟರ ಸಂಘದ ವಸಾಯಿ-ದಹಾನು ಪ್ರಾದೇಶಿಕ ಸಮಿತಿಯ,ಉಪ ಕಾರ್ಯಾಧ್ಯಕ್ಷ , ಸಂಘಟಕ ಪ್ರವೀಣ್ ಶೆಟ್ಟಿ ಕಣಜಾರ್ ಕಾರ್ಯಕ್ರಮವನ್ನು ನಿರೂಪಿಸಿದರು,
.jpg)

Post a Comment