".

Header Ads

ತೀವ್ರಗೊಂಡ ‘ಬಿಪೊರ್‌ಜಾಯ್’ ಚಂಡಮಾರುತ: ಭಾರತದಲ್ಲಿ ಮಂದ ಸ್ವರೂಪದ ಮುಂಗಾರು ಸಾಧ್ಯತೆ

‘ಬಿಪೊರ್‌ಜಾಯ್’ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಮಂದ ಸ್ವರೂಪದ ಮುಂಗಾರು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅರಬ್ಬಿ ಸಮುದ್ರದಲ್ಲಿ ಬೀಸುತ್ತಿರುವ ಮೊದಲ ಚಂಡಮಾರುತವಾದ ‘ಬಿಪೊರ್‌ಜಾಯ್, ಕೇರಳ ಪ್ರವೇಶಿಸಿದ ನಂತರ ತನ್ನ ತೀವ್ರತೆಯನ್ನು ಕಳೆದುಕೊಳ್ಳುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

‘ಅರಬ್ಬಿ ಸಮುದ್ರದ ಪೂರ್ವಮಧ್ಯ ಭಾಗ ಹಾಗೂ ಆಗ್ನೇಯ ದಿಕ್ಕಿನಲ್ಲಿ ಸೃಷ್ಟಿಯಾಗಿರುವ ಈ ಮಾರುತ ಗಂಟೆಗೆ 2 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದು, ಉತ್ತರ ದಿಕ್ಕಿನತ್ತ ಸಾಗುತ್ತಿದೆ. ನಂತರ, ವಾಯವ್ಯ ದಿಕ್ಕಿನತ್ತ ಸಾಗಲಿದೆ’ ಎಂದು ಮುನ್ಸೂಚನೆ ನೀಡಿದ್ದಾರೆ.

ಭಾರತ, ಒಮಾನ್, ಇರಾನ್‌ ಹಾಗೂ ಪಾಕಿಸ್ತಾನದ ಮೇಲೆ ಈ ಚಂಡಮಾರುತ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Powered by Blogger.