ಜುಲೈ 14ರಂದು ಸಮಾಜ ಸೇವಕಿ ಲೀಲಾವತಿ ಜಯ ಸುವರ್ಣರಿಗೆ ಗೋರೆಗಾಂವ್ ಪೂರ್ವ JAYALEELA BANQUETS ನಲ್ಲಿ ನುಡಿ ನಮನ
ಬಿಲ್ಲವ ಸಮುದಾಯದ ಹಿರಿಯ ಮುಖಂಡರು, ಸಹಕಾರಿ ರಂಗದ ಮುಂದಾಳು,ಉದ್ಯಮಿಗಳು ಆಗಿದ್ದಂತಹ ಜಯ ಸಿ ಸುವರ್ಣರ ಪ್ರೇರಣಾ ಶಕ್ತಿಯಾಗಿದ್ದಂತಹ ಅವರ ಧರ್ಮಪತ್ನಿ ಲೀಲಾವತಿ ಜಯ ಸುವರ್ಣರ ಜುಲೈ 1 ರಂದು ವಿಧಿವಶರಾಗಿದ್ದು , ಅವರಿಗೆ ನುಡಿ ನಮನ ಕಾರ್ಯಕ್ರಮ ಜುಲೈ 14ರಂದು ಮಧ್ಯಾಹ್ನ 11.30 ಗಂಟೆಗೆ ಗೋರೆಗಾಂವ್ (ಪೂರ್ವ),ರೈಲ್ವೆ ನಿಲ್ದಾಣ ದಿವಂಗತ ಜಯ ಸುವರ್ಣ ಮಾರ್ಗ, ದಲ್ಲಿರುವ JAYALEELA BANQUETS ನಲ್ಲಿ ನುಡಿ ನಮನ ನಡೆಯಲಿದೆ.
ನುಡಿ ನಮನ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹಿತೈಷಿಗಳು ಪಾಲ್ಗೊಳ್ಳಬೇಕಾಗಿ ಲೀಲಾವತಿ ಜಯ ಸುವರ್ಣ ರ ಮಕ್ಕಳಾದ ಸೂರ್ಯಕಾಂತ್ ಸುವರ್ಣ, ಸುಭಾಶ್ ಸುವರ್ಣ,ದಿನೇಶ್ ಸುವರ್ಣ, ಯೋಗೇಶ್ ಸುವರ್ಣ ಮತ್ತು ವಿನಂತಿಸಿಕೊಂಡಿದ್ದಾರೆ.
ಲೀಲಾವತಿ ಜಯ ಸುವರ್ಣ:
ಲೀಲಾವತಿ ಯವರ ಪಡುಬಿದ್ರಿ ಪಡುಹಿತ್ಲು ದಿ.ಜಲಜ ಮತ್ತು ದಿ.ಗೋಪಾಲ ಸುವರ್ಣರ ಏಳು ಮಂದಿ ಮಕ್ಕಳಲ್ಲಿ ಮೂರನೆಯವರು ಪತಿ ಬಿಲ್ಲವ ಸಮಾಜದ ಅಭಿವೃದ್ಧಿಯ ರೂವಾರಿ ಜಯ ಸಿ. ಸುವರ್ಣರ ಸಮಾಜಪರ ಕೆಲಸ ಕಾರ್ಯಗಳಿಗೆ ಶಕ್ತಿಯಾಗಿ ನಿಂತವರು. ಈ ದಂಪತಿ ಸಮಾಜ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿ, ಅನುಸರಿಸಿದವರು. ಪರರ ಒಳಿತಿನಲ್ಲಿಯೇ ಖುಷಿಯನ್ನು ಕಂಡವರು. ಭಾರತೀಯ ಪರಂಪರೆಯ “ಅತಿಥಿ ದೇವೋ ಭವ” ಎಂಬ ಘೋಷ ವಾಕ್ಯಕ್ಕೆ ತಕ್ಕಂತೆ ಅರ್ಥಪೂರ್ಣವಾಗಿ ಬಾಳಿದವರು. ತಮ್ಮ ಮನೆಯ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತ ಪತಿಯ ಕಾರ್ಯಗಳಿಗೆ ನೈತಿಕ ಬೆಂಬಲವನ್ನು ನೀಡುತ್ತ ಬಂದವರು. ಜಯ ಸುವರ್ಣರ ಜೀವನದಲ್ಲಿ ಲೀಲ ಸುವರ್ಣ ರವರು ವರವಾಗಿಯೇ ಬಂದಿದ್ದಾರೆ ಎಂದರೆ ತಪ್ಪಾಗಲಾರದು., ‘ಸುವರ್ಣರ ಬಾಳಿನಲ್ಲಿ ಹೊಸದೊಂದು ಬದಲಾವಣೆಯನ್ನೂ ತಂದವರು. ತಮ್ಮ ಮನೆಗೆ ಬಂದು ಹೋಗುತ್ತಿದ್ದವರನ್ನೆಲ್ಲ ನಗು ಮುಖದಿಂದ ಸ್ವಾಗತಿ ಸ್ವಾಗತಿಸುತ್ತಿದ್ದ ಲೀಲ ಸುವರ್ಣ ರವರು ಸಹಸ್ರಾರು ಮಂದಿಗೆ ತಾಯಿಯಾದರು. ಅವರ ನೋವು, ನಲಿವುಗಳನ್ನು ಅರಿತು ಸ್ಪಂದಿಸುವ ತಾಮಯಿಯಾದರು. ಬಿಲ್ಲವ ಸಮಾಜದ ಏಳಿಗೆಗೆ ಪಣತೊಟ್ಟ ತನ್ನ ಪತಿಯ ಸತ್ಕಾರ್ಯಗಳಿಗೆ ಹೆಗಲು ಕೊಟ್ಟರು. ಜಾತಿ ಮತ ಭೇದವಿಲ್ಲದೆ ಅಶಕ್ತರನ್ನು ಪೋಷಿಸುವ ಸುವರ್ಣರ ನಿಲುವನ್ನು ತಾವೂ ಮೆಚ್ಚಿಕೊಂಡು ಜೊತೆಯಾದರು.
ಲೀಲಾವತಿಯವರು ಹಳ್ಳಿಯ ಸಂಪ್ರದಾಯಸ್ಥ ಕುಟುಂಬದಿಂದ ಬಂದವರಾದುದರಿಂದ ನಗರದಲ್ಲಿಯೂ ಅದೇ ಸಂಸ್ಕಾರಯುತ ಜೀವನವನ್ನೇ ಆದರಿಸಿದರು. ಕುಟುಂಬವೇ ತನ್ನ ಪ್ರಪಂಚವೆಂದು ಭಾವಿಸಿ, ಅದರ ಖುಷಿಯಲ್ಲಿಯೇ ತನ್ನ ಆನಂದವನ್ನು ಕಾಣುತ್ತ ಜೀವಿಸಿದರು. ಹೊಟೇಲು ಉದ್ಯಮದ ಕೆಲಸಗಾರರನ್ನೂ ತಮ್ಮ ಮನೆಮಂದಿಯಂತೆಯೇ ಉಪಚರಿಸುವ ಉದಾರ ಮನೋಭಾವ ಲೀಲಾ ಸುವರ್ಣ ರವರು. ಓರ್ವ ಆದರ್ಶ ಗೃಹಿಣಿಯಾಗಿ ಬಾಳಿ ಬದುಕಿದವರು.

Post a Comment