".

Header Ads

ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲು ಟಿಕೆಟ್ ಬಗ್ಗೆ ಜಾರಿಯಾಗಿದೆ ಹೊಸ ನಿಯಮ!

  ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಅನ್ನು ಮೊದಲೇ ಬುಕ್ ಮಾಡಬೇಕಾಗುತ್ತದೆ. ರೈಲು ಟಿಕೆಟ್ ಗೆ ಸಂಬಂಧಿಸಿದ ಹೊಸ ನಿಯಮವನ್ನು ತಿಳಿದುಕೊಂಡಿರಬೇಕು. ರೈಲು ಟಿಕೆಟ್ ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ನಿಯಮವನ್ನು ಬದಲಾಯಿಸಿದೆ.


ನೀವು ಕೂಡಾ ಪ್ರಯಾಣಕ್ಕಾಗಿ ರೈಲು ಟಿಕೆಟ್ ಅನ್ನು ಬುಕ್ ಮಾಡಿದ್ದರೆ, ಈ ಸುದ್ದಿ ನಿಮಗೆ ಸಂತಸ ತರಬಹುದು. ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಅನ್ನು ಮೊದಲೇ ಬುಕ್ ಮಾಡಬೇಕಾಗುತ್ತದೆ. ಇಲ್ಲವಾದರೆ ಟಿಕೆಟ್ ಕನ್ಫರ್ಮ್ ಆಗದೆ ಹೋಗುವ ಸಂಭವ ಇರುತ್ತದೆ. ನೀವು ಕೂಡಾ ಪ್ರಯಾಣ ಬೆಳೆಸುವ ಸಲುವಾಗಿ ರೈಲು ಟಿಕೆಟ್ ಅನ್ನು  ಕಾಯ್ದಿರಿಸಲು ಹೋಗುತ್ತಿದ್ದರೆ ಅಥವಾ ಆ ಯೋಚನೆಯಲ್ಲಿದ್ದರೆ ರೈಲು ಟಿಕೆಟ್ ಗೆ ಸಂಬಂಧಿಸಿದ ಹೊಸ ನಿಯಮವನ್ನು ತಿಳಿದುಕೊಂಡಿರಬೇಕು. ರೈಲು ಟಿಕೆಟ್ ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ನಿಯಮವನ್ನು ಬದಲಾಯಿಸಿದೆ. ರೈಲು ಟಿಕೆಟ್ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ರೈಲ್ವೆ ಹೊಸ ನಿಯಮಗಳನ್ನು ಹೊರಡಿಸಿದ್ದು, ಇದು ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ.
ನೀವು ನಿಮ್ಮ ಟಿಕೆಟ್ ಅನ್ನು ನಿಮ್ಮ ಪೋಷಕರು, ಒಡಹುಟ್ಟಿದವರು, ಮಗ-ಮಗಳು ಅಥವಾ ಹೆಂಡತಿಯಂತಹ ನಿಮ್ಮ ಕುಟುಂಬದ ಸದಸ್ಯರ ಹೆಸರಿಗೆ ಮಾತ್ರ ವರ್ಗಾಯಿಸಬಹುದು. ಇದರರ್ಥ ನಿಮ್ಮ ಆಪ್ತ ಸ್ನೇಹಿತರು ನಿಮ್ಮ ಟಿಕೆಟ್‌ನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ.

ನಿಮ್ಮ ಟಿಕೆಟ್ ಅನ್ನು ಇನ್ನೊಬ್ಬರಿಗೆ ವರ್ಗಾಯಿಸಬಹುದಾದ ನಿಯಮವನ್ನು ರೈಲ್ವೆ ಜಾರಿಗೆ ತಂದಿದೆ. ಅಂದರೆ, ಪ್ರಯಾಣಿಕನು ತಾಯಿ, ತಂದೆ, ಸಹೋದರ, ಸಹೋದರಿ, ಮಗ, ಮಗಳು, ಗಂಡ, ಹೆಂಡತಿಯಂತಹ ಕುಟುಂಬದ ಸದಸ್ಯರಿಗೆ ತನ್ನ ಟಿಕೆಟ್ ಅನ್ನು  ವರ್ಗಾಯಿಸಬಹುದು.

Powered by Blogger.