ಉಡುಪಿ:ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತಪಟ್ಟ ನಿಖಿತಾ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಧನ ಹಸ್ತಾಂತರ.!!
ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ ನಿಖಿತಾ ಅವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ 20 ಲಕ್ಷ. ರೂ.ಗಳ ಪರಿಹಾರ ಧನವನ್ನು ಹಸ್ತಾಂತರ ಮಾಡಿದೆ.
ನಿಖಿತ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಈ ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಎಂದು ನಿಖಿತಾ ಅವರ ಪರ ನ್ಯಾಯದ ಕೂಗನ್ನು ಎಬ್ಬಿಸಿದ ಅಖಿಲಾ ಭಾರತ ವಿದ್ಯಾರ್ಥಿ ಪರಿಷತ್, ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು, ಪ್ರಜ್ಞಾವಂತ ಹೋರಾಟದ ಮನಸ್ಸುಗಳ ನಿರಂತರ ಹೋರಾಟದ ಫಲವೇ ಇಂದು ನಿಖಿತಾ ಅವರ ಕುಟುಂಬಕ್ಕೆ ಸಹಾಯಧನದ ನೆರವು ಸಿಕ್ಕುವಂತೆ ಮಾಡಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಕುಟುಂಬದ ನೋವಿಗೆ ಸ್ಪಂದಿಸಿದ ಆಸ್ಪತ್ರೆ ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳ ಸ್ಪಂದನೆ ಶ್ಲಾಘನೀಯ. ಈ ಬಗ್ಗೆ ಧ್ವನಿಯೆತ್ತಿ ಸಂಘಟಿತವಾದ ಅಳಲು ತೋಡಿಕೊಂಡು ಸಾಮಾಜಿಕ ನ್ಯಾಯ ಕೊಡಿಸಲು ಪಣತೊಟ್ಟಿದ್ದ ಸರ್ವರೂ ಅಭಿನಂದನರ್ಹರು. ಸಂಘ ಸಂಸ್ಥೆ ಸಂಘಟನೆಗಳು ಈ ರೀತಿಯ ಸಮಾಜಮುಖಿ ಕೆಲಸಗಳನ್ನ ಮಾಡಬೇಕು. ನೊಂದವರ ಕಣ್ಣೀರು ಒರೆಸಬೇಕು ಎಂದರು.

Post a Comment