".

Header Ads

ಕುಲಾಲ ಸಂಘ ಮುಂಬಯಿ ಇದರ ವತಿಯಿಂದ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ.





ವಿಧ್ಯೆ ಮನುಷ್ಯನನ್ನು ಈ ಸಮಾಜದಲ್ಲಿ ಸುಸಂಸ್ಕೃತನಾಗಿ ಮಾಡುತ್ತದೆ: ರಘು ಮೂಲ್ಯ ಪಾದಬೆಟ್ಟು

ಮುಂಬಯಿ: ಕುಲಾಲ ಸಂಘ ಮುಂಬಯಿ ಪ್ರತಿ ವರ್ಷದಂತೆ ಈ ವರ್ಷವೂ 2023-24 ಸಾಲಿನಲ್ಲಿ 1ರಿಂದ 10 ನೇ ಕ್ಲಾಸ್ ನ ವಿಧ್ಯಾರ್ಥಿಗಳಿಗೆ  ಜುಲೈ 15ರಂದು  ಶನಿವಾರ  ಪೋರ್ಟ್  ನಲ್ಲಿರುವ ಕುಲಾಲ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ರಾಘು ಮೂಲ್ಯ ಪಾದೆ ಬೆಟ್ಟು ,ಗೌರವ ಅಧ್ಯಕ್ಷರು ದೇವದಾಸ್ ಕುಲಾಲ್, ಉಪಾಧ್ಯಕ್ಷರಾದ ಡಿ ಐ ಮೂಲ್ಯ,ವಿಧ್ಯಾರ್ಥಿ  ಬಳಗದ ಕಾರ್ಯಾಧ್ಯಕ್ಷರಾದ ಆನಂದ ಕುಲಾಲ್, ಜ್ಯೋತಿ ಕೋ ಅಪ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲಿಯಾನ್ಇವರು  ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಘದ ಅಧ್ಯಕ್ಷರು ರಾಘು ಮೂಲ್ಯ ರವರು ಮಾತಾಡುತ್ತ ಇದು ಹಿರಿಯರಿಂದ ಕಾರ್ಯಗತವಾಗಿ ಬಂದಂತಹ ಈ ವಿಧ್ಯಾರ್ಥಿ ವೇತನ ಮತ್ತು ದತ್ತು ಸ್ವೀಕಾರ ವನ್ನು ನಮ್ಮ ವಿಧ್ಯಾರ್ಥಿಗಳಿಗೆ ಸಹಾಯ ಮಾಡುತ್ತ ಬರುತ್ತೇವೆ .ಕೇವಲ ವಿಧ್ಯೆ ಮನುಷ್ಯನನ್ನು ಈ ಸಮಾಜದಲ್ಲಿ ಸುಸಂಸ್ಕೃತನಾಗಿ ಮಾಡುತ್ತದೆ.ಅದರಿಂದ  ಇದರ ಉಪಯೋಗ ಪಡೆದ ಮಕ್ಕಳು ಮುಂದೆ ಬೆಳೆದು ವಿದ್ಯಾವಂತರಾಗಿ ಕೆಲಸ ಮತ್ತು ವ್ಯಾಪಾರದಿಂದ ಉನ್ನತಿ ಪಡೆದು ,ತುಳುನಾಡಿನ ಸಂಸ್ಕೃತಿ ಒಳ್ಳೆಯ ಆಚಾರ - ವಿಚಾರಗಳನ್ನು ತಿಳಿದು  ತಂದೆ ತಾಯಿಯವರ ಹೆಸರು , ಹಾಗೂ ಕುಲಾಲ ಸಂಘವನ್ನು  ಮುಂದೆ  ಉನ್ನತ ಮಟ್ಟಕ್ಕೆ ಬೆಳೆಸಬೇಕು .ವಿದ್ಯಾರ್ಜನೆ ಎಲ್ಲ ಮಕ್ಕಳಿಗೆ ಅತೀ ಅವಶ್ಯಕ ಎಂಬ ದ್ಯೇಯದೊಂದಿಗೆ ನಾವು ಸಹಕಾರ ಮಾಡುತ್ತಲಿದ್ಧೇವೆ . ಎಂದು ವಿಧ್ಯಾರ್ಥಿ ಮತ್ತು ಪಾಲಕರಿಗೆ ತಿಳಿಸಿದರು.

ದೇವದಾಸ್ ಕುಲಾಲ್ ರವರು ಮಾತಾಡುತ್ತ ಮೋದ ಮೊದಲು ನಾವು ಪುಸ್ತಕ ವಿತರಣೆ ಮಾಡುತ್ತಿದ್ದೇವೆ .ಈಗ ಅದನ್ನು ಧನ ಸಹಾಯದ ಮೂಲಕ ಕೊಡುತ್ತಿದ್ದೇವೆ.ವಿದ್ಯಾದಾನ ಮಹದಾನ .ಅದರಿಂದ ಪ್ರತಿಯೊಬ್ಬರಿಗೂ ವಿದ್ಯೆಯು ಬಹಳ ಮುಖ್ಯ .ಭಾರತ ಹೇಗೆ ವಿಶ್ವದಲ್ಲಿ ಸೂಪರ್ ಪವರ್ ಆಗಿ ಬೆಳೆಯುತ್ತದೆಯೋ ,ಹಾಗೆ ಈಗಿನ ವಿಧ್ಯಾರ್ಥಿಗಳು ಭಾರತ ಪ್ರೀಯರಾಗಿ ,ಭಾರತದಲ್ಲಿ ಹೆಸರುವಾಸಿಯಾಗಿ ಬೆಳೆಯಬೇಕು. ಮೊಬೈಲ್ ನ ದುರುಪಯೋಗ ಮಾಡದೆ ವಿಧ್ಯಾಭ್ಯಾಸದ ಕಡೆಗೆ ಗಮನ ಕೊಟ್ಟು ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗಿ , ಕುಲಾಲ ಸಂಘದ ಎಳಿಗೆಗಾಗಿ ಶ್ರಮಿಸಬೇಕೆಂದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಜ್ಯೋತಿ ಕೋ ಅಪ್ ಕ್ರೆಡಿಟ್ ಸೊಸೈಟಿಯ  ಕಾರ್ಯ ಧ್ಯಕ್ಷ ಗಿರೀಶ್ ಬಿ ಸಾಲಿಯಾನ್ ಮಾತಾಡುತ್ತ ,  ವಿಧ್ಯಾರ್ಥಿ ವೇತನವು ಎಲ್ಲರಿಂದ ಧನ ಸಹಾಯ ಪಡೆದು ಅದನ್ನು ನಾವು ವಿದ್ಯಾರ್ಥಿವೇತನವನ್ನು ಕೊಡುತ್ತೇವೆ.ಇದು ಚಿಕ್ಕ ಮೊತ್ತವಾದರೂ , ಕುಲಾಲ ಮಂದಿರದಲ್ಲಿ ನೀಡಿದ ನೆರವು ನಿಮಗೆ ರಕ್ಷೆ ಆಗುತ್ತದೆ  ಎಂದು ತಿಳಿಯಬೇಕು.ಉತ್ತಮ ಸಮಾಜವನ್ನು ಮುನ್ನಡೆಸಲು ವಿಧ್ಯಾರ್ಥಿಗಳ ಪಾತ್ರ ದೊಡ್ಡದಾಗಿರುತ್ತದೆ.ಅದಕ್ಕಾಗಿ ನಮ್ಮ ಜ್ಯೋತಿ ಕೋ ಅಪ್ ಕ್ರೆಡಿಟ್ ಸೊಸೈಟಿ ವಿಧ್ಯಾರ್ಥಿಗಳಿಗೆ ವಿಧ್ಯಾ ಸಾಲವನ್ನು ಜ್ಯೋತಿ ಬ್ಯಾಂಕ್ ಕೊಡುತ್ತದೆ.ಅದರ ಉಪಯೋಗ ಪಡೆದು,ಕಲಿಯುವ ವರ್ಷದಲ್ಲಿ ಅದರ ಬಡ್ಡಿ ಮಾತ್ರ ಕಟ್ಟಲಿಕ್ಕೆ ನಂತರದ ವರ್ಷದಲ್ಲಿ ಅದರ ಸಾಲ ಮೊತ್ತವನ್ನು ಕಂತಿನ ಮುಖಾಂತರ ಕಟ್ಟಲಿಕ್ಕೆ ಇರುವುದು ,ಇದರ ಉಪಯೋಗ ಪಡೆದು ನಿಮ್ಮ ಉನ್ನತ ವಿದ್ಯಾಭ್ಯಾಸ ಮುಗಿಸಬಹುದು.ಎಂದು ಪಾಲಕರು ಮತ್ತು ಮಕ್ಕಳಿಗೆ ವಿನಂತಿಸಿದರು.

ಅಮೂಲ್ಯ ಸಂಪಾದಕರಾದ ಶಂಕರ್ ವೈ ಮೂಲ್ಯ ಮಾತಾಡುತ್ತ ,ವಿಧ್ಯೆ ಮತ್ತು ಜ್ಞಾನ ಇದು ನಮ್ಮ ಜೀವನದಲ್ಲಿ ಗಳಿಸಿರುವ ದೊಡ್ಡ ಆಸ್ತಿ ,ಇದು ಎಂದು ಅಳಿಯುದಿಲ್ಲ, ಕಳ್ಳ ಕಾಕರು ದೋಚದ ಆಸ್ತಿ . ಇದನ್ನು ಆದಷ್ಟು ಗಳಿಸಿ ಇಡಬೇಕು. ವಿದ್ಯೆಗಾಗಿ ಸಂಘವು ತುಂಬಾ ಶ್ರಮ ಪಡುತ್ತದೆ. ಚಿಕ್ಕ ಮೊತ್ತವಾದ ರೂ ವಿದ್ಯಾರ್ಥಿಗಳಿಗೆ ಪ್ರೋತ್ಸಾ ನೀಡುವ ನಿಟ್ಟಿನಲ್ಲಿ ನೀಡುತ್ತಿದ್ದೇವೆ.

ಯಾರ ಮನಸ್ಸನ್ನೂ ನೋಯಿಸದಂತೆ ಜೀವನವನ್ನು ಪ್ರೀತಿಸಬೇಕು.ಅದರಿಂದ ನಮ್ಮ ಪ್ರಗತಿಯಾಗುತ್ತದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ನಿಶ್ವರ್ತಾ ಭಾವನೆಯಿಂದ ಧನ ಸಹಾಯದಿಂದ ಈ ಕಾರ್ಯಕ್ರಮ ನಿರಂತರ ನಡೆಯುತ್ತದೆ.ಎಂದರು.

ಕಾರ್ಯದರ್ಶಿ ಕರುಣಾಕರ ಸಾಲಿಯಾನ್ ರವರು ಮಾತಾಡುತ್ತ ಸಂಘದ ಉದ್ಧೇಶ ಮಕ್ಕಳ ವಿದ್ಯಾಭ್ಯಾಸ ಅರ್ಧದಲ್ಲಿ ನಿಲ್ಲ ಬಾರದು ,ಎಂಬ ದ್ಯೇಯ ಯವನ್ನಿಟ್ಟು ಸಹಕಾರ ಮಾಡು ತ್ತಲಿದ್ಧೇವೆ. ಅದಕ್ಕೆ ಉದ್ಯಮಿಸುನಿಲ್ ಸಾಲಿಯಾನ್ ಮತ್ತು ನಮ್ಮ ಬಂದುಗಳ ನಿಸ್ವಾರ್ಥ ಸೇವೆಯಿಂದ ಸದಾ ಸಹಕಾರ ಸಿಗುತ್ತಿದೆ . ಬೇಕಾದಲ್ಲಿ ಇನ್ನೂ ಹೆಚ್ಚಿನ ಸಹಕಾರ ಸಿಗಬಹುದು .ಇದರ ಉಪಯೋಗ ನಮ್ಮ ವಿದ್ಯಾರ್ಥಿಗಳು ಪಡೆಯಬಹುದು. ಎಂದು ನುಡಿದರು.
 ಕಾರ್ಯಕ್ರಮದಲ್ಲಿ ಸುನಿಲ್ ಸಾಲಿಯಾನ್ ,ಸುಂದರ ಮೂಲ್ಯ ,ಸಂಜೀವ ಬಂಗೇರಾ, ಉಮೇಶ್ ಬಂಗೇರ,ರೇಣುಕಾ ಸಾಲಿಯಾನ್ ,ಆನಂದ್ ಬಿ ಮೂಲ್ಯ,ಸುನಿಲ್ ಕುಲಾಲ್ ,ಅಶೋಕ್ ಕುಲಾಲ್, ಶ್ರೀಧರ್ ದೋಗ್ರ ಬಂಗೇರಾ ,ನಾರಾಯಣ್ ಎಸ್ ಬಂಜನ್ ,ಆಶಿಶ್ ವಿ ಕರ್ಕೇರ, ಪ್ರಸಾದ ಎಸ್ ಮೂಲ್ಯ,ಸದಾನಂದ್ ಕುಲಾಲ್,ಸಂಜಯ್ ಕುಂದರ್,ಯೋಗೇಶ್ ಜಿ ಸಾಲಿಯಾನ್ ,ಗೋಪಾಲ್ ಸಿ ಕುಕ್ಯಾನ್,ರತ್ನಾಕರ್ ಬಂಜನ್. ಮಮತಾ ಜಿ ಸಾಲಿಯಾನ್, ಪ್ರೋ.ಉಮೇಶ್ ಕುಲಾಲ್ .ಕಮಲಾಕ್ಷಿ ಜೆ.ಮೂಲ್ಯ ಇವರು ಸಹಕರಿಸಿದರು.

ಅಂದಿನ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳ ಹೆಸರನ್ನು ಮತ್ತು ದಾನಿಗಳ ಹೆಸರನ್ನು ಕೋಶಾಧಿಕಾರಿ ಜಯ ಅಂಚನ್ ಯಾಚಿಸಿದರು.ಆರಂಭದಲ್ಲಿ ಕಾರ್ಯದರ್ಶಿ ಯವರು  ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು ,ಕೋಶಾಧಿಕಾರಿ ಜಯ ಅಂಚನ್ ವಿಧ್ಯಾರ್ಥಿಗಳ ಹೆಸರನ್ನು ಮತ್ತು ದಾನಿಗಳ ಹೆಸರನ್ನು ಯಾಚಿಸಿ ಅಭಿನಂದಿಸಿದರು .
Powered by Blogger.