ಮಲಾಡ್ ಕುರಾರ್ ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ."ಶ್ರೀ ಶನೀಶ್ವರ ಮಹಾತ್ಮೆ" ಯಕ್ಷಗಾನ ತಾಳಮದ್ದಳೆ
ತಾಳಮದ್ದಲೆ ತಂಡ ಜನರಲ್ಲಿ ದೇವರ ಭಕ್ತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ : ಶ್ರೀನಿವಾಸ ಸಾಪಲ್ಯ
ಮುಂಬಯಿ - ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಕುರಾರ್ ವಿಲೇಜ್ ಸುವರ್ಣ ಮಹೋತ್ಸವದಂಗವಾಗಿ ನಡೆದ ಜುಲೈ ತಿಂಗಳ ಧಾರ್ಮಿಕ ಕಾರ್ಯಕ್ರಮವು ಜುಲೈ 16 ರವಿವಾರ ಶ್ರೀ ಶನೀಶ್ವರ ಭಕ್ತವೃಂದ ಪಕ್ಷಿಕೆರೆ ಮಂಗಳೂರು ಇವರಿಂದ "ಶ್ರೀ ಶನೀಶ್ವರ ಮಹಾತ್ಮೆ" ಎಂಬ ಪೌರಾಣಿಕ ಕಥೆಯನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು.
ಕಾರ್ಯಕ್ರಮ ಆರಂಭದ ಮುನ್ನ ದೇವಸ್ಥಾನದ ಪ್ರಧಾನ ಅರ್ಚಕರಾದ ತುಂಗಾ ರಾಘವೇಂದ್ರ ಭಟ್ ಇವರಿಂದ ದೇವರಿಗೆ ಆರತಿ ಬೆಳಗಿ ನಂತರ ದೀಪ ಪ್ರಜ್ವಲನೆ ಮಾಡಲಾಯಿತು. ಈ ತಿಂಗಳ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿದ್ದ ಮಾಲಾಡ್ ಜ್ಯೋತಿ ಹೋಟೆಲ್ ಮಾಲಕರಾದ ಸುರೇಶ್ ಶೆಟ್ಟಿಯವರನ್ನು ಶಾಲು ಫಲಪುಷ್ಪ ಹಾಗೂ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು. ಊರಿನ ಪ್ರಬುದ್ಧ ಕಲಾವಿದರೊಂದಿಗೆ ಅತಿಥಿ ಭಾಗವತರಾಗಿ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯರು ತಾಳಮದ್ದಳೆಗೆ ಇನ್ನಷ್ಟು ಮೆರಗು ನೀಡಿದರು. ತಾಳಮದ್ದಳೆ ತಂಡದ ಹೆಬ್ರಿ ಗಣೇಶ್. ಪದ್ಮನಾಭ ಶೆಟ್ಟಿಗಾರ್. ಸದಾನಂದ ಶೆಟ್ಟಿಗಾರ್ ಮಿಜಾರ್.
ಅರ್ಥದಾರಿಗಳಾಗಿ ಕದ್ರಿ ನವನೀತ ಶೆಟ್ಟಿ. ವಿಜಯಕುಮಾರ್ ಶೆಟ್ಟಿ. ಮೈಲೋಟ್ಟು ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು. ಸದಾಶಿವ ಆಳ್ವ ತಲಪಾಡಿ. ಗಣೇಶ ಶೆಟ್ಟಿ ಕನ್ನಡಿಕಟ್ಟೆ. ಪ್ರಸನ್ನ ಶೆಟ್ಟಿ ಅತ್ತೂರು. ಇವರೆಲ್ಲರನ್ನು ಶಾಲು ಪುಷ್ಪಗುಚ್ಛದೊಂದಿಗೆ ದೇವಸ್ಥಾನದ ಪದಾಧಿಕಾರಿಗಳು ಗೌರವಿಸಿದರು.
ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ ಮಾತಾಡುತ್ತಾ ಶನೇಶ್ವರ ಭಕ್ತ ವಂದ ಪಕ್ಷಿಗೆರೆ ತಂಡ ದೇಶ ವಿದೇಶಗಳಲ್ಲಿ ಜನರಲ್ಲಿ ದೇವರ ಭಕ್ತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಇದು ನಮ್ಮೆಲ್ಲರ ಸೌಭಾಗ್ಯ ಈ ತಂಡದ ಕಲಾವಿದರ ಹೆಸರು ಇನ್ನಷ್ಟು ಪ್ರಸಿದ್ಧಿಯನ್ನು ಪಡೆಯಲಿ ಅವರ ಕುಟುಂಬದವರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಕೆ ಮಾಡಿದರು.
ಅನ್ನದಾನದ ಸೇವೆಯನ್ನು ಸಂತೋಷ್ ಭಂಡಾರಿ ಗೊರೆಗಾವ್ ಇವರು ವಹಿಸಿದ್ದರು ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರದ ರಮೇಶ್ ಆಚಾರ್ಯ. ಕಾರ್ಯದರ್ಶಿ ಸಂತೋಷ್ ಶೆಟ್ಟಿ ಕೋಶಾಧಿಕಾರಿ ಹರೀಶ್ ಸಾಲ್ಯಾನ್. ಉದ್ಯಮಿ ವಿಶ್ವನಾಥ್ ಶೆಟ್ಟಿ ಪೆತ್ರಿ. ಹೋಟೆಲ್ ಉದ್ಯಮಿ ಹರೀಶ್ ಶೆಟ್ಟಿ ಮಹಿಳಾ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್. ನಿತ್ಯಾನಂದ ಕೋಟ್ಯಾನ್ ಹಾಗೂ ಸಮಿತಿಯ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.





Post a Comment