ದೇವಿಯ ಬಿಂಬಪುನಃ ಪ್ರತಿಷ್ಠೆ , ಬ್ರಹ್ಮಕಲಶೋತ್ಸವ ಸಮಿತಿಯ ಗೌ.ಅಧ್ಯಕ್ಷರಾಗಿ ಹರ್ಲಾಡಿ ರಘುವೀರ ಶೆಟ್ಟಿ ನಲ್ಲೂರು, ಅಧ್ಯಕ್ಷರಾಗಿ ರಘುನಾಥ್ ಎನ್. ಶೆಟ್ಟಿ ಆಯ್ಕೆ
ಮುಂಬಯಿ ಉಪನಗರ ಗೊರೆಗಾವ್ (ಪ) ಮೋತಿಲಾಲ್ ನಗರದಲ್ಲಿ ಇಂದಿಗೆ 50 ವರ್ಷಗಳ ಪೂರ್ವದಲ್ಲಿ ಸಾತ್ ರಾಸ್ತಾದ ಶ್ರೀ ಅಂಬಿಕಾ ಅನ್ನ ಪೂರ್ಣೇಶ್ವರಿ ದೇವಸ್ಥಾನದ ಶ್ರೀ ನಿರಂಜನ ಸ್ವಾಮೀಜಿಯವರ ಶಿಷ್ಯರಾದ ಶ್ರೀ ಶ್ಯಾಮಾನಂದಸ್ವಾಮೀಜಿಗಳಿಂದ ಸಂಸ್ಥಾಪಿಸಲ್ಪಟ್ಟ ಶ್ರೀ ಶಾಂತದುರ್ಗಾದೇವಿ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿ ಮುಂಬೈಯ ಪ್ರತಿಷ್ಠಿತ ಉದ್ಯಮಿ ಹಾಗೂ ಕೊಡುಗೆೈದಾನಿ ಹುರ್ಲಾಡಿಶ್ರೀ ರಘುವೀರ ಶೆಟ್ಟಿ ನಲ್ಲೂರು ಹಾಗೂ ಅಧ್ಯಕ್ಷರಾಗಿ ಸಂಘಟಕ ರಘುನಾಥ್ ಎನ್ ಶೆಟ್ಟಿ ಕಾಂದಿವಿಲಿ ಆಯ್ಕೆಯಾಗಿರುತ್ತಾರೆ.
ತಾ. 24.6.2023ನೇ ಶನಿವಾರದಂದು ದೇವಸ್ಥಾನದ ಆವರಣದಲ್ಲಿ ಆಡಳಿತ ವಿಶ್ವಸ್ಥರಾದ ಉದಯ ಎಸ್ ಸಾಲಿಯನ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾಲೋಚನಾ ಸಭೆಯಲ್ಲಿ, ಡಿಸೆಂಬರ್ ತಿಂಗಳಲ್ಲಿ ಶ್ರೀಕ್ಷೇತ್ರದ ಸುವರ್ಣ ಮಹೋತ್ಸವ, ಶ್ರೀ ದೇವಿಯ ಬಿಂಬ ಪುನಃ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ, ಸಾನ್ನಿಧ್ಯದಲ್ಲಿರುವ ಪಂಜುರ್ಲಿ, ವರ್ತೆ, ಮಂತ್ರದೇವತೆ, ಕಲ್ಕುಡ ಹಾಗೂ ಗುಳಿಗ ದೈವಗಳ ನೇಮೋತ್ಸವ ಹಾಗೂ ಇತರ ಧಾರ್ಮಿಕ ಮತ್ತು ಸಾಂಸ್ಕೃತಿಕಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಅದರಲ್ಲಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಪ್ರಾರಂಭದಲ್ಲಿ ಕ್ಷೇತ್ರದ ಹಿರಿಯರಾದ ರವೀಂದ್ರ ಸಾಲಿಯಾನ್ ರವರು ಶ್ರೀದೇವಿಯ ಸಾನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಉದಯ ಯಸ್ ಸಾಲಿಯನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕ್ಷೇತ್ರದಸ್ಥಾಪನೆ,ನಡೆದು ಬಂದ ದಾರಿ, ಮುಂದಿನ ಯೋಜನೆ, ಯೋಚನೆಗಳು ಹಾಗೂ ಇದೇ ಬರುವ ಡಿಸೆಂಬರ್ ತಿಂಗಳಲ್ಲಿನಡೆಯಲಿರುವ ಬ್ರಹ್ಮಕಲಶೋತ್ಸವದ ಸಮಗ್ರ ಚಿತ್ರಣವನ್ನು ಸಭೆಯ ಮುಂದಿಟ್ಟರು.
ಬ್ರಹ್ಮ ಕಲಶೋತ್ಸವದಕಾರ್ಯಕ್ರಮಗಳು ಡಿಸೆಂಬರ್ ತಿಂಗಳ 25 ನೇ ತಾರೀಕಿನಂದು ಪ್ರಾರಂಭವಾಗಿ 29 ನೆಯ ತಾರೀಕಿನವರೆಗೆ ವಿವಿಧಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.
ಕ್ಷೇತ್ರವನ್ನು ನಿರಂತರವಾಗಿ ದೈವಿಕ ಸಂವೇದನೆಗಳೊಂದಿಗಿನ ಧನಾತ್ಮಕವಾದ ಶಕ್ತಿಯ ವಾತಾವರಣವನ್ನು ನಿರ್ಮಿಸಲು, ಪ್ರತಿಮಂಗಳವಾರದಂದು ಸಂಜೆ ಗಂಟೆ 5.00 ರಿಂದ 7.00 ರವರೆಗೆ , ಮುಂಬಯಿಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು.
ಸಭೆಗೆ ಆಗಮಿಸಿದ ಸದ್ಭಕ್ತರುಸಂದರ್ಭೋಚಿತವಾಗಿ ಮಾತನಾಡಿ ಸೂಕ್ತ ಸಲಹೆ ಸೂಚನೆಗಳನ್ನಿತ್ತರು. ಈ ಕಾರ್ಯಗಳನ್ನು ಸುಸಾಂಗವಾಗಿನೆರವೇರಿಸಿಕೊಂಡು ಹೋಗಲು ಸುವರ್ಣ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯೊಂದನ್ನು ರಚಿಸಲಾಯಿತು. ಹಾಗೆಯೇ ಈ ಅದ್ದೂರಿಯ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರೂ ಸೇವಾಕಾರ್ಯಗಳಲ್ಲಿಪಾಲುಗೊಳ್ಳಲಿರುವುದರಿಂದಾಗಿ ಮಹಿಳಾ ವಿಭಾಗವನ್ನೂ ರಚಿಸಲಾಯಿತು. ನೂತನವಾಗಿ ಆಯ್ಕೆಗೊಂಡ ಗೌರವಅಧ್ಯಕ್ಷ ಹಾಗೂ ಅಧ್ಯಕ್ಷರು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ತಾವೆಲ್ಲರೂ ನೀಡಿದ ಈ ದೊಡ್ಡ ಜವಾಬ್ದಾರಿಗಳನ್ನು ನಾವುಶ್ರೀ ಶಾಂತದುರ್ಗಾ ಮಾತೆಯ ವರಪ್ರಸಾದವೆಂದು ಸ್ವೀಕರಿಸಿದ್ದೇವೆ. ಯಾವುದೇ ಕೆಲಸ ಒಬ್ಬಿಬ್ಬರಿಂದ ಮಾಡಲುಸಾಧ್ಯವಿಲ್ಲಾ. ನಾವು ಎಲ್ಲರೂ ಒಗ್ಗಟ್ಟಾಗಿ ನಿಸ್ವಾರ್ಥ ಭಾವದಿಂದ ಮಾಡುವ ಸೇವೆಗಳೆಲ್ಲವೂ ದೇವರಿಗೆ ಸಮರ್ಪಿತ ಎಂದುಮಾಡಿಕೊಂಡು ಹೋದರೆ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ದೇವರ ಮುಂದೆ ದೊಡ್ಡವ ಸಣ್ಣವ ಎಂಬ ಬೇಧವಿಲ್ಲಾ. ನಾವೆಲ್ಲರೂ ದೇವರ ಸೇವೆಗಾಗಿ ಕ್ಷೇತ್ರದಲ್ಲಿ ಒಟ್ಟಾದವರು ಎಂದು ತಿಳಿದುಕೊಂಡು ಮುಂದುವರಿಯೋಣ. ಅದಕ್ಕೆ ತಮ್ಮೆಲ್ಲರಸಂಪೂರ್ಣ ಸಹಕಾರವಿರಲಿ ಎಂದರು.
ಬ್ರಹ್ಮ ಕಲಶೋತ್ಸವ ಸಮಿತಿ
ಶ್ರೀ ಸುವರ್ಣ ಬಾಬಾ , ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ, ಪೊವಾಯ್,
(ಆಧ್ಯಾತ್ಮ ಗುರುಗಳು ಹಾಗೂ ಮಾರ್ಗ ದರ್ಶಕರು)
ಪದ್ಮಾವತಿ ಯಸ್ ಸಾಲ್ಯಾನ್
(ಆಡಳಿತ ವಿಶ್ವಸ್ಥರು)
ಉದಯ ಯಸ್ ಸಾಲಿಯಾನ್
(ಆಡಳಿತ ವಿಶ್ವಸ್ಥರು)
ಹುರ್ಲಾಡಿ ರಘುವೀರ ಶೆಟ್ಟಿ ನಲ್ಲೂರು
(ಗೌ. ಅಧ್ಯಕ್ಷರು )
ರಘುನಾಥ ಯನ್ ಶೆಟ್ಟಿ, ಕಾಂದಿವಲಿ
(ಅಧ್ಯಕ್ಷರು)
ಭೋಜ ಯಸ್ ಶೆಟ್ಟಿ , ಕೇದಗೆ
(ಉಪಾಧ್ಯಕ್ಷರು)
ಚಂದ್ರಶೇಖರ ಜೆ ಸಾಲಿಯಾನ್
(ಗೌ. ಕಾರ್ಯದರ್ಶಿ)
ಸುಮಂತ್ ಕುಂದರ್
(ಜೊತೆ ಕಾರ್ಯದರ್ಶಿ)
ಪ್ರವೀಣ್ ಪುತ್ರನ್
(ಕೋಶಾಧಿಕಾರಿ)
ಸಂತೋಷ್ ಕೆ ಶೆಟ್ಟಿ
(ಜೊತೆ ಕೋಶಾಧಿಕಾರಿ)
ಶ್ರೀ ರವೀಂದ್ರ ಬಿ ಸಾಲಿಯಾನ್
(ಹಿರಿಯ ಸಲಹೆಗಾರರು)
ಪ್ರಸಾದ್ ಸಾಲಿಯಾನ್ ಕಲ್ಯ
(ಧಾರ್ಮಿಕ ಸಲಹೆಗಾರರು)
ರಾಜಾರಾಮ್ ಎ ಪುಜಾರೆ
(ಸಲಹೆಗಾರರು)
ರಾಜೇಶ್ ಶಿರ್ಕೆ
(ಸಲಹೆಗಾರರು)
ವಿಷ್ಣು ರಾಣೆ
(ಸಲಹೆಗಾರರು)
ಧರ್ಮಣ್ಣ ಶೆಟ್ಟಿ
(ಸಲಹೆಗಾರರು)
ದತ್ತಾ ಕಾನ್ವಿಲ್ಕರ್
(ಸಲಹೆಗಾರರು)
ಕಾರ್ಯಕಾರಿ ಸಮಿತಿ ಸದಸ್ಯರು
ವಿನಯ ಎ ಪೂಜಾರಿ
ಗೋಲು ಯಸ್ ಶುಕ್ಲ
ಓಂಕಾರ್ ಜಿ ಶೆಟ್ಟಿ
ರಾಹುಲ್ ಸಿ ಸಾಲಿಯಾನ್
ಅಕ್ಷಯ್ ಯಸ್ ಮೊಗವೀರ
ಬಾಲಕೃಷ್ಣ ಆಚಾರ್ಯ
ಪ್ರಸಾದ್ ಆರ್ ಶೆಟ್ಟಿ
ಸುಧೀರ್ ಆರ್ ಕುಂದರ್
ಮಹಿಳಾ ವಿಭಾಗ
ನ್ಯಾ. ವಿಹಾ ವಿ ರಾಣೆ
(ಕಾರ್ಯಾಧ್ಯಕ್ಷೆ )
ಅನುರಾಧಾ ಯಸ್ ಕರ್ಕೇರ
(ಕಾರ್ಯದರ್ಶಿ)
ವೈಭವಿ ವಿ ವೈರಾಳೆ
(ಕೋಶಾಧಿಕಾರಿ)
ಕಾರ್ಯಕಾರಿ ಸಮಿತಿ ಸದಸ್ಯರು
ರಶ್ಮಿ ಆರ್ ಪುಜಾರೆ
ಜ್ಯೋತಿ ಯು ಸಾಲಿಯಾನ್.
ರಶ್ಮಿ ಆರ್ ಶಿರ್ಕೆ
ಪ್ರಿಯಾಲ್ ಸಿ ಬಾಂಡ್ಬೆ
ನಿರ್ಮಲಾ ಕಾಂಬ್ಳೆ
ಅಶ್ವಿನಿ ಯು ಅಂಗಾರ್ಕೆ
ರಂಜಿತಾ ಯಸ್ ಶೆಟ್ಟಿ
ಸುಮಿತ್ರಾ ಯಸ್ ಕುಂದರ್
ಸುಮಿತಾ ಸಿ ಸಾಲಿಯಾನ್
ವಿಮಲಾ ಯಸ್ ಕುಂದರ್
ವೇದಾ ಜಿ ಶೆಟ್ಟಿ
ಲಕ್ಷ್ಮಿ ಪಾಂಡೆ.
Post a Comment