ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ದ ವರದಿ ಮಾಡದಂತೆ ಮಾಧ್ಯಮಗಳಿಗೆ ಕೋರ್ಟ್ ತಡೆಯಾಜ್ಞೆ…!!
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ವರದಿ ಮಾಡದಂತೆ ಹಾಗೂ ಈಗಾಗಲೇ ಮಾಡಿರುವ ವರದಿಗಳನ್ನು ತೆಗೆದು ಹಾಕುವಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಈ ಸಂಬಂಧ ವಾದಿಗಳಾದ ಶೀನಪ್ಪ ಮತ್ತಿತರರು ಸಲ್ಲಿಸಿರುವ ಅಸಲು ದಾವೆಯನ್ನು ಸಿಸಿಎಚ್–11ನೇ ನ್ಯಾಯಾಲಯ ವಿಚಾರಣೆ ನಡೆಸಿ ಇದೇ 19ರಂದು ಈ ಕುರಿತಂತೆ ಆದೇಶಿಸಿದೆ.ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ–ಟ್ಯೂಬ್, ಟಿ.ವಿ.ಚಾನೆಲ್ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಅಥವಾ ಮಾತನಾಡಬಾರದು‘ ಎಂದು ನಿರ್ಬಂಧಿಸಿ ಆದೇಶಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಬಾರಿ ಅಕ್ರೋಶ ವ್ಯಕ್ತಪಡಿಸಿದ್ದಾರೆ .
ಕೋರ್ಟ್ ನಿಜವಾದ ಆರೋಪಿಯನ್ನು ಹಿಡಿಯುವಲ್ಲಿ ವಿಫಲ ಆಗಿದೆ ಅಂತ ಏನು ಕೋರ್ಟ್ ಹೇಳಲ್ಲ ? ಇದು ನ್ಯಾಯಾಲಯಕ್ಕೆ ಆದ ಅವಮಾನ ಅಲ್ಲವೇ ? ಹಾಗಾದರೆ ಕೋರ್ಟ್ ಅನ್ನು ಕೂಡ ಹೆಗ್ಡೆಯವರು ಖರೀದಿ ಮಾಡಿದ್ದರಾ ? ಹೋರಾಟ ನ್ಯಾಯ ಪರ್ವಾಗಿ ಹೋಗುತ್ತಿದೆ ಅದಕ್ಕೆ ಇಂಥ ಕಾನೂನು ತಂದಿದ್ದಾರೆ.
ಅಲ್ಲಿ ಬಂದ ಭಕ್ತಾದಿಗಳಿಗೆ ನ್ಯಾಯ ಕೊಡಿಸುವವರು ಅವ್ರ ಊರಿನಲ್ಲಿ ಆದ ಅತ್ಯಾಚಾರ , ಕೊಲೆಗೆ ನ್ಯಾಯ ಕೊಡಿಸಕ್ಕೆ ಆಗದವರು ಯಾವ ಧರ್ಮ ದ ಅಧಿಕಾರಿ ? ಕೊಡುವ ಹೇಳಿಕೆಯಲ್ಲಿಯೇ ಗೊತ್ತಾಗುತ್ತೆ ಅಲ್ಲವೇ ?

Post a Comment