ಉಡುಪಿ : ಖಾಸಗಿ ನೇತ್ರ ಚಿಕಿತ್ಸಾಲಯ, ನರ್ಸಿಂಗ್ ಹೋಮ್‌ನ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಚಿತ್ರಿಸಿ ವೀಡಿಯೋ ವೈರಲ್ ಮಾಡುತ್ತಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರು
ಖಾಸಗಿ ನೇತ್ರ ಚಿಕಿತ್ಸಾಲಯ ಹಾಗೂ ನರ್ಸಿಂಗ್ ಹೋಮ್‌ನ ಹೆಂಗಸರ ಶೌಚಾಲಯದಲ್ಲಿ ಮೊಬೈಲ್ ಫೋನ್ ಅಡಗಿಸಿಟ್ಟು ವೀಡಿಯೋ ಚಿತ್ರಿಸಿ ವೈರಲ್ ಮಾಡುತ್ತಿದ್ದ ಮೂವರು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.
ಮುಸ್ಲಿಂ ಹುಡುಗಿಯರು ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದಾಗ ಶೂಟಿಂಗ್ ಮಾಡುತ್ತಿದ್ದರು. ನಂತರ ಅದನ್ನು ಉಚ್ಚಿಲದ ಯುವಕನೊಬ್ಬನಿಗೆ ಕಳುಹಿಸುತ್ತಿದ್ದರು. ಆತ ಅದನ್ನು ವಾಟ್ಸಪ್ ಗ್ರೂಪ್ ಮತ್ತಿತರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದ. ಇದು ಗೊತ್ತಾಗಿ ರೊಚ್ಚಿಗೆದ್ದ ಹಿಂದು ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತದ ಗಮನಕ್ಕೆ ತಂದಿದ್ದಾರೆ. ಎರಡು ಕೋಮಿನ ವಿದ್ಯಾರ್ಥಿನಿಯರ ನಡುವೆ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಅನಂತರ ಆಡಳಿತ ಮಂಡಳಿ ಮಧ್ಯ ಪ್ರವೇಶಿಸಿ ವಿದ್ಯಾರ್ಥಿನಿಯರಿಂದ ಮುಚ್ಚಳಿಕೆ ಬರೆಸಿಕೊಂಡು ವೀಡಿಯೋ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದೆ. ನರ್ಸಿಂಗ್ ಹೋಮ್‌ಗೆ ಈ ವಿದ್ಯಾರ್ಥಿನಿಯರು ಕಲಿಯುವ ಸಲುವಾಗಿ ಬರುತ್ತಿದ್ದರು ಎನ್ನಲಾಗಿದೆ.
ಹಿಂದು ಸಂಘಟನೆಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ಲವ್ ಜಿಹಾದ್ ಮಾದರಿ ಕೃತ್ಯ ಎಂದು ಆರೋಪಿಸಿ ಸಮಗ್ರ ತನಿಖೆಗೆ ಒತ್ತಾಯಿಸಿವೆ. ಕಳೆದ ವರ್ಷ ಉಡುಪಿಯ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಶುರುವಾಗಿ ಇಡೀ ದೇಶಕ್ಕೆ ಹಬ್ಬಿತ್ತು. ಕೆಲವು ದುಷ್ಕರ್ಮಿಗಳ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರು ಹಿಜಾಬ್ ವಿವಾದ ಶುರು ಮಾಡಿದ್ದಾರೆ ಎನ್ನಲಾಗಿತ್ತು. ಮುಸ್ಲಿಮ್ ಯುವತಿಯರನ್ನು ಬಳಸಿಕೊಂಡು ಹಿಂದು ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸುವ ಲೇಡಿ ಗ್ಯಾಂಗ್ ಕರಾವಳಿಯಲ್ಲಿ ಇದೆ ಎಂದು ಹಿಂದು ಸಂಘಟನೆಗಳು ಹೇಳುತ್ತಿವೆ.

Post a Comment