ತೀಯಾ ಸಮಾಜ ಬೆಂಗಳೂರು, 20 ನೇ ಸರ್ವ ಸದಸ್ಯರ ಮಹಾ ಸಭೆ
ಮುಂಬಯಿ : ತೀಯಾ ಸಮಾಜ ಬೆಂಗಳೂರು, ಇದರ 20 ನೇ ವರ್ಷದ ಸರ್ವ ಸದಸ್ಯರ ಮಹಾ ಸಭೆಯನ್ನು ಜು, 16ರಂದು ವಿಲ್ಸನ್ ಗಾರ್ಡನ್ ಕ್ಲಬ್ ನಲ್ಲಿ ನಡೆಸಲಾಯಿತು. ಸಭಾ ಕಾರ್ಯಕ್ರಮಕ್ಕಿಂತ ಮುಂಚೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಗುರು ಪೂಜೆ ಹಾಗೂ ಭಗವತಿ ಪೂಜೆಯನ್ನು ನೇರವೇರಿಸಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ರವೀಂದ್ರನಾಥ ಬಳ್ಳೂರು ಹಾಗು ಅತಿಥಿಗಳಾಗಿ ಸದಾಶಿವ ಉಳ್ಳಾಲ್ ಹಾಗು ರಮೇಶ್ ಬಂಗೇರ ಉಪ ಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಚಂದ್ರಾವತಿ ಭೋಜ ಕೋಟ್ಯಾನ್, ಹಾಗೂ ಕುಮಾರಿ ಹೇಮಾ ಸುವರ್ಣ ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕ ಸಭೆಯಲ್ಲಿ SSLC, PUC ಹಾಗು ಪದವಿ ಪರೀಕ್ಷೆಯಲ್ಲಿ
ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ಹಾಗೂ ಫಲಕದೊಂದಿಗೆ ಸನ್ಮಾನಿಸಲಾಯಿತು. 2022 ರಲ್ಲಿನಡೆದ ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಭೆಯ ಅಧ್ಯಕ್ಷ ತೆಯನ್ನು ಸಂಘದ ಅಧ್ಯಕ್ಷರಾದ ಸುಕುಮಾರ್ ಅವರು ವಹಿಸಿದ್ದರು. ಸಂಘದ ಕಾರ್ಯದರ್ಶಿ ಸದಾನಂದ ಅವರು ವಾರ್ಷಿಕ ವರದಿಯನ್ನು ಓದಿದರು. ಸಂಘದ ಕೋಶಾಧಿಕಾರಿ ಹರೀಶ್ ಅವರು ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು.
ಸಮಾಜದ ಯುವ ವಿಭಾಗದ ನೂತನ ಅಧ್ಯಕ್ಷರಾಗಿ ಶಿವ ಪ್ರಸಾದ್ ಮತ್ತು ಕಾರ್ಯದರ್ಶಿಯಾಗಿ ಚಂದ್ರ ಬೆಳ್ಚಡ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಪೂರ್ಣಿಮಾ ಶರತ್ ಮತ್ತು ಕಾರ್ಯದರ್ಶಿಯಾಗಿ ಡಾ. ಪ್ರಕ್ರತಿ ಶ್ರೀನಾಥ್ ಆಯ್ಕೆಯಾಗಿದ್ದಾರೆ.
ಮಹಾ ಸಭೆಯ ನಂತರ ಸಾಂಸ್ಕೃತಿಕ ಪ್ರಸ್ತುತಿ ಅಂಗವಾಗಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾಸಾರಥಿ ತೋನ್ಸೆ ಪುಷ್ಕಳ್ ಕುಮಾರ್ ಅವರಿಂದ ಶ್ರೀಕೃಷ್ಣ ತುಲಾಭಾರ ಹರಿಕಥಾ ಸತ್ಸಂಗ ನಡೆಯಿತು.
ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಸಮಾಜದ ಪುಟಾಣಿಗಳಿಂದ ಹಾಗೂ ಸದಸ್ಯರಿಂದ ವಿವಿಧ ಕಲಾ ಪ್ರದರ್ಶನ ನಡೆಯಿತು.



Post a Comment