".

Header Ads

ನಲ್ಲಸೋಪಾರ ಶ್ರೀ ಶನೇಶ್ವರ ದೇವಸ್ಥಾನ ದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಯವರಿ ಗೆ ಗುರುವಂದನೆ

 

ನಲ್ಲಸೋಪಾರದ ಮಣ್ಣಿನಲ್ಲಿ ತುಳುನಾಡಿನ ಸಂಸ್ಕೃತಿ ಸಂಸ್ಕಾರ ಅಡಕವಾಗಿದೆ: ಒಡಿಯೂರು ಶ್ರೀ


ಚಿತ್ರ ವರದಿ ದಿನೇಶ್ ಕುಲಾಲ್

ನಲ್ಲಸೋಪಾರ : ಒಡಿಯೂರು ಕ್ಷೇತ್ರದ ಪರಮಾಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಹಾಗೂ ಶ್ರೀ  ಸಾಧ್ವಿ ಮಾತಾನಂದಾಮಯಿಯವರು ಜುಲೈ 26 ರಂದು ಬುಧವಾರ    ನಲ್ಲಸೋಪಾರ ಪಶ್ಚಿಮದ ನಲ್ಲಸೋಪಾರ - ವಿರಾರ್ ಲಿಂಕ್ ರಸ್ತೆಯಲ್ಲಿ  ಶ್ರೀಪ್ರಸ್ಥ, 4 ನೇ (ಎಚ್‌ಪಿ ಪೆಟ್ರೋಲ್ ಪಂಪ್) ರಸ್ತೆ ಮುಂಬೈಯ ತುಳು ಕನ್ನಡಿಗರ ಹಿರಿಯ ಧಾರ್ಮಿಕ  ಸಂಸ್ಥೆ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಕೋಟೆ  ಆಡಳಿತದ ಶ್ರೀ ಶನೇಶ್ವರ ದೇವಸ್ಥಾನ ದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಿತು.
        
ಶ್ರೀಶನೀಶ್ವರ ದೇವಸ್ಥಾನದ ಗುರು ವಂದನೆಯನ್ನು ಸ್ವೀಕರಿಸಿ ಶ್ರೀ ಗುರು  ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಮಕ್ಕಳಿಗೆ  ಉನ್ನತ ವ್ಯಾಸಂಗ ನೀಡಿ ಆದರೆ ಧರ್ಮ ಜಾಗೃತಿಯ ಕೆಲಸವನ್ನು  ಮನೆಯಲ್ಲಿ ಸದಾ ನೆನಪಿಸುತ್ತ ಇರಿ. ಇಲ್ಲವಾದಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ ಮಕ್ಕಳು ಆ ದೇಶದ ಸಂಸ್ಕೃತಿಗೆ ಹೊಂದಿಕೊಂಡು ಅಲ್ಲಿಯೇ ನೆಲೆ ಇರುವುದಕ್ಕೆ ಪ್ರಯತ್ನ ಪಡುತ್ತಾರೆ. ಈ ದೇಶದ ಸಂಸ್ಕೃತಿ ಆಚಾರ ವಿಚಾರಗಳಿಂದ ದೂರವಿರುತ್ತಾರೆ.  ಮಗುವಾಗಿದ್ದಾಗ ಎಲ್ಲರೂ ದೇವರಾಗಿರುತ್ತಾರೆ ಆದರೆ ಬೆಳೆದಂತೆ ಆತನಿಗೆ ಧಾರ್ಮಿಕ  ಸಂಸ್ಕಾರ ಸಿಗದಿದ್ದಾಗ ಆತ ರಾಕ್ಷಸ ಸ್ವಭಾವದವನಾಗಿ ಬೆಳೆಯುತ್ತಾನೆ ಆದ್ದರಿಂದ ಬಾಲ್ಯದಲ್ಲಿ ಆಧ್ಯಾತ್ಮಿಕದ ಉಲುವನ್ನು ಮೂಡಿಸಬೇಕು.  ಸೂರ್ಯ ದೇವನ  ಮಗ ಶನಿ  ದೇವರು ಯಾರನ್ನು ಕೂಡ ಬಿಟ್ಟವನಲ್ಲ ಆದರೆ ಗಣಪತಿ ಮತ್ತು ಹನುಮನಿಗೆ ಶನಿ ದೇವರ ನೆರಳು ಬಿದ್ದಿಲ್ಲ ಅದಕ್ಕೆ ಕಾರಣ ಅವರಲ್ಲಿದ್ದ ದೇವ ಭಕ್ತಿ. ನಮ್ಮೆಲ್ಲರ ಭಕ್ತಿ ಹೃದಯದಲಿರಬೇಕು.  ಆ ಮೂಲಕ ಭಗವಂತನನ್ನು ಸಾಕ್ಷಾತ್ಕರಿಸಬಹುದು.   ಪ್ರೀತಿಯಿಂದ ಎಲ್ಲವನ್ನು ಸಂಪಾದಿಸಬಹುದು ಎಂದು ನುಡಿದರು.






ಸ್ವಾಮೀಜಿಯವರು ಕ್ಷೇತ್ರಕ್ಕೆ ಆಗಮಿಸಿ, ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ದರು. ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ವರದರಾಜ ಶೆಟ್ಟಿ, . ಕಾರ್ಯದರ್ಶಿ ವಸಂತ್ ಶೆಟ್ಟಿ. ಮಹಾಲಿಂಗ ಗಾಣಿಗ. ಭಾಸ್ಕರ್ ಬಂಗೇರ ಯವರು ಗೌರವಿಸಿದರು. ಆಡಳಿತ ಸಮಿತಿಯ ಪದಾಧಿಕಾರಿ ಶ್ರೀನಿವಾಸ್ ಕೆ ಆಳ್ವ ಮತ್ತು ಹೇಮಲತಾ ಶ್ರೀನಿವಾಸ ಆಳ್ವ ಶ್ರೀಗಳ ಪಾದಪೂಜೆಯನ್ನು ನಡೆಸಿದರು.

ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಮೀಜಿಯವರ ಸೇವಾ ಕಾರ್ಯದ ಬಗ್ಗೆ ಮತ್ತು ಒಡಿಯೂರು ಅಭಿವೃದ್ಧಿಯ ಬಗ್ಗೆ ಸಮಗ್ರವಾಗಿ ತಿಳಿಸಿದರು.

ಒಡಿಯೂರು ಸಂಸ್ಥಾನದ  ಸಾಧ್ವಿ ಮಾತಾನಂದಮಯಿ ಭಜನೆಯನ್ನು ಬಜಿಸಿದರು
ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ದಾಮೋದರ್ ಶೆಟ್ಟಿ, 
ಗೌರವ ,ಮೋಹನ್ ಹೆಗ್ಡೆ,  ಮತ್ತಿತರ ಪದಾಧಿಕಾರಿಗಳು ಉಪಸ್ತರಿದ್ದರು. ಆರಂಭದಲ್ಲಿಶನಿಮಂದಿರದ ಮಹಿಳಾ ಸದಸ್ಯರು ಮತ್ತು ಭಕ್ತ ವೃಂದದವರು ಭಜನೆ ನಡೆಸಿದರು.
Powered by Blogger.