ಜುಲೈ 23 ರಂದು ಡೊಂಬಿವಲಿ ಯಲ್ಲಿ "ದಕ್ಷಯಜ್ನ ಮೀನಾಕ್ಷಿ ಕಲ್ಯಾಣ" ಯಕ್ಷಗಾನ ಪ್ರದರ್ಶನ
ಕರ್ನಾಟಕದ ಕರಾವಳಿಯ ಶ್ರೇಷ್ಟ ಮತ್ತು ಶ್ರೀಮಂತ ಕಲೆಯಾದ ಯಕ್ಷಗಾನ ಕಲೆಯನ್ನು ಮಹಾರಾಷ್ಟ್ರದ ಮರಾಠಿ ಮಣ್ಣಿನಲ್ಲಿ ಉಳಿಸಿ ಬೆಳೆಸಲು ಹಗಲು ರಾತ್ರಿ ಶ್ರಮಿಸುತ್ತಿರುವ ರಾಧಾಕೃಷ್ಣ ಶನೀಶ್ವರ ಮಂದಿರದ ಪ್ರಧಾನ ಅರ್ಚಕ, ಹವ್ಯಾಸಿ ಯಕ್ಷಗಾನ ಕಲಾವಿದ, ಕಲಾ ಪೋಷಕ ಶ್ರೀ ಪ್ರಕಾಶ ಭಟ್ ಕಾನಂಗಿ ಇವರ ನೇತೃತ್ವ ಹಾಗೂ ವ್ಯವಸ್ಥಾಪನೆಯಲ್ಲಿ ಕಲಾ ರಸಿಕ ಕಲಾರಾದಕರಾದ ಶ್ರೀ ರಾಜೇಶ್ ಕೋಟ್ಯಾನ್ ಹಾಗೂ ಸುಪ್ರಸಿದ್ದ ಕಲಾ ಸಂಘಟರು ಕಲಾಪ್ರಿಯರಾದ ವಿಜಯ ಶೆಟ್ಟಿ ಸಜೀಪಗುತ್ತು ಇವರ ಸಂಯೋಜನೆಯಲ್ಲಿ ಯಕ್ಷಕಲಾ ರಸಿಕರು ಡೊಂಬಿವಲಿ ಇವರ ಸಹಕಾರ ದೊಂದಿಗೆ, ಪಲ್ಲವ ಗಾಣಿಗ ಹೇರಂಜಾಲು ಹಾಗೂ ನಾಗಶ್ರೀ ಜಿ ಎಸ್ ತಂಡದ ಸಂಚಾಲಕಲಾಗಿರುವ ಹೇರಂಜಾಲು ಯಕ್ಷಬಳಗ ಹಾಗೂ ಟೀಮ್ ಉತ್ಸಾಹಿ ಬೆಂಗಳೂರು ಇವರಿಂದ ಯಕ್ಷಗಾನ ಪ್ರಸಂಗ "ದಕ್ಷಯಜ್ನ ಮೀನಾಕ್ಷಿ ಕಲ್ಯಾಣ" ದಿನಾಂಕ 23/07/2023 ರವಿವಾರ ಸಂಜೆ 4 ಗಂಟೆಯಿಂದ ಶಿವಂ ಹಾಲ್ (ಮೆಜೆಸ್ಟಿಕ್ ಬೀಕ್ವೆಸ್ಟ್ ಹಾಲ್) ಎಲ್ ಐ ಸಿ ಆಫೀಸ್ ನ ಹತ್ತಿರ, ಪೈರ್ ಬ್ರಿಗೇಡ್ ರಸ್ತೆ, ಡೊಂಬಿವಲಿ ಪೂರ್ವದಲ್ಲಿ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನದ ಮಧ್ಯಂತರ ದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ಭಟ್ ಕಾನಂಗಿ (ಪ್ರದಾನ ಅರ್ಚಕರು ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ) ಮುಖ್ಯ ಅತಿಥಿ ಗಳಾಗಿ ಹರೀಶ್ ಡಿ ಶೆಟ್ಟಿ ( ಗೌರವ ಅಧ್ಯಕ್ಷರು ಶ್ರೀ ಜಗದಂಬ ಮಂದಿರ ಡೊಂಬಿವಲಿ), ರವಿ ಸನಿಲ್ ( ಜೊತೆ ಕಾರ್ಯದರ್ಶಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ) ರವೀಂದ್ರ ವೈ ಶೆಟ್ಟಿ ( ಅಧ್ಯಕ್ಷರು ಬಂಟರ ಸಂಘ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ) ಸುಭಾಷ್ ಪಾಲನ್ ( ಕಾರ್ಯಾಧ್ಯಕ್ಷರು ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಕಛೇರಿ) ವಿಜಯ್ ಬಿ ಶೆಟ್ಟಿ (ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷರು ಶ್ರೀ ಜಗದಂಬ ಮಂದಿರ ಡೊಂಬಿವಲಿ ) ಸೋಮನಾಥ ಪೂಜಾರಿ ( ಅಧ್ಯಕ್ಷರು ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ), ರವಿ ಸುವರ್ಣ (ಅಧ್ಯಕ್ಷರು ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ) ರಮೇಶ್ ಸುವರ್ಣ ( ಭಾರತ್ ಕೋ ಆಪ್ ಬ್ಯಾಂಕ್ ಡೊಂಬಿವಲಿ ಶಾಖೆಯ ಮ್ಯಾನೇಜರ್) ದಿನೇಶ್ ಪೂಜಾರಿ (ಕಲಾ ಪೋಷಕರು), ಲಕ್ಷ್ಮಣ ಪೂಜಾರಿ (ಹೋಟೆಲ್ ಪ್ರೀತಿ ಡೊಂಬಿವಲಿ), ಶರಣ್ ರೈ (ಹೋಟೆಲ್ ಆನಂದ್ ಭವನ್ ಡೊಂಬಿವಲಿ), ಸತೀಶ್ ಪೂಜಾರಿ (ದಿವ್ಯಾ ಕ್ಯಾಟರರ್ ಡೊಂಬಿವಲಿ) ರಾಜು ಮೊಗವೀರ ( ಕಲಾ ಪೋಷಕರು) ಉಪಸ್ಥಿತರಿರುವರು.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ವನ್ನು ಯಶಸ್ಸು ಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮದ ವ್ಯವಸ್ಥಾಪಕರುಗಳಾದ ಪ್ರಕಾಶ ಭಟ್ ಕಾನಂಗಿ(9821432035), ಸಂಯೋಜಕರಾದ ರಾಜೇಶ ಕೋಟ್ಯಾನ್ (9930026134), ವಿಜಯ ಶೆಟ್ಟಿ ಸಜೀಪ ಗುತ್ತು (7045633310) ಅವರನ್ನು ಸಂಪರ್ಕಿಸಬಹುದು.

Post a Comment