ಘನ್ಸೋಲಿ ಮೂಕಾಂಬಿಕಾ ಮಂದಿರ ಸಭಾಂಗಣದಲ್ಲಿ ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ವರಿಗೆ ಪ್ರತಿಭಾ ಪುರಸ್ಕಾರ
ದೇಶದ ಶ್ರೀಮಂತ ಕಲೆ ಯಕ್ಷಗಾನ ಇದು ವಿಶ್ವ ಗಾನ ವಾಗಿ ಮೆರೆದಿದೆ: ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿ
(ಚಿತ್ರ ವರದಿ : ದಿನೇಶ್ ಕುಲಾಲ್)
ನವಿ ಮುಂಬಯಿ : ಮಹಾನಗರ ಮುಂಬೈಯಲ್ಲಿ ಹಾಗೂ ವಿವಿಧ ಉಪನಗರಗಳಲ್ಲಿ ಯಶಸ್ವಿ ಯಕ್ಷಗಾನ ವನ್ನು ನೀಡುತ್ತಿರುವ ಮಹಾಗಣಪತಿ ಯಕ್ಷಗಾನ ಮಂಡಳಿ(ರಿ)ನಡೂರು,ಮಂದರ್ತಿ ಮೇಲದ ಕಲಾವಿದರು ರಿಂದ, ಭಾಗವತ , ಕೊಕ್ಕರ್ಣೆ ಸದಾಶಿವ ಅಮೀನ್ ರಚಿಸಿ, ನಿರ್ದೇಸಿದ ಈ ವರ್ಷದ ಮಳೆಗಾಲದ ಮಹೋನ್ನತ ಕಲಾಕಾಣಿಕೆ ಶಿವದೂತ ಪಂಜುರ್ಲಿ ಯಕ್ಷಗಾನ ಜುಲೈ 20ರಂದು ಘನ್ಸೋಲಿ ಮೂಕಾಂಬಿಕಾ ಮಂದಿರ ಸಭಾಂಗಣದಲ್ಲಿ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿಯಕ್ಷಗಾನದ ಭರವಸೆಯ ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಘನ್ಸೋಲಿಮೂಕಾಂಬಿಕಾ ಮಂದಿರ ಧರ್ಮದರ್ಶಿ
ಆಣ್ಣಿ ಶೆಟ್ಟಿ ಮಾತನಾಡುತ್ತಾ ಭಾರತ ದೇಶವೆಂದರೆ ಎಲ್ಲಾ ಧರ್ಮದ ಎಲ್ಲಾ ಭಾಷೆಯ ಜನಾಂಗದವರು ನಾಡು ನಾಡು ಇಲ್ಲಿ ವಿವಿಧ ರೀತಿಯ ಸಂಸ್ಕೃತಿ ಉಳಿಸಿಕೊಂಡು ಬಂದವರಾಗಿದ್ದಾರೆ ಅದರಲ್ಲೂ ಈ ದೇಶದಲ್ಲಿ ಅದ್ಭುತ ಕಲೆಯೆಂದರೆ ಯಕ್ಷಗಾನ ಅದು ನಮ್ಮ ನಾಡಿನ ಕಲೆ ಎನ್ನುವುದು ನಮಗೆಲ್ಲರಿಗೂ ಅಭಿಮಾನ. ಯಕ್ಷಗಾನದಲ್ಲಿ ಎಲ್ಲಾ ಧರ್ಮದವರು ಇದ್ದಾರೆ ಇದನ್ನು ಇನ್ನಷ್ಟು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಕಲಾವಿದನೊಬ್ಬ ಕಲಾ ಜೀವನದಿಂದ ದೂರವಿರುತೇನೆ ಎಂದು ಎಂದುಕೊಂಡರೆ ಅದು ಅಸಾಧ್ಯದ ಮಾತು ಆತ ಎಷ್ಟು ದೂರವಿದ್ದರೂ ಕೂಡ ಆತನನ್ನು ಮತ್ತೆ ಮತ್ತೆ ತಿಳಿಯುತ್ತದೆ ಈ ರಂಗ ಮಂದಿರ. ಅದರಂತೆ ಈ ತಂಡದ ಭಾಗವತ ಸದಾಶಿವ ಅಮೀನರು, ಯಕ್ಷಗಾನದ ಕಲಾ ಜೀವನದಿಂದ ದೂರವಿದ್ದವರು ಮತ್ತೆ ಯಕ್ಷಗಾನದ ಸೆಳೆತ ಅವರನ್ನು ತಂದಿದೆ. ದೈವದ ಕಥೆಯನ್ನು ಆಧರಿಸಿ ರೂಪಿಸಿಕೊಂಡಿರುವ ಯಕ್ಷಗಾನ ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನವೀನ್ ಮುಂಬೈ ಹೋಟೆಲ್ ಓನರ್ ಅಸೋಸಿಯೇಷನ್ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಮಾತನಾಡುತ್ತಾ, ನನ್ನ ಪರಿವಾರ ದವರೆಲ್ಲರೂ ಯಕ್ಷಗಾನವೆಂದರೆ ಬಹಳ ಅಭಿಮಾನವಿಟ್ಟು ಈ ಕಲೆ ನಮ್ಮ ನಾಡಿಗೆ ಕೀರ್ತಿ ತಂದಿದೆ ಯಕ್ಷಗಾನವನ್ನು ಉಳಿಸುವ ಬೆಳೆಸುವ ಮತ್ತು ಕಲಾವಿದರಿಗೆ ಪ್ರೋತ್ಸಾ ನೀಡುವ ಮನೋಭಾವ ನಮ್ಮಲ್ಲಿ ಬೆಳೆಯಲಿ ಎಂದು ನುಡಿದರು.
ವೇದಿಕೆಯಲ್ಲಿ ರಾಜೀವ ಶೆಟ್ಟಿ (ಶ್ರೀ ದೇವಿ ಹಾಸ್ಪಿಟಲಿಟಿ ಸರ್ವೀಸ್, ಐರೋಲಿ), ತುಳುಕೂಟ ಐರೋಲಿ ಅಧ್ಯಕ್ಷ ನಾಗೇಶ್ ಶೆಟ್ಟಿ,, ಹೋಟೆಲ್ ಸಾಯಿ ಸ್ನೇಹ ಐರೋಲಿ, ಚಂದ್ರಶೇಖರ್ ಶೆಟ್ಟಿ, ಹೋಟೆಲ್ ವೈಭವ ಐರೋಲಿಯ
ಸುನಿಲ್ ಶೆಟ್ಟಿ,, ಹೋಟೆಲ್ ಸಾಯಿರಾಜ್ ಐರೋಲಿಯ, ಪ್ರಶಾಂತ್ ಶೆಟ್ಟಿ, ಸಂದ್ಯಾ ಜಯಪ್ರಕಾಶ್ ಶೆಟ್ಟಿ, ಉಪಸ್ಥಿತರಿದ್ದರು.
ಕ್ರಮವನ್ನು ಮೇಲದ ಭಾಗವತರಾದ ಕೊಕ್ಕರ್ಣೆ ಸದಾಶಿವ ಆಮೀನ್ ನಿರೂಪಿಸಿ ಮುಂಬೈಯ ಕಲಾಭಿಮಾನಿ ಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಶಿವದೂತ ಪಂಜುರ್ಲಿ ಯಕ್ಷಗಾನ ಗಲ್ಫ್ ರಾಷ್ಟ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಊರಿನಲ್ಲಿ ಕೂಡ ಯಶಸ್ವಿ ಪ್ರದರ್ಶನವನ್ನು ನೀಡುತ್ತಿದೆ ಇದಕ್ಕೆಲ್ಲಾ ಕಲಾಭಿಮಾನಿಗಳ ಪ್ರೋತ್ಸಾಹ ವೆಂದು ನುಡಿದರು.
ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಆಕರ್ಷಣೆಯೊಂದಿಗೆ ಕಾಂತಾರಚಲನಚಿತ್ರ ನೆನಪಿಸುವ ಹಲವು ವಿಶೇಷ ದ್ರಶ್ಯಗಳು, ಪಂಜುರ್ಲಿ ದೈವದ ವಿಶೇಷ ಆರ್ಭಟದೊಂದಿಗೆ ಭಾಗವತರು-ಕೊಕ್ಕರ್ಣೆ ಸದಾಶಿವ ಅಮೀನ್, ಯುವ ಭಾಗವತ ಗಣೇಶ್ ಆಚಾರ್ಯ,ಮದ್ದಳೆ-ನಾರಾಯಣ.ಪಿ.ಸಿದ್ದಾ ಪುರ ಚಂಡೆ-ಕುಮಾರ್ ಅಮೀನ್, ಕೊಕ್ಕರ್ಣಿ ,ಸ್ತ್ರೀ ಪಾತ್ರದಲ್ಲಿ-ದಿನಕರ ಕುಂದರ್,ನಡೂರು, ನಾಗರಾಜ ದೇವಲ್ಕು೦ದ, ರಾಕೇಶ್ ಶೆಟ್ಟಿ, ಮೇಗರವಳ್ಳಿ. ಹಾಸ್ಯ ದಲ್ಲಿಸತೀಶ್ ಕುಮಾರ್, ಹಾಲಾಡಿ, ಸೀತಾರಾಮ ಕುಮಾರ್ ಕಟೀಲ್, ಪ್ರಭುತ್ವ ಕಲಾವಿದರಾಗಿಉಪ್ಪುಂದ ನಾಗೇಂದ್ರ ರಾವ್. ವಿಶ್ವನಾಥ ಪೂಜಾಲಿ, ಹೆನ್ನಾಬೈಲ್. ನಂದೀಶ್ ಕುಮಾರ್, ಹರೀಶ್ ಚಂದನ್. ಜನ್ನಾಡಿ, ಕೇಶವ ಆಚಾರ್ಯ ಶಂಗೇಲಿ ..ಸಂತೋಷ್ ಕುಮಾರ್ ಬಾರಾಳಿ, ಶ್ರೀನಿವಾಸ ಶೆಟ್ಟಿ ಶಂಕರನಾರಾಯಣ ಈ ಎಲ್ಲಾ ಕಲಾವಿದರಿಂದ ಶಿವದೂತ ಪಂಜುರ್ಲಿ ಯಕ್ಷಗಾನ ಯಶಸ್ವಿ ಪ್ರದರ್ಶನ ನಡೆಯಿತು.




Post a Comment