".

Header Ads

ಉಡುಪಿ :25 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ..!!

 


ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು, ವಿವಿಗಳ ಕುಲಸಚಿವರು, ಆಡಳಿತಾಧಿಕಾರಿಗಳನ್ನು ಬದಲಾವಣೆ ಮಾಡಿರುವ ರಾಜ್ಯ ಸರಕಾರ, 25 ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ

 

ಮಹೇಶ್‌ ಚಂದ್ರ ಅವರನ್ನು ಉಡುಪಿ ನಗ‌ರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಹಾಗೂ ಎ.ಇ.ರಘು ಅವರನ್ನು ದಕ್ಷಿಣ ಕನ್ನಡ ಜಿ.ಪಂ. ಉಪ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದ್ದು, ಸ್ಥಳ ನಿರೀಕ್ಷಣೆಯಲ್ಲಿದ್ದ ಕಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿ ಸಂತೋಷ್‌ ಕುಮಾರ್‌ ಅವರನ್ನು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ರಾಜ್ಯ ಪ್ರತಿನಿಧಿ-2 ಆಗಿ ನಿಯುಕ್ತಗೊಳಿಸಿದ್ದರೆ, ಪಿ.ಎಸ್‌. ಕಾಂತರಾಜ್‌ ಅವರನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿ ನಿಯುಕ್ತಿಗೊಳಿಸಿದ್ದು, ಡಾ| ಎಸ್‌. ನಾಗರಾಜ್‌ ಅವರನ್ನು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಿದೆ.


 

Powered by Blogger.