ರಾಜ್ಯಕ್ಕೆ ಕೇಂದ್ರದಿಂದ ವಿಪತ್ತು ಪರಿಹಾರ ನಿಧಿ 348 ಕೋಟಿ ರೂ. ನೆರವು
ಕರ್ನಾಟಕ ಸಹಿತ 22 ರಾಜ್ಯಗಳ ವಿಪತ್ತು ಪರಿಹಾರ ನಿಧಿ ಕೇಂದ್ರ ಸರಕಾರದ ವತಿಯಿಂದ 7,532 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 348.80 ಕೋಟಿ ರೂ. ನೆರವು ಸಿಕ್ಕಿದೆ.ದೇಶಾದ್ಯಂತ ಹಲವು ರಾಜ್ಯಗಳಿಗೆ ಮಳೆ, ಪ್ರವಾಹದಿಂದ ತೊಂದರೆ ಉಂಟಾಗಿರುವಂತೆಯೇ ಕೇಂದ್ರ ವಿತ್ತ ಸಚಿವಾಲಯದ ಖರ್ಚು-ವೆಚ್ಚಗಳ ವಿಭಾಗ ನೆರವು ಬಿಡುಗಡೆ ಮಾಡಿದೆ. ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಹಾನಿ ಬಗ್ಗೆ ನೆರವು ನೀಡುವ ನಿಟ್ಟಿನಲ್ಲಿ ನಿಯಮಗಳನ್ನು ಬದಲಾಯಿಸಲಾಗಿದೆ. ಹೀಗಾಗಿ, ತಾನು ನೀಡಿದ ಮೊತ್ತವು ತತ್‌ಕ್ಷಣಕ್ಕೆ ಅನ್ವಯವಾಗುವಂತೆ ರಕ್ಷಣೆ ಮತ್ತು ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಹಾಯವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.

Post a Comment