".

Header Ads

ಅಂಗನವಾಡಿಗಳಿಗೆ ಕಳಪೆ ಮೊಟ್ಟೆ, ಮೊಟ್ಟೆ ಖರೀದಿ ಜವಾಬ್ದಾರಿ ಮೊದಲಿನಂತೆ ಬಾಲ ವಿಕಾಸ ಸಮಿತಿಗೆ ನೀಡಿ. ಇಲ್ಲದಿದ್ದರೆ ಮೊಟ್ಟೆ ಚಳವಳಿ ಆರಂಭಿಸುತ್ತೇವೆ ಅಂಗನವಾಡಿ ಕಾರ್ಯ ಕರ್ತೆ ಯರು


 ‘ಗುತ್ತಿಗೆದಾರರು ಪೂರೈ ಸಿದ ಮೊಟ್ಟೆಗಳನ್ನು ಬೇಯಿಸಿ ಸಿಪ್ಪೆ ಸುಲಿದಾಗ, ಅವು ಕೆಟ್ಟಿರುವುದು ಗೊತ್ತಾಗುತ್ತದೆ. ಮೊಟ್ಟೆಯ ಒಳಭಾಗ ಕಪ್ಪುಬಣ್ಣಕ್ಕೆ ತಿರುಗಿರುತ್ತದೆ. ಕೆಲವೊಮ್ಮೆ ಕೆಟ್ಟವಾಸನೆಯೂ ಬರುತ್ತದೆ’ ಎಂ ದು ಹಾವೇ ರಿ ಜಿಲ್ಲೆಯ ಅಂಗನವಾಡಿ ಕಾರ್ಯ ಕರ್ತೆಯರು ದೂರಿದರು.

 ‘ಗುತ್ತಿಗೆದಾರರು ಸಣ್ಣ ಗಾತ್ರದ ಹಾಗೂ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಸುತ್ತಾರೆ.

 ಬೇಡಿಕೆಗೆ ತಕ್ಕಷ್ಟು ನೀಡುವುದಿಲ್ಲ. ಕೊಳೆತವುಗಳನ್ನು ನಾವು ಬಿಸಾಡುವ ಕಾರಣ ಮೊಟ್ಟೆಗಳ ಕೊರತೆಯಾಗಿ, ಮಕ್ಕಳಿಗೆ ಸರಿಯಾಗಿ ವಿತರಿಸಲು ಆಗುವುದಿಲ್ಲ. ಮನೆಗೆ ಒಯ್ದವರು ಮೊಟ್ಟೆಗಳು ಕೆಟ್ಟಿವೆ ಎಂದು ಜಗಳಕ್ಕೆ ಬರುತ್ತಾರೆ’ ಎಂದು

ಅಂಗನವಾಡಿ ಕಾರ್ಯ ಕರ್ತೆ ಯರು ತಿಳಿಸಿದರು. ಹಿಂ ದಿನ ವರ್ಷ ಸರ್ಕಾ ರವು ಒಂ ದು ಮೊಟ್ಟೆಗೆ ₹5 ರಿಂ ದ ₹6 ಕೊಡುತಿತ್ತು. ಆದರೆ,ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಕೆಯಾದ ಕಾರಣ ಖರೀದಿಸಲು ಕಷ್ಟವಾಯಿತು. 3 ರಿಂ ದ 4 ತಿಂಗಳಾದರೂ ಹಣ ಬಿಡುಗಡೆಯಾಗ ಆಗಲಿಲ್ಲ. ನಾವು ಸಾಲಮಾಡಿ ಮೊಟ್ಟೆ ಖರೀದಿಸಿದೆವು. ಅದಕ್ಕೆ ಸರ್ಕಾರವು ಪ್ರಸಕ್ತ ವರ್ಷ ಜನವರಿಯಿಂದ ತಾಲ್ಲೂಕುವಾರು ಟೆಂಡರ್ ಕರೆದು, ಗುತ್ತಿಗೆದಾರರಮೂಲಕ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈ ಸಲು ಕ್ರಮ ಕೈಗೊಂ ಡಿತು’ ಎಂ ದು ವಿವರಿಸಿದರು. ಆರೋ ಗ್ಯದ ಮೇ ಲೆ ದುಷ್ಪರಿಣಾಮ: ‘ಕೆಟ್ಟುಹೋ ದ ಮೊಟ್ಟೆಗಳನ್ನು ಮಕ್ಕಳು ತಿಂದು ವಾಂ ತಿ–ಭೇದಿಮಾಡಿಕೊಂಡ ಉದಾಹರಣೆಗಳಿವೆ.
ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಮೇ ಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಗುಣಮಟ್ಟದ ಮೊಟ್ಟೆ ಪೂರೈ ಕೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇ ಕು’ ಎಂ ದು ಸಾಮಾಜಿಕ ಪರಿವರ್ತನಾ ಜನಾಂದೋಲನದ ಜಿಲ್ಲಾ ಸಂಚಾಲಕಿ ಹಸೀ ನಾ ಹೆಡಿಯಾಲ ಒತ್ತಾಯಿಸಿದರು. ಟೆಂ ಡರ್ ಪದ್ಧತಿ ರದ್ದುಪಡಿಸಬೇ ಕು. ಮೊಟ್ಟೆ ಖರೀದಿ ಜವಾಬ್ದಾರಿ ಮೊದಲಿನಂತೆ ಬಾಲ ವಿಕಾಸ ಸಮಿತಿಗೆ ನೀಡಬೇಕು. ಇಲ್ಲದಿದ್ದರೆ ಮೊಟ್ಟೆ ಚಳವಳಿ ಆರಂಭಿಸುತ್ತೇ ವೆ. –ಹೊನ್ನಪ್ಪ ಮರೆಮ್ಮನವರ ಅಧ್ಯಕ್ಷ ಎಐಟಿಯುಸಿ ಜಿಲ್ಲಾ ಸಮಿತಿ ಹಾವೇರಿ ಗುಣಮಟ್ಟದ ಮೊಟ್ಟೆ ಪೂರೈಕೆಗೆ ಕ್ರಮ ಕೈಗೊಳ್ಳುವಂ ತೆ ಸಿಡಿಪಿಒಗಳಿಗೆ ನಿರ್ದೇ ಶಿಸಲಾಗಿದೆ. ಕಳಪೆ ಮೊಟ್ಟೆ ಪೂರೈಕೆ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇ ವೆ.

Powered by Blogger.