ಕಳೆದ 30 ವರ್ಷಗಳಲ್ಲಿ ಪೋಲಿಯೋ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಪೋಲಿಯೋ ಲಸಿಕೆಯನ್ನೂ ಇತರ ಲಸಿಕೆಗಳಂತೆಯೇ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವರ್ಷಕ್ಕೊಂದು ಬಾರಿ ಐದು ವರ್ಷದೊಳಗಿನ ಮಕ್ಕಳಿಗೆ ನೀಡುವ ಪದ್ದತಿ ಚಾಲ್ತಿಗೆ ತರಲಾಗಿದೆ. ಪ್ರತೀ ಗುರುವಾರ ಸರಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಸಿಗಲಿದೆ.ಕೇಂದ್ರ ಸರಕಾರದ ಸಾರ್ವತ್ರಿಕ ಲಸಿಕಾಕರಣ ಯೋಜನೆಯಡಿ ವರ್ಷದಲ್ಲಿಎರಡು ಬಾರಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗುತ್ತಿತ್ತು. ಆದರೆ, ಈ ವರ್ಷ ಈ ಕಾರ‍್ಯಕ್ರಮವನ್ನು ತಡೆ ಹಿಡಿಯಲಾಗಿದೆ.ಪಲ್ಸ್ ಪೋಲಿಯೊ ಎಂದು ಪ್ರತ್ಯೇಕವಾಗಿ ಅಭಿಯಾನ ಹಮ್ಮಿಕೊಳ್ಳುವುದರ ಬದಲು ಪೋಲಿಯೊ ಲಸಿಕೆಯನ್ನೂ ಇತರ ಲಸಿಕೆಗಳಂತೆಯೇ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಒಂದು ಬಾರಿ ನೀಡುವ ಪದ್ಧತಿ ಚಾಲ್ತಿಗೆ ತರಲಾಗಿದೆ. ಇದರ ಅನ್ವಯ 1.5 ವರ್ಷ, 2.5 ವರ್ಷ ಹಾಗೂ 3.5 ವರ್ಷ ವಯಸ್ಸಿನ ಮಕ್ಕಳಿಗೆ ಪೋಲಿಯೊ ರೋಗ ಬರದಂತೆ ಚುಚ್ಚುಮದ್ದು ನೀಡಲಾಗುತ್ತಿದೆ. ಪ್ರತಿ ಗುರುವಾರ ಸರಕಾರಿ ಆಸ್ಪತ್ರೆಗಳಲ್ಲಿಈ ಲಸಿಕೆಯನ್ನೂ ಉಚಿತವಾಗಿ ಪಡೆಯಬಹುದು.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಉದ್ಯೋಗ ಅರಸಿ ಹೋಗುವ ಕಾರ್ಮಿಕರ ಮಕ್ಕಳಿಗೆ ಅವರು ಕೆಲಸ ಮಾಡುವ ಸ್ಥಳದಲ್ಲೇ ಲಸಿಕೆ ಉಣಿಸಲಾಗುತ್ತಿತ್ತು. ಈಗ ಈ ಮಕ್ಕಳನ್ನೂ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಲಸಿಕೆ ನೀಡಬೇಕಿದೆ.
join our whatsapp group
ಉಡುಪಿ ನ್ಯೂಸ್ ನಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ : ವಾಟ್ಸಪ್ ನಂಬರ್:- 8217755156
Post a Comment