ಉಡುಪಿ :- ಜಿಲ್ಲೆಯಲ್ಲಿ ಮಳೆಗೆ 9 ಮಂದಿ ಸಾವು; 28 ಕೋಟಿ ನಷ್ಟ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ ಜಿಲ್ಲೆಯಾದ್ಯಂತ ಮಳೆ ಆರ್ಭಟದಿಂದ ಇದುವರೆಗೂ 9 ಮಂದಿ ಸಾವನ್ನಪ್ಪಿದ್ದು, ಸುಮಾರು 28 ಕೋಟಿ ಮೌಲ್ಯದ ಆಸ್ತಿ ನಷ್ಟ ಉಂಟಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದದಲ್ಲಿ ಸಚಿವರು ಪಾಲ್ಗೊಂಡರು.ಬಳಿಕ ಮಾತನಾಡಿದ ಸಚಿವರು, " ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಮಳೆಯಿಂದ ಅನಾಹುತಗಳು ಸಂಭವಿಸುತ್ತಿವೆ. ಇನ್ಮುಂದೆ ಇಂಥ ಯಾವುದೇ ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುವುದು, ಶೀಘ್ರವೇ ಉಡುಪಿ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವುದಾಗಿ " ಸಚಿವರು ಹೇಳಿದರು. ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಕಸ್ತೂರಿ ಶೆಡ್ತಿಯವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು 10,000ರೂ., ಜ್ಯೋತಿ ಶೆಟ್ಟಿ (15,000ರೂ.), ಪಡುವರಿ ಗ್ರಾಮದ ಪದ್ಮಾವತಿ(40,000ರೂ.) ನಷ್ಟ ಅನುಭವಿಸಿದ್ದಾರೆ. ಮಜೂರು ಗ್ರಾಮದ ಕಾಸಿಂ ಸಾಹೇಬ್(30,000ರೂ.), ಪಾದೂರು ಗ್ರಾಮದ ಹರೀಶ್(45,000ರೂ.), ವಿಜಯಾ(15,000ರೂ.), ಸರೋಜಾ(15,000ರೂ.), ಮಲ್ಲಾರು ಗ್ರಾಮದ ಅಖ್ತರ್ ಆದಿಲ್(28,000ರೂ.) ಮನೆಗೆ ಮರ ಬಿದ್ದು, ಗಾಳಿ, ಮಳೆಯಿಂದ ಹಾನಿಯಾಗಿದೆ. ಗುಜ್ಜಾಡಿ ಗ್ರಾಮದ ನೀಲು(30,000ರೂ.), ಉಪ್ಪಿನಕುದ್ರು ಗ್ರಾಮದ ಚಂದ್ರ ಮೊಗವೀರ(30,000ರೂ.), ಕರ್ಕುಂಜೆ ಗೃಆಮದ ಕೊಂಣ್ಣು ವಾಂಡ್ತಿ (2ಲಕ್ಷ ರೂ.), ದೀಪಾ(15,000ರೂ.) ನಷ್ಟ ಅನುಭವಿಸಿದ್ದಾರೆ. ಬ್ರಹ್ಮಾವರ ತಾಲೂಕಿನ 38ಕಳ್ತೂರು ಗ್ರಾಮದ ಸುನೀತಾ ಶೆಟ್ಟಿ(20,000ರೂ.), ಪಾರಂಪಳ್ಳಿ ಗ್ರಾಮದ ರಾಧು ಪೂಜಾರ್ತಿ(20,000ರೂ.), ಕೋಡಿ ಗ್ರಾಮದ ಗಿರಿಜಾ ತಿಂಗಳಾಯ(20,000ರೂ.)ಮನೆಗೆ ನಷ್ಟವಾಗಿದೆ.


Post a Comment