".

Header Ads

ಪಡುಬಿದ್ರಿಯಲ್ಲಿ ಐದು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

 

 



ಐದರ ಹರೆಯದ ಬಾಲೆಯನ್ನು ಬಿಸ್ಕೆಟ್ ಆಸೆ ತೋರಿಸಿ ತನ್ನ ಕೋಣೆಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿದ ಪೈಶಾಚಿಕ ಕೃತ್ಯ ಪಡುಬಿದ್ರಿ  ಮಾತಾ ರೆಸಿಡೆನ್ಸಿಯಲ್ ಕಟ್ಟದಲ್ಲಿ ನಡೆದಿದೆ.

ವಿಕೃತ ಮನಸ್ಸಿನ ಆರೋಪಿ ವೆಸ್ಟ್ ಬೆಂಗಾಲ್   ನಿವಾಸಿ ಮಾಫಿಜುಲ್ ಶೇಖ್(26) ಎಂದು ಗುರುತಿಸಲಾಗಿದೆ.

ಈತ ಪಡುಬಿದ್ರಿ  ಮಾತಾ ರೆಸಿಡೆನ್ಸಿಯಲ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಅದೇ ಕಟ್ಟಡದ ಒಂದು ಕೋಣೆಯಲ್ಲಿ ವಾಸವಾಗಿದ್ದ. ಕಲ್ಕತ್ತಾದ  ಮತ್ತೊಂದು ಕುಟುಂಬ ಅದೇ ಕಟ್ಟಡದ ಕಾರ್ಮಿಕರಾಗಿ ದುಡಿಯುತ್ತಿದ್ದು ಅವರು ಕೂಡಾ ಕುಟುಂಬ ಸಮೇತರಾಗಿ ಅದೇ ಕಟ್ಟಡದ ಮತ್ತೊಂದು ಪಾಶ್ವದಲ್ಲಿ ವಾಸ ವಾಗಿದ್ದರು. ಕೆಲಸಕ್ಕೆ ರಜೆ ಇದ್ದ ಕಾರಣ ಆ ಕುಟುಂಬದ ಮಂದಿ ಮಲಗಿದ್ದರು. ಪುಟ್ಟ ಬಾಲಕಿ ಹೊರಗೆ ಆಟವಾಡುತ್ತಿದ್ದು, ಅಲ್ಲಿಗೆ ಬಂದ ಕಾಮುಕ ಬಾಲಕಿಯನ್ನು ಬಿಸ್ಕೆಟ್ ಆಸೆ ತೋರಿಸಿ ತನ್ನ ಕೋಣೆಗೆ ಕರೆಯಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಐದರ ಹರೆಯದ ಈ ಬಾಲೆ ನೋವು ಎಂಬುದಾಗಿ ಕೂಗಿದಾಗ ಮನೆಮಂದಿಗೆ ವಿಚಾರ ತಿಳಿದಿದೆ. ಅವರು ಪಡುಬಿದ್ರಿ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Powered by Blogger.