ಕುಲಾಲ ಸಂಘದ ಕಚೇರಿಯಲ್ಲಿ ಗುರುವಂದನ ಭಜನಾ ಮಂಡಳಿಯ ಗುರು ಪೂರ್ಣಿಮೆ ಆಚರಣೆ
ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ಗುರುವಂದನ ಭಜನಾ ಮಂಡಳಿಯ ಪರವಾಗಿ ಜ್ಯೋತಿ ಕೋ ಅಪ್ ಕ್ರಿಡಿಟ್ ಸೊಸೈಟಿ ಮತ್ತು ಸಿಬಂದಿ ವರ್ಗ ಹಾಗೂ ಜೆ ಡಿ ಡಿ ಏಜೆಂಟರ ವತಿಯಿಂದ ಜುಲೈ 1 ರಂದು ವ್ಯಾಸ ಜಯಂತಿಯ ಪೂರ್ಣಿಮೆಯ ಶುಭದಿನದಂದು ವಿಶೇಷ ಗುರು ಪೂಜೆಯೊಂದಿಗೆ ಗುರುಪೂರ್ಣಿಮೆಯನ್ನು ಬಹಳ ವಿಜಂಭಣೆಯಿಂದ ಆಚರಿಸಲಾಯಿತ್ತು.
ಭಜನಾ ಮಂಡಳಿಯ ಕಾರ್ಯಕರ್ತರ ಸಹಕಾರದಿಂದ ಗುರು ಹಾಗೂ ದೇವರ ಮಂಟಪವನ್ನು ವಿಶೇಷವಾಗಿ ಅಲಂಕರಿಸಿ,ಗುರುವಂದನಾ ಭಜನಾ ಮಂಡಳಿಯ ಪ್ರದಾನ ಅರ್ಚಕ ಶಂಕರ ವೈ ಮೂಲ್ಯರವರು ದೇವರ ಕಳಸ ಪ್ರತಿಷ್ಠಾಪಿಸಿ ಪೂಜಾ ವಿಧಿ ವಿದಾನವನ್ನು ಗಣಪತಿ ಸ್ತೋತ್ರ ಮತ್ತು ಗುರುಸ್ತೊತ್ರದೊಂದಿಗೆ ದೀಪ ಪ್ರಜ್ವಲಿಸಿ ಭಜನೆ ಸಂಕೀರ್ತನೆಗೆ ಚಾಲನೆ ನೀಡಿದರು.ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತ ಜನರಿಂದ ವಿಶೇಷ ಭಜನೆ ಸಂಕೀರ್ತನೆ ನಡೆಯಿತ್ತು. ಸಂಜೆ 7:30ಕ್ಕೇ ಸರಿಯಾಗಿ ದೇವರಿಗೆ ಹಾಗೂ ಗುರು ದೇವರಿಗೆ ಮಹಾ ಮಂಗಳಾರತಿ ನಡೆಯಿತ್ತು.
ಉತ್ತಮ ಸಂಸ್ಕಾರ,ಸಂಸ್ಕೃತಿ,ಒಳ್ಳೆಯ ದಾನ ಧರ್ಮವು ನಡೆಯುವ ಜೀವನಕ್ಕೆ ಗುರುವೇ ಕಾರಣ ,ಬದುಕಿನುದ್ದಕ್ಕೂ ಸತ್ಕಾರ್ಯಗಳನ್ನು ಮಾಡಲು ಮೊದಲು ಗುರುವಿನ ಉಪದೇಶ ಮತ್ತು ಮಾರ್ಗದರ್ಶನದಿಂದ ಮಾತ್ರ ಸಾಧ್ಯ.ಎಂದು ಅಂದಿನ ಅರ್ಚಕರು ಸಭೆಗೆ ಉಪದೇಶಿಸಿದರು .
ಜ್ಯೋತಿ ಕೋ ಅಪ್ ಕ್ರಿಡಿಟ್ ಸೊಸೈಟಿಯ ಸಿಬಂದಿ ವರ್ಗ ಹಾಗೂ ಜೆ ಡಿ ಡಿ ಏಜೆಂಟರು ಹಾಗೂ ಸಮಾಜ ಬಾಂಧವರು , ಒಂದೇ ಕುಟುಂಬದಂತೆ ಗುರುಪೂರ್ಣಿಮೆ ಆಚರಿಸಿ, ಗುರುಕೃಪೆಗೆ ಪಾತ್ರರಾಗಿದ್ಧೀರಾ, ನಿಮಗೆಲ್ಲರಿಗೂ ದೇವರು ನಿಮ್ಮ ಜೀವನದುದ್ದಕ್ಕೂ ಸಕಲೈಸ್ವರ್ಯವನ್ನು ಕೊಟ್ಟು ಎಲ್ಲರಿಗೂ ಶುಭವನ್ನು ಮಾಡಲಿ ಎಂದು ಅರ್ಚಕರು ಆಶೀರ್ವದಿಸಿ, ತೀರ್ಥ ಪ್ರಸಾದವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಪಿ ದೇವದಾಸ್ ಕುಲಾಲ್, ಗೌ. ಪ್ರಾ. ಕಾರ್ಯದರ್ಶಿ ಕರುಣಾಕರ ಬಿ ಸಾಲಿಯಾನ್ , ಕೋಶಾಧಿಕಾರಿ ಜಯ ಅಂಚನ್,ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಸುಂದರ ಯನ್ ಮೂಲ್ಯ , ಜ್ಯೋತಿ ಕೊ ಅಪ್ ಕ್ರಿಡಿಟ್ ಸೊಸೈಟಿಯ ಎಲ್ಲ ಸಿಬಂದಿ ವರ್ಗ ಮತ್ತು ಜೆ ಡಿ ಡಿ ಏಜೆಂಟರು, ಎಲ್ಲ ಉಪಸಮಿತಿಯ ಸದಸ್ಯರು ,ಮಹಿಳಾ ವಿಭಾಗದ ಸದಸ್ಯರು ಹಾಗೂ ಗುರು ಭಕ್ತರು ಉಪಸ್ಥಿತರಿದ್ದು ಸಹಕರಿಸಿದರು.ನೆರೆದ ಭಕ್ತಭಿಮಾನಿಗಳಿಗೆ ಅನ್ನ ಪ್ರಸಾದ ವನ್ನು ಸ್ವೀಕರಿಸಿದರು.





Post a Comment