ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಹಾನಗರಕ್ಕೆ ಆಗಮನ
ಗುರುಭಕ್ತರಿಂದ ಭಕ್ತಿಯ ಸ್ವಾಗತ
(ಚಿತ್ರ ವರದಿ: ದಿನೇಶ್ ಕುಲಾಲ್)
ದಕ್ಷಿಣದ ಗಾಣಿಗಾಪುರವೆಂದೇ ಪ್ರಸಿದ್ಧಿ ಇವರು ಪಡೆದಿರುವ ಒಡಿಯೂರು ನ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಸಾದ್ವಿ ಶ್ರೀ ಮಾತಾನಂದಮಯಿ ಜುಲೈ 17 ಸೋಮವಾರ ತಡಸಂಜೆ ಮುಂಬೈಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದರು ಅವರನ್ನು ಗುರುಭಕ್ತರು ಭಕ್ತಿಯಿಂದ ನಗರಕ್ಕೆ ಸ್ವಾಗತಿಸಿದರು.
ಅವರು ಜುಲೈ 17ರಿಂದ ಜು.30ರ ವರೆಗೆ ಮಹಾನಗರದಲ್ಲಿ ಮೊಕ್ಕಾಂ ಹೂಡಲಿದ್ದು, ಈ ಸಂದರ್ಭದಲ್ಲಿ ಉಪನಗರ ಮತ್ತು ಥಾಣೆ ನವಿ ಮುಂಬೈ ಸಾರ್ವಜನಿಕ ದರ್ಶನ, ಗುರು ಪೂಜೆ, ಪಾದಪೂಜೆ ನಡೆಯಲಿದೆ.
ಸ್ವಾಮೀಜಿಯವರನ್ನು ಸ್ವಾಗತಿಸಲು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮತ್ತು ಒಡಿಯೂರುಶ್ರೀ ಯುವ ಸೇವಾ ಬಳಗ ಇದರ ಮುಂಬಯಿ ಘಟಕ ಪದಾಧಿಕಾರಿಗಳು, ನವಿಮುಂಬಯಿ ಮತ್ತು ಥಾಣೆಯಲ್ಲಿ ಗುರುಭಕ್ತರು ಬಾಂಬೆ ಬಂಟ್ಸ್ಅ ಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಮತ್ತಿತರರು ಉಪಸ್ಥರಿದ್ದರು.

Post a Comment