".

Header Ads

ಮುಂಬೈ :- ಚಲಿಸುತ್ತಿದ್ದ ಜೀಪ್ಗೆ ಡಿಕ್ಕಿ ಹೊಡೆದ ಟ್ರಕ್: ಸ್ಥಳದಲ್ಲೇ ಆರು ಸಾವು, ಹಲವರಿಗೆ ಗಂಭೀರ ಗಾಯ

 



ವೇಗವಾಗಿ ಬಂದ ಕಂಟೈನರ್ ಟ್ರಕ್ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.


ಮೃತರನ್ನು ಚಿನ್ಮಯ್ ಶಿಂಧೆ (15), ರಿಯಾ ಪರದೇಶಿ, ಚೈತಾಲಿ ಪಿಂಪಲ್ (27), ಸಂತೋಷ್ ಅನಂತ್ ಜಾಧವ್ (50), ವಸಂತ ಧರ್ಮ ಜಾಧವ್ (50) ಮತ್ತು ಪ್ರಜ್ವಲ್ ಫಿರ್ಕೆ ಎಂದು ಗುರುತಿಸಲಾಗಿದೆ. ಭಿವಂಡಿ ತಾಲೂಕಿನ ಪಾದ್ಘಾ ಪ್ರದೇಶದಲ್ಲಿ ಭಾರೀ ಮಳೆಯ ನಡುವೆ ಬೆಳಿಗ್ಗೆ 6.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಕೆಲವು ವಿದ್ಯಾರ್ಥಿಗಳು ಮತ್ತು ಇತರರನ್ನು ಹೊತ್ಯೊಯ್ಯುತ್ತಿದ್ದ ಜೀಪ್ ಪದ್ಘಾದಿಂದ ಖಡವಲಿ ರೈಲು ನಿಲ್ದಾಣದ ಕಡೆಗೆ ಹೋಗುತ್ತಿತ್ತ. ಈ ವೇಳೆ ಎದುರಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ, ಜೀಪ್ ಹೆದ್ದಾರಿಯಿಂದ ಕನಿಷ್ಠ 50 ಅಡಿಗಳಷ್ಟು ದೂರ ಹೋಗಿ ಬಿದ್ದಿದೆ. ಕೂಡಲೇ ಸ್ಥಳೀಯರು ಜಿಪ್ನಲ್ಲಿದ್ದ ಸಂತ್ರಸ್ತರನ್ನು ಸಹಾಯಕ್ಕೆ ಆಗಮಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಈ ಕುರಿತು ಮಾತನಾಡಿದ ಪೊಲೀಸರು, ಗಂಭೀರವಾಗಿ ಗಾಯಗೊಂಡ ಮೂವರಿಗೆ ಭಿವಂಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಣ್ಣಪುಟ್ಟ ಗಾಯಗೊಂಡಿರುವ ಇತರ ಮೂವರಿಗೆ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Powered by Blogger.