".

Header Ads

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ; ಇಂದು ಮಹಿಳಾ ವಿಭಾಗದ ಆಶ್ರಯದಲ್ಲಿ" ಆಷಾಢ ಹಬ್ಬ" ಆಚರಣೆ,

ಮುಂಬಯಿ :   ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ಮಹಿಳಾ ವಿಭಾಗದ ವತಿಯಿಂದ ಜು. 30 ರಂದು ಸಂಜೆ 4 ಗಂಟೆಗೆ ಉತ್ಕರ್ಷ ವಿದ್ಯಾ ಮಂದಿರ, ಪುಷ್ಪ ಪಾರ್ಕ್ ದಪ್ತರೆ ರೋಡ್, ಮಲಾಡ್ ಪೂರ್ವ ಇಲ್ಲಿ "ಆಷಾಢ ಹಬ್ಬ "ಕಾರ್ಯಕ್ರಮ ನಡೆಯಲಿದೆ. 

ಕರಾವಳಿತುಳು  ಕನ್ನಡಿಗರ ಸಂಸ್ಕೃತಿ, ಸಂಪ್ರದಾಯ ದಂತೆ ಆಟಿ ತಿಂಗಳ ರುಚಿಕರವಾದ ಪಾಕಪದ್ಧತಿಯ ಆಷಾಢ ಹಬ್ಬ ಆಚರಣೆಯ ಅಂಗವಾಗಿ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿ  ಯವರು  ವಹಿಸಲಿರುವರು.

ಕಾರ್ಯಕ್ರಮಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ನೇತೃತ್ವದಲ್ಲಿ ಮಹಿಳಾ ಪದಾಧಿಕಾರಿಗಳ ಮುತ್ವರ್ಜಿಯಲ್ಲಿ ನಡೆಯಲಿದೆ.

ಪರಿಸರದ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪರವಾಗಿ ಸಮಿತಿಯ , ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್, ಉಪಾಧ್ಯಕ್ಷರುಗಳಾದ ವಿ. ಕುಮರೇಶ್ ಆಚಾರ್ಯ,  ಸಂತೋಷ್ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಸುಂದರ್ ಪೂಜಾರಿ, ಸನತ್ ಪೂಜಾರಿ,   ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಶೀಲಾ  ಪೂಜಾರಿ, ಉಪಕಾರ್ಯಾಧ್ಯಕ್ಷರುಗಳಾದ ಲಲಿತ ಎಸ್ ಗೌಡ, ಗೀತಾ ಜೆ. ಮೆಂಡನ್, ಸಂಧ್ಯಾ ಪ್ರಭು, ಜೊತೆ ಕೋಶಾಧಿಕಾರಿ ನಳಿನಿ ಕರ್ಕೇರ, ಜಯಲಕ್ಷ್ಮಿ ನಾಯಕ್, ಜೊತೆ ಕಾರ್ಯದರ್ಶಿ ಶೋಬಾ  ಎಲ್ ರಾವ್,  ಸಲಹೆಗಾರರಾದ ಭಾರತಿ  ಎಸ್ ವಾಗ್ಲೆ, ಮೋಹಿನಿ ಜೆ ಶೆಟ್ಟಿ,  ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ ಮೆಂಡನ್, ಕಾರ್ಯದರ್ಶಿ ಸುದೀಪ್ ಪೂಜಾರಿ, ಕೋಶಾಧಿಕಾರಿ ದಿಶಾ ಕರ್ಕೇರ,  ಸಂಚಾಲಕ  ಡಾ. ಸಶಿನ್ ಆಚಾರ್ಯ ಉಪ ಕಾರ್ಯಾಧ್ಯಕ್ಷರುಗಳಾದ ಯೋಗೇಶ್ವರಿ ಗೌಡ,  ದಿವ್ಯ ಪೂಜಾರಿ ಅಮೀನ್, ನವೀನ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ಶಿವಾನಿ ಪ್ರಭು, ಜೊತೆ ಕಾರ್ಯದರ್ಶಿ ಪವನ್ ರಾವ್, ಸಲಹಾ ಸಮಿತಿಯ ಸದಸ್ಯರಾದ ರಶ್ಮಿ ಪೂಜಾರಿ, ಪ್ರಣಿತಾ ಶೆಟ್ಟಿ, ಸಾಮಾಜಿಕ ಮಾಧ್ಯಮ ಉಸ್ತುವಾರಿಗಳಾದ ಹರ್ಷ ಕುಂದರ್, ನಿಧಿ ನಾಯಕ್ ಮತ್ತು ಇತರ ಸದಸ್ಯರು ವಿನಂತಿಸಿದ್ದಾರೆ.
Powered by Blogger.