".

Header Ads

*ಮುಂಬಯಿ - ಮಲಾಡ್ ಕುರಾರ್ ವಿಲೇಜ್ ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ : ಮಹಿಳಾ ವಿಭಾಗದ ವತಿಯಿಂದ "ಆಟಿಡೊಂಜಿ ದಿನ "

 

*ಮುಂಬಯಿ - ಮಲಾಡ್ ಕುರಾರ್ ವಿಲೇಜ್  ಶ್ರೀ ಮಹತೋಭಾರ ಶನೀಶ್ವರ  ದೇವಸ್ಥಾನ ದೇವಸ್ಥಾನ ಕಳೆದ 50 ವರ್ಷಗಳಿಂದಲೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಹಾಗೂ  ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚು ಮಾನ್ಯತೆ ಕೊಡುವ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳೆದಿದೆ. 

ದೇವಸ್ಥಾನವನ್ನು ಆಡಳಿತ ನಡೆಸುತ್ತಿರುವಶ್ರೀ ಶನಿಮಹಾತ್ಮ  ಪೂಜಾ ಸಮಿತಿ ಹಾಗೂ  ಮಹಿಳಾ ವಿಭಾಗದವರಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತ ಮಾದರಿ ಸಂಸ್ಥೆಯಾಗಿ ಬೆಳೆಯುತ್ತ ಬಂದಿರುತ್ತದೆ .

ಅದೇ ರೀತಿ ಸ್ವರ್ಣಮಹೋತ್ಸವದ ಸಂಭ್ರಮದಲ್ಲಿರುವ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷ  ಶೀತಲ್ ಕೋಟ್ಯಾನ್ ಅವರ ನೇತೃತ್ವದಲ್ಲಿ ತುಳುನಾಡ ಸಂಸ್ಕೃತಿ ಆಚರಣೆಯ ಮಾದರಿಯಾಗಿ ಜುಲೈ 23ರ ರವಿವಾರದಂದು "ಆಟಿಡೊಂಜಿ ದಿನ " ಎಂಬ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.





  ಮಹಿಳಾ ವಿಭಾಗದ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ತಿಂಡಿ ತಿನಿಸು  ಖಾದ್ಯಗಳನ್ನು ತಂದು ಕಾರ್ಯಕ್ರಮಕ್ಕೆ  ಸಹಕರಿಸಿದರು ಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ  ಶ್ರೀನಿವಾಸ ಸಾಪಲ್ಯರು ಅಡುಗೆಯಲ್ಲಿ ಬಳಸಲಾದ ಸೊಪ್ಪು ಹಾಗೂ ಇತರ ವಸ್ತುಗಳನ್ನು ಆಟಿ ತಿಂಗಳಿನಲ್ಲಿ ಯಾತಕ್ಕಾಗಿ ಬಳಸುತ್ತಾರೆ ಹಾಗೂ ಅದರಲ್ಲಿರುವ ಔಷಧೀಯ ಗುಣಗಳನ್ನು ವಿಸ್ತಾರವಾಗಿ ತಿಳಿಸಿ  ಸಹಕರಿಸಿದ ಎಲ್ಲಾ ಮಹಿಳೆಯರಿಗೂ ಧನ್ಯವಾದಗಳು ತಿಳಿಸಿದರು.      ವಿಶೇಷವಾಗಿ ಅಡುಗೆಯನ್ನು ಮಾಡಿದವರಿಗೆ ಪ್ರಭಾಕರ ಶೆಟ್ಟಿ ಗೊರೆಗಾವ್ ಇವರಿಂದ ಬಹುಮಾನಗಳನ್ನು ಆಯೋಜಿಸಲಾಗಿತ್ತು ಇದಕ್ಕಾಗಿ ಮೂರು ಜನ ತೀರ್ಪುಗಾರರನ್ನು ನಿಯೋಜಿಸಲಾಗಿತ್ತು ರತಿಕ ಶ್ರೀನಿವಾಸ ಸಪಾಲ್ಯ.ಕಾಂತಿ ಪ್ರಭಾಕರ್ ಶೆಟ್ಟಿ. ಸಂತೋಷ್ ಭಂಡಾರಿ ಗೊರೆಗಾoವ್. ತೀರ್ಪುಗಾರರು ಮೂರು ಜನರನ್ನು ಆಯ್ಕೆ ಮಾಡಿದರು ಪ್ರಥಮ ಬಹುಮಾನ ಪ್ರಭಾಕರ್ ಶೆಟ್ಟಿ. ದ್ವಿತೀಯ ಬಹುಮಾನ ಶಾಲಿನಿ ಶೆಟ್ಟಿ. ತೃತಿಯ ಬಹುಮಾನ  ಲತಾ ಪೂಜಾರಿ ಹಾಗೂ ಸಹಕರಿಸಿದ ಎಲ್ಲಾ ಮಹಿಳೆಯರಿಗೆ ಕಾಂತಿ ಪ್ರಭಾಕರ ಶೆಟ್ಟಿಯವರ ಮಾತ್ರಶ್ರೀಯವರ ಹಸ್ತದಿಂದ  ಪ್ರೋತ್ಸಾಹ ಧನವನ್ನು ವಿತರಿಸಲಾಯಿತು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಮಹಿಳಾ ಕಾರ್ಯಾಧ್ಯಕ್ಷೆ  ಶೀತಲ್ ಕೋಟ್ಯಾನ್ ಕೃತಜ್ಞತೆ ಸಲ್ಲಿಸಿದರು.
ಮಹಿಳಾ ವಿಭಾಗದ ಕಾರ್ಯದರ್ಶಿ ಜಯಂತಿ ಸಾಲ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗಳು ನೀಡಿದರು.
Powered by Blogger.