".

Header Ads

ಹಾಸ್ಯ ಪ್ರಧಾನ ಕೊಂಕಣಿ ಸಂಗೀತ ನಾಟಕ 'ಲಗ್ನಾ ಪಿಶ್ಶ್ಯೆ' ಮೂಹೂರ್ತ


ಮುಂಬೈ:ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಕಾಸರಕೋಡು ಗ್ರಾಮದ ಬಿಂದುಮಾಧವ ದೇವಸ್ಥಾನ ಮೂಲದ ಅನುಭವಸ್ಥ ನಾಟಕಕಾರ ಬಾಲಕೃಷ್ಣ ಪುರಾಣಿಕ ವಿರಚಿತ ಹಾಸ್ಯ ಪ್ರಧಾನ ಕೊಂಕಣಿ ಸಂಗೀತ ನಾಟಕ ' ಲಗ್ನಾ ಪಿಶ್ಶ್ಯೇ ' ಲಿಮ್ಕಾ ದಾಖಲೆ ಖ್ಯಾತಿ ದಿಗದರ್ಶಕ ಡಾ. ಚಂದ್ರಶೇಖರ್ ಶೆಣೈ ಯವರ ನಿರ್ದೇಶನದಲ್ಲಿ ಇತ್ತೀಚಿಗೆ ಸ್ಥಾಪಿಸಲ್ಪಟ್ಟ  ' ಆಮ್ಮಿ ರಂಗಕರ್ಮಿ ' ಕೊಂಕಣಿ ನಾಟಕ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ ಪ್ರಸ್ತುತ ಪಡಿಸಲಿದೆ. ಈ ಕುರಿತು ನಾಟಕದ ಮೂಹೂರ್ತ ಸಮಾರಂಭವು ಮುಂಬೈಯ ದಾದರ್ ( ಪೂರ್ವ ) ದ ಸಂಸ್ಥೆಯ ವಿಶ್ವಸ್ಥ ರ ಕಚೇರಿಯಲ್ಲಿ ವಿಶ್ವಸ್ಥ ರಾದ ಉದ್ಯಮಿ ಎನ್.ಎಸ್.ಕಾಮತ್, ನಾಟಕಕಾರ ಡಾ. ಚಂದ್ರಶೇಖರ್ ಶೆಣೈ, ರಂಗನಟ, ಯಕ್ಷಗಾನ ಕಲಾವಿದ ತೋನ್ಸೆ ವೆಂಕಟೇಶ್ ಶೆಣೈ ಮತ್ತು ಕೊಂಕಣಿ- ಕನ್ನಡ ಹಾಸ್ಯ ರಂಗನಟ, ಕನ್ನಡಿಗ ಕಲಾವಿದರ ಪರಿಷತ್ತಿನ ಉಪಾಧ್ಯಕ್ಷ ಕಮಲಾಕ್ಷ ಸರಾಫ್ ನೇತೃತ್ವದಲ್ಲಿ ಹಾಗೂ ಅವರ ಉಪಸ್ಥಿತಿಯಲ್ಲಿ ಶನಿವಾರ, ಜುಲೈ 22, ರಂದು ನದೆಯಿತು.

' ಲಗ್ನಾ ಪಿಶ್ಶ್ಯೆ ' ಕೊಂಕಣಿ ನಾಟಕದ ಪ್ರಧಾನ ಭೂಮಿಕೆಯಲ್ಲಿ ಹಿರಿಯ ರಂಗ ನಟ ಕಮಲಾಕ್ಷ ಸರಾಫ್, ಹಾಸ್ಯ ರಂಗ ಕಲಾವಿದ ಹರೀಶ್ ಚಂದಾವರ, ಕೊಂಕಣಿ ಹಿರಿಯ ನಟ  ತೋನ್ಸೆ ವೆಂಕಟೇಶ್ ಶೆಣೈ, ಯುವ ಕಲಾವಿದರಾದ ಜಯೇಶ್ ಪ್ರಭು, ಅನುಪಮ ಕಲಾವಿದೆ ಅರ್ಚನಾ ಭಟ್, ವೈಷ್ಣವಿ ಪ್ರಭು ಇನ್ನಿತರರು ಅಭಿನಯಿಸಲಿರುವರು.
ಸರ್ವ ಕಲಾವಿದರ ಸಹಿತ ಸಂಗೀತ ನಿರ್ದೇಶಕರಾದ ಕೃಷ್ಣ ಚಂಡಾವರರು ಕೂಡ ನಾಟಕದ ಮೂಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಸುಮಾರು ಎರಡು ತಾಸು ಅವಧಿಯಲ್ಲೀ ಸುಮಧುರ ಮತ್ತು ಪ್ರಾಸಬದ್ಧ ಛಂದಸ್ಸಿನ ಪಾರ್ಶ್ವ ಗಾಯನದ ನಡುವೆ ಪ್ರೆಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವ ಲಗ್ನಾ ಪಿಶ್ಶ್'  ನಾಟಕದ ಹಲವು ಪ್ರದರ್ಶನಗಳನ್ನು 'ಆಮ್ಮೀ ರಂಗಕರ್ಮಿ ' ಮುಂಬಯಿ, ಉಪನಗರ, ಬೆಂಗಳೂರು, ಮೈಸೂರು, ಮಂಗಳೂರು, ಉತ್ತರಕನ್ನಡದ ಕರಾವಳಿಯಲ್ಲಿ, ಇನ್ನಿತರೆಡೆಯಲ್ಲಿ ಹಮ್ಮಿಕೊಂಡಿದೆ.
ನಾಟಕದ ಸಂಗೀತದ ಚೌಕಟ್ಟಿನಲ್ಲಿ ಪಾರ್ಶ್ವ ಗಾಯಕರಾಗಿ ಅಮಿತ್ ಸೌಕೂರು, ಶ್ಲೋಕಾ ಚಂದಾ ವರ್, ಚೈತ್ರ ನೀರೊಲಿ, ಅಮೇವ ನೆರೋಲಿ, ವಿವೇಕ ಕಾಯ್ಕಿಣಿ ( ತಬಲಾ ) ಸಕ್ರೀಯ ರಾಗಲಿರುವರು.ದ್ವನಿ ಮುದ್ರಣ ಶರದ್ ಶಿರಾಲಿ ಇವರದ್ದು. ವೇಷಭೂಶೆ ಶಾಂತಾರಾಮ ಮಹಾಲೆ. ದ್ವನಿ ಸಂಯೋಜನೆಯ ಸಹಿತ ನಾಟಕ ಪ್ರದರ್ಶನಗಳ ಸಂಯೋಜನೆಯ ಹೊಣೆಯನ್ನು ಮುಖ್ಯವಾಗಿ ವಿಶ್ವಸ್ಥ ಸುಧಾಕರ ಭಟ್, ಎನ್.ಎಸ್.ಕಾಮತ್, ವೆಂಕಟೇಶ್ ಶೆಣೈ, ಅಂತೆಯೇ ಕಲಾವಿದರಾದ ಕಮಲಾಕ್ಷ ಸರಾಫ್ ರು ವಹಿಸಲಿದ್ದಾರೆ.
Powered by Blogger.