".

Header Ads

ಶಿವಸೇನಾ ದಕ್ಷಿಣ ಭಾರತ ಘಟಕ ಥಾಣೆ ಜಿಲ್ಲಾ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫಾರ್ ಫೌಂಡೇಶನ್ - ಮಹಿಳಾ ಭಚತ್ ಗಟ್ ಪುಸ್ತಕ ವಿತರಣೆ ಹಾಗೂ ಪ್ರಮಾಣ ಪತ್ರ ವಿತರಣೆ



ಸರಕಾರದಿಂದ ಸಿಗುವ ಸೌಲಭ್ಯಗಳ ಪ್ರಯೋಜನ ನಮ್ಮ ಮಹಿಳೆಯರು ಪಡೆಯಲಿ - ಅನುಪಮಾ ಶೆಟ್ಟಿ
  
ಸ್ಥಳೀಯ ನಾಯಕ ರೊಂದಿಗೆ ಸುದೀರ್ಘ ಸಂವಾದ ನಡೆಸಿ ನಮ್ಮ ಮಹಿಳೆಯರು ಕೂಡ ಇದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಪಡೆದುಕೊಂಡು ಈ ಯೋಜನೆಯ ಲಾಭ ಪಡೆಯುವ ಉದ್ದೇಶ ದಿಂದ ಈ ಕಾರ್ಯಕ್ರಮ ವನ್ನು ನಾವು ನಮ್ಮ ನೆಚ್ಚಿನ ಸಂಸದರಾದ ಡಾ ಶ್ರೀಕಾಂತ್ ಏಕನಾಥ್ ಶಿಂದೆ ಯವರ ಅಪೇಕ್ಷೆಯ ಮೇರೆಗೆ ಅವರ ಮಾರ್ಗದರ್ಶನ ದಿಂದ ಅಯೋಜಿಸಿದ್ದೇವೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಭಚತ್ ಘಟ್ ನಲ್ಲಿ ಸದಸ್ಯರಾಗಿ ಸರಕಾರದ ವತಿಯಿಂದ ಸಿಗುವ ಸೌಲಭ್ಯಗಳ ಪ್ರಯೋಜನ ಗಳನ್ನು ನಾವು ಕೂಡ ಪಡೆದುಕೊಳ್ಳೋಣ ಎಂದು ಶಿವಸೇನಾ ದಕ್ಷಿಣ ಭಾರತೀಯ ಘಟಕದ ಥಾಣೆ ಜಿಲ್ಲಾ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅನುಪಮಾ ಶೆಟ್ಟಿ  ಇವರು ಜುಲೈ 9 ರ ಭಾನುವಾರ ಸಂಜೆ  ಶಿವಸೇನಾ ಮಧ್ಯವರ್ತಿ ಶಾಖೆಯಲ್ಲಿ ಶಿವಸೇನಾ ದಕ್ಷಿಣ ಭಾರತ ಘಟಕ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫಾರ್ ಫೌಂಡೇಶನ್ ದೊ0ಬಿವಳಿ ಇದರ ಅಯೋಜನೆಯಲ್ಲಿ ನಡೆದ  ಮಹಿಳಾ ಭಚತ್ ಗಟ್ ಪುಸ್ತಕ ವಿತರಣೆ ಹಾಗೂ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡುತ್ತ ನುಡಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಥಾಣೆಯ ಮಾಜಿ ಮೇಯರ್ ಮೀನಾಕ್ಷಿ ಶಿಂಧೆ ಯವರು ಮಾತನಾಡುತ್ತ ದಕ್ಷಿಣ ಭಾರತೀಯರು ಮುಂಬಯಿಗೆ ಬಂದು ಶ್ರಮ ವಹಿಸಿ ಈ ಮಟ್ಟಕ್ಕೆ ಬಂದಿದ್ದೇವೆ, ಅದರಲ್ಲಿ ನಾನು ಕೂಡ ಓಬ್ಬಳು, ಮಹಿಳೆಯರು ಮನೆಯಲ್ಲಿ ಕೂರದೆ ಸ್ಥಳೀಯ ರೊಂದಿಗೆ ಸೇರಿ ಈ ಯೋಜನೆಗಳನ್ನು ಪರಿಶ್ರಮದಿಂದ ನಿರ್ವಹಿಸಿ, ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ಪಡೆದು, ಆದಷ್ಟು ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದರು.

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಶಿವಸೇನಾ ಕಲ್ಯಾಣ ಜಿಲ್ಲಾ ಪ್ರಮುಖ್ ಗೋಪಾಲ್ ಆರ್ ಲ್ಯಾಂಡ್ಗೆ ಮಾತನಾಡುತ್ತ  ಶಾಸಕಿಯವಾಗಿ ಇದಕ್ಕೆ ಪಂಡ್ ಸಿಗುತ್ತದೆ, ಮತ್ತೆ ಸರಕಾರದ ವತಿಯಿಂದ ಸ್ವಉದ್ಯೋಗ ಮಾಡಲು ಕಡಿಮೆ ಬಡ್ಡಿದರ ದಲ್ಲಿ ಸಾಲ ಸಿಗುತ್ತದೆ ಈ ಸೌಲಭ್ಯ ವನ್ನು ಉಪಯೋಗಿಸಿ ಸ್ವಾವಲಂಬಿಗಳಾಗಬೇಕು ಎಂದರು.
 
ಶಿವಸೇನಾ ಶಹರ್ ಪ್ರಮುಖ್ ರಾಜೇಶ್ ಜಿ ಮೋರೆ ಮಾತನಾಡುತ್ತ ದಕ್ಷಿಣ ಭಾರತೀಯ ಘಟಕ ಥಾಣೆ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ, ಇನ್ನೂ ಮುಂದೆಯೂ ಇವರ ಈ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ವಿದಾನಸಭಾ ಕ್ಷೇತ್ರ ಪ್ರಮುಖ್ ಸಂತೋಷ್ ಚವಾಣ್ ಮಾತನಾಡುತ್ತ ಸರಕಾರದ ಇನ್ನೂ ಹಲವಾರು ಯೋಜನೆಗಳು ಇವೆ, ಹೆಚ್ಚಿನವರಿಗೆ ಆದರ ಬಗ್ಗೆ ಮಾಹಿತಿಯ ಕೊರತೆ ಇದೆ, ಇದರ ಬಗ್ಗೆ ಮಾಹಿತಿ ಪಡೆದು ಇದರ ಪ್ರಯೋಜನ ಪಡೆಯಿರಿ ಎಂದರು.


 ಶ್ರೀ ಜಗದಂಬಾ ಮಂದಿರ ಡೊಂಬಿವಲಿಯ ಅಧ್ಯಕ್ಷರಾದ ದಿವಾಕರ ಜಿ ರೈ ಮಾತನಾಡುತ್ತ ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫಾರ್ ಫೌಂಡೇಶನ್ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ, ನಿರಂತರ ಇವರಿಂದ ಇಂತ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ಅಡ್ವಾಕೇಟ್ ತೃಪ್ತಿ ಪಾಟೀಲ್  ಭಚತ್ ಘಟ್  ಬಗ್ಗೆ ಮಾಹಿತಿ ನೀಡಿದರು.

ಶಿವಸೇನಾ ದಕ್ಷಿಣ ಭಾರತ ಘಟಕದ ಸಂಪರ್ಕ ಪ್ರಮುಖ್ ಮತ್ತು  ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫಾರ್ ಫೌಂಡೇಶನ್ ನ ಕಾರ್ಯದರ್ಶಿ  ಸುಭಾಷ್ ಶೆಟ್ಟಿ ಇನ್ನಂಜೆ ಕಾರ್ಯಕ್ರಮ ನಿರೂಪಿಸಿದರೆ, ರಿತಿಕ ಸುವರ್ಣ ಧನ್ಯವಾದ ಸಮರ್ಪಿಸಿದರು.

ಮೊದಲಿಗೆ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ ನಡೆಯಿತು, ನಂತರ ಬಚತ್ ಖಾತೆಯ ಪುಸ್ತಕ, ಪ್ರಮಾಣ ಪತ್ರ, ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು. 

ಶ್ರೀ ಮೂಕಾಂಬಿಕಾ ಮಹಿಳಾ ಭಚತ್ ಗಟ್, ಶ್ರೀ ಬ್ರಹ್ಮರಾಂಬಿಕಾ ಮಹಿಳಾ ಭಚತ್ ಗಟ್, ಶ್ರೀ ಜಗದಂಬಾ ಮಹಿಳಾ ಭಚತ್ ಗಟ್, ಶ್ರೀ ದುರ್ಗಾಂಬಿಕಾ ಮಹಿಳಾ ಭಚತ್ ಗಟ್ ನ ಸದಸ್ಯರುಗಳು ಪಾಲ್ಗೊಂಡ  ಈ ಕಾರ್ಯಕ್ರಮವು ಶಿವಸೇನಾ ದಕ್ಷಿಣ ಭಾರತ ಘಟಕ ಮತ್ತು ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫಾರ್ ಫೌಂಡೇಶನ್ ನ ಸಂಯೋಜನೆಯಲ್ಲಿ  ಕಾರ್ಯಾಧ್ಯಕ್ಷೆ ಅನುಪಮ ಶೆಟ್ಟಿ ಹಾಗೂ ಕಾರ್ಯದರ್ಶಿ ಸುಭಾಷ್ ಶೆಟ್ಟಿ ಇನ್ನಂಜೆ ಯವರ ಸಂಪೂರ್ಣ ಸಹಕಾರದೊಂದಿಗೆ ನಡೆಯಿತು.
Powered by Blogger.