".

Header Ads

ಕಾರ್ಕಳದ ಹೆಡ್ ಕಾನ್ ಸ್ಟೇಬಲ್ ಪ್ರಶಾಂತ್ ಆತ್ಮಹತ್ಯೆ

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಹೆಚ್ ಸಿ. 2190 ಪ್ರಶಾಂತ ಕೆ. ಎನ್. ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಸುದ್ದಿ ವರದಿಯಾಗಿದೆ. 

 ಪ್ರಶಾಂತ್  ಕೆ. ಎನ್. ರವರು 1997 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡವರು. ಕಾಕ೯ಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದವರು.  

ಸುಮಾರು 15 ವರ್ಷಗಳಿಂದ ಇವರನ್ನು ಸಕ್ಕರೆ ಖಾಯಿಲೆ ಬಾಧಿಸಿತ್ತು. ದಿನಾಂಕ. 15/07/2023 ರಂದು ರಾತ್ರಿ ಮನೆಯಲ್ಲಿ  ಊಟ ಮಾಡಿಕೊಂಡ ಬಳಿಕ ಮಲಗಿದ್ದವರು ರಾತ್ರಿ 10 ಗಂಟೆಯಿಂದ ದಿನಾಂಕ 16/07/2023 ಬೆಳಿಗ್ಗೆ 05:15 ಗಂಟೆಯ ಮದ್ಯಾವಧಿಯಲ್ಲಿ ಶುಗರ್ ಕಾಯಿಲೆ ಬಗ್ಗೆ ಮನನೊಂದು ಮನೆಯ ಹಿಂಬದಿ ತಗಡು ಶೀಟ್ ಮಾಡಿಗೆ ನೈಲಾನ್ ಹಗ್ಗ ಕಟ್ಡಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುತ್ತಾರೆ. 

ಮೃತರಿಗೆ ಸುಮಾರು 49 ವರ್ಷ ವಯಸ್ಸಾಗಿದ್ದು, ಅವಿವಾಹಿತ ರಾಗಿರುತ್ತಾರೆ. ಅವರು ತಾಯಿ, ಓರ್ವ ಅಕ್ಕ ಮತ್ತು ಮೂರು ಜನ‌ ತಂಗಿ‌ಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Powered by Blogger.