".

Header Ads

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಗನನ್ನೇ ಕೊಲೆಗೈದ ತಾಯಿ....!

 


ನಗರದ ಜನರು ಬೆಚ್ಚಿ ಬೀಳಿಸೋ ರೀತಿಯಲ್ಲಿ ತಾಯಿಯೊಬ್ಬಳೇ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಆಘಾತಕಾರಿ ಘಟನೆ ನಡೆದಿದೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಕುಡಿದು ಬಂದು ದಿನವೂ ಗಲಾಟೆ ಮಾಡುತ್ತಿದ್ದಂತ ಚಾಂದ್ ಪಾಷಾ(40) ಎಂಬ ಪುತ್ರನಿಗೆ, ತಾಯಿ ಸೋಫಿಯಾಬಿ(60) ಹೆದರಿಸೋ ಸಲುವಾಗಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಡ್ರಾಮಾ ಮಾಡಿದ್ದಾರೆ.

ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆಯು, ನಿಜವಾದ ಕಾರಣ, ನೋಡನೋಡುತ್ತಿದ್ದಂತೆ ತಾಯಿ ಎದುರೇ ಸುಟ್ಟು ಚಾಂದ್ ಪಾಷಾ ಹೋಗಿದ್ದಾನೆ.

ಪುತ್ರ ಚಾಂದ್ ಪಾಷಾನನ್ನು ಭಯಪಡಿಸಲು ಯತ್ನಿಸುವ ಕಾರಣಕ್ಕೆ ಹೀಗೆ ಮಾಡಿದಂತ ಸೋಫಿಯಾಬಿ ಅವರು, ಕೈತಪ್ಪಿ ಬೆಂಕಿ ಕಡ್ಡಿಗೀರಿದ್ದಾರೆ. ಇದರಿಂದಾಗಿ ಪುತ್ರ ಚಾಂದ್ ಪಾಷಾನಿಗೆ ಕ್ಷಣಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Powered by Blogger.