ಮೂಡಬಿದಿರೆ ಸುಷ್ಮಾ ಫೋಟೋ ಸ್ಟುಡಿಯೋ ಮಾಲಕ ಹೃದಯಾಘದಿಂದ ಸಾವು
ಮೂಡಬಿದಿರೆ ಸುಷ್ಮಾ ಫೋಟೋ ಸ್ಟುಡಿಯೋ ಮಾಲಕರಾದ ಸುಬ್ಬು ಎಂಬುವರು ಹೃದಯಾಘದಿಂದ ಸಾವನ್ನಪ್ಪಿದ್ದಾರೆ. ಇವರು ಮೂಡುಬಿದ್ರೆ ವಲಯದ ಎಸ್ ಕೆ ಪಿ ಎ ಹಿರಿಯ ಸದಸ್ಯರಾಗಿದ್ದರು. ಮೂಡಬಿದಿರೆಯಲ್ಲಿ ಕಳೆದ ಮೂವತ್ತು ವಷಗಳಿಂದ ಛಾಯವೃತ್ತಿಯನ್ನು ಮಾಡಿಕೊಂಡು ಹೆಸರಾಂತ ಫೋಟೋಗ್ರಾಪರ್ ಆಗಿ ಎಲ್ಲರೋಂದಿಗೆ ಆತ್ಮೀಯರಾಗಿದ್ದು ಸುಬ್ರಹ್ಮಣ್ಯ ಎಂಬ ನಾಮಕರಣ ಹೊಂದಿದ್ದ ಅವರನ್ನು ಸುಬ್ಬು ಎಂದೇ ಅವರ ಆತ್ಮೀಯರು ಕರೆಯುತ್ತಿದ್ದು ಅವರು ಪತ್ರಿಕೆಗಳ ಛಾಯಗ್ರಾಹಕರಾಗಿಯೂ ಸೇವೆ ಸಲ್ಲಿಸಿದ್ದಾರೆ ಅಲ್ಲದೇ ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿ ಸೈ ಏನಿಸಿಕೊಂಡಿದ್ದಾರೆ. ಅವರಿಗೆಎದೆ ನೋವು ಕಾಣಿಸಿಕೊಂಡ ಇನ್ನೆಲೆಯಲ್ಲಿ ತಡ ರಾತ್ರಿ ನಗರದ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೇ ಹೃದಯಘಾತದಿಂದ ನಿಧನಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅವರ ಅಕಾಲಿಕ ನಿಧನಕ್ಕೆ ಛಾಯಗ್ರಾಹಕರು ಸಂತಾಪ ಸೂಚಿಸಿದ್ದಾರೆ.
Post a Comment