".

Header Ads

ಜುಲೈ 27 ರಂದು ಡೊಂಬಿವಲಿಯಲ್ಲಿ "ಕುಮಾರ ವಿಜಯ" ಪೌರಾಣಿಕ ಯಕ್ಷಗಾನ ಪ್ರದರ್ಶನ

ಅಜೆಕಾರು ಕಲಾಭಿಮಾನಿ ಬಳಗ (ರಿ) ಮುಂಬಯಿ ಇವರ ಸಂಯೋಜನೆಯಲ್ಲಿ ಜುಲೈ 27 ರ ಗುರುವಾರ ಸಂಜೆ ನಾಲ್ಕು ಗಂಟೆಗೆ ಡೊಂಬಿವಲಿ  ಎಂ. ಐ. ಡಿ. ಸಿ ಯ  ಎಲ್ ಐ ಸಿ ಕಚೇರಿ ಸಮೀಪದಲ್ಲಿರುವ ಹೋಟೆಲ್ ಶಿವಂ ಬ್ಯಾಂಕೇಟ್ ಸಭಾಗ್ರಹದಲ್ಲಿ ಪ್ರಶಸ್ತಿ ವಿಜೇತ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ತಂಡ ಬಾಳ - ಕಾಟಿಪಲ್ಲ ತಂಡದ ಕಲಾವಿದೆಯರಿಂದ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಅವರ ನಿರ್ದೇಶನದಲ್ಲಿ "ಕುಮಾರ ವಿಜಯ" ಪೌರಾಣಿಕ ಯಕ್ಷಗಾನವು ಪ್ರದರ್ಶಿಸಲ್ಪಡಲಿದೆ.

 ಯಕ್ಷಗಾನದ ಮಧ್ಯಾಂತರದಲ್ಲಿ ಬಂಟರ ಸಂಘ ಮುಂಬೈ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮ ದಲ್ಲಿ ಅಭ್ಯಾಗತರುಗಳಾಗಿ ಬಂಟರ  ಸಂಘ ಮುಂಬೈ ಪೂರ್ವ ವಲಯದ ಸಮನ್ವಯಕರಾದ ಸುಬ್ಬಯ್ಯ ಶೆಟ್ಟಿ,  ಅತಿಥಿಗಳಾಗಿ  ಶ್ರೀ ಜಗದಂಬ ಮಂದಿರ ಡೊಂಬಿವಲಿಯ ಅಧ್ಯಕ್ಷರಾದ ದಿವಾಕರ್ ಜಿ ರೈ, ಬಂಟರ ಸಂಘ ಡೊಂಬಿವಲಿ  ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ರಾಜೀವ ಭಂಡಾರಿ, ಉಪಕಾರ್ಯಾಧ್ಯಕ್ಷರಾದ ಆನಂದ್ ಶೆಟ್ಟಿ ಎಕ್ಕಾರು, ಸಂಚಾಲಕರಾದ ಕಲ್ಲಡ್ಕ ಕರುಣಾಕರ ಶೆಟ್ಟಿ,   ಬಂಟರ ಸಂಘ ಮುಂಬಯಿ  ಭೀವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ರವೀಂದ್ರ ವೈ ಶೆಟ್ಟಿ, ಹೋಟೆಲ್ ಶಿವಂ ನ ಪಾಲುದಾರರಾದ ಶೇಖರ್ ಶೆಟ್ಟಿ, ಬಂಟರ ವಾಣಿಯ ಸಂಪಾದಕರಾದ ಪ್ರೇಮನಾಥ ಶೆಟ್ಟಿ ಮುಂಡ್ಕೂರು, ಕಲಾ ಜಗತ್ತಿನ ರೂವಾರಿ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ, ಉದ್ಯಮಿಗಳು, ಕಲಾ ಪೋಷಕರುಗಳಾದ ಹರೀಶ್ ಶೆಟ್ಟಿ ಪಡುಕುಡೂರು, ವಿಜಿತ್ ಶೆಟ್ಟಿ, ಶಶಿಧರ್ ಶೆಟ್ಟಿ, ಸುರೇಶ್ ಶೆಟ್ಟಿ, ಗಣೇಶ್ ಆಳ್ವ ಕುಂಬಳೆ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ತಂಡದ ಕಲಾವಿದರಾದ ಕು. ಶಿವಾನಿ ಸುರತ್ಕಲ್, ಕು. ಶ್ರೀರಕ್ಷ ಕಳಸ, ಕು. ಪ್ರತಿಷ್ಠ ಎಸ್ ರೈ ಅವರುಗಳನ್ನು ಸನ್ಮಾನಿಸಲಾಗುವುದು. 

ನಟ, ನಿರೂಪಕ ಹೇಮಂತ್ ಶೆಟ್ಟಿ ಕಾವೂರು ಗುತ್ತು ನಿರೂಪಸಿ,  ಶಿವಚಂದ್ರ ಶೆಟ್ಟಿ, ಶೇಖರ್ ಶೆಟ್ಟಿ, ಪ್ರೇಮನಾಥ ಶೆಟ್ಟಿ ಮುಂಡ್ಕೂರು, ದೇವದಾಸ ಶೆಟ್ಟಿ, ಮಧು ಶೆಟ್ಟಿ ಯವರ ಸಂಪೂರ್ಣ ಸಹಕಾರದಲ್ಲಿ ಉಚಿತವಾಗಿ ಪ್ರದರ್ಶನ ಗೊಳ್ಳಲಿರುವ ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ತಂಡದ ಮುಂಬಯಿ ಸಂಚಾಲಕರಾದ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ, ಹಾಗೂ ತಂಡದ ವ್ಯವಸ್ಥಾಪಕರಾದ ಮಾಧವ ಶೆಟ್ಟಿ ಬಾಳ ಕಾಟಿಪಳ್ಳ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.