ಮಗುವಿನ ಬಾಯಿಗೆ ಹಲ್ಲಿ ನುಗ್ಗಿ 3 ವರ್ಷದ ಮಗು ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ಕೋಬ್ರಾದಲ್ಲಿ ನಡೆದಿದೆ
ರಾಜ್ ಕುಮಾರ್ ಚಂಡೆ ಎಂಬುವರ ಕುಟುಂಬವು ನಾಗಿನಬಂಡಾ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರ ಮೂರನೇ ಮಗ ಜಗದೀಶ್ನೇ ಮೃತ ದುರ್ದೈವಿಯಾಗಿದ್ದಾನೆ. ಘಟನೆಯ ವೇಳೆ ಎರಡೂವರೆ ವರ್ಷದ ಜಗದೀಶ್ ಮಲಗಿದ್ದ ಎನ್ನಲಾಗಿದ್ದು, ಈ ವೇಳೆ ಆತನ ತಾಯಿ ಮನೆಗೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ನಂತರ ಮಲಗಿದ್ದ ಜಗದೀಶ ಮಗನನ್ನು ನೋಡಿದಾಗ ಆತ ನಿಶ್ಚಲನಾಗಿ ಬಿದ್ದಿದ್ದ ಎನ್ನಲಾಗಿದೆ.
ಬಾಯಿಯೊಳಗೆ ಹಲ್ಲಿ ಬಿದ್ದು ಉಸಿರುಗಟ್ಟಿರುವ ಶಂಕೆ.
ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಲಕ ಹಲ್ಲಿ ನುಗ್ಗಿ ಸತ್ತಿದ್ದಾನೆಯೇ ಅಥವಾ ಉಸಿರುಕಟ್ಟುವಿಕೆಯಿಂದ ಮೃತಪಟ್ಟಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ (Enquiry) ನಡೆಸುತ್ತಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ಆದರೆ, ಹಲ್ಲಿಯ ವಿಷದಿಂದ (Poison) ಬಾಲಕ ಸಾವನ್ನಪ್ಪಿರುವ ಸಾಧ್ಯತೆ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಹಲ್ಲಿ ಉಸಿರಾಟಕ್ಕೆ ಅಡ್ಡಿಯಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸತ್ಯ ಏನೆಂಬುದು ತಿಳಿದು ಬರಬೇಕಿದೆ.
Post a Comment