".

Header Ads

ಶ್ರೀ ಹಟ್ಟಿಯಂಗಡಿ ಸಿದ್ದಿವಿನಾಯಕ ಯಕ್ಷಗಾನ ಮಂಡಳಿ ಕಲಾವಿದರ *ದೀಪ ದರ್ಪಣ*; ಶಾಹಡ್ ಜನರಿಗೆ ಸಂಭ್ರಮ ಕಲಾಸ್ವಾದ





ಕಲಾ ಜೀವನದ 57 ವರ್ಷ ನಾನು ಮತ್ತು ನನ್ನೂರು ಗುರುತಿಸಲ್ಪಡುವುದಕ್ಕೆ ಮುಖ್ಯ ಕಾರಣ ಯಕ್ಷಗಾನ. ನೀವು ನನಗೆ ಕೊಟ್ಟ ಸನ್ಮಾನ  ಕಲಾ ಮಾತೆಗೆ ಕೊಟ್ಟ ಗೌರವ" ಎಂದು ಬಡಗುತಿಟ್ಟಿನ ಕಲಾವಿದ ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿ ಹೇಳಿದರು.

ಅವರು ಪಾಟಿದಾರ್ ಭವನ್ ಹಾಲ್ ಮೋಹನೆ ರೋಡ್ S.B.I ಎದುರು ಶಾಹಡ್ ಬ್ರಿಡ್ಜ್ ಬಳಿ ಕಲ್ಯಾಣ್ ಪಶ್ಚಿಮದಲ್ಲಿ ಯಕ್ಷಗಾನ ಕಲಾಭಿಮಾನಿಗಳು ಹಮ್ಮಿಕೊಂಡಿದ್ದ ಯಕ್ಷಗಾನ *ದೀಪ ದರ್ಪಣ* ಪ್ರಸಂಗದ ಪ್ರದರ್ಶನ ವೇದಿಕೆಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ಸದಾನಂದ ಶೆಟ್ಟಿ ,ದಯಾನಂದ ಶೆಟ್ಟಿ, ಸತೀಶ್ ಶೆಟ್ಟಿ ನಂದ್ರೊಳ್ಳಿ ಹೋಟೆಲ್ ಇಗೋ, ಗಣೇಶ್ ಶೆಟ್ಟಿ ನಂದ್ರೊಳ್ಳಿ ಹೋಟೆಲ್ ಆನಂದ್, ಮಂಜುನಾಥ ಶೆಟ್ಟಿ ಹೆಬ್ರಿ, ರವಿ ಶೆಟ್ಟಿ ಹೋಟೆಲ್ ಮಾಯಾ, ಮಂಜುನಾಥ ಹೆಗ್ಡೆ ಹೋಟೆಲ್ ಅಂಬರ್, ಜಯರಾಮ ಶೆಟ್ಟಿ ಹೋಟೆಲ್ ಸಾಯಿರಾಜ್, ಸುಧೀರ್ ಹೆಗ್ಡೆ ವಂಡ್ಸೆ, ರತ್ನಾಕರ ಶೆಟ್ಟಿ ಹೋಟೆಲ್ ಸಾಗರ್ ವಾಶಿ, ಕಿರಣ್ ಶೆಟ್ಟಿ ಇಡೂರ್, ಸತೀಶ್ ಶೆಟ್ಟಿ ಹೋಟೆಲ್ ಚೇತನಾ, ಯುವರಾಜ್ ಪೂಜಾರಿ ಕಾರ್ತಿಕ್ ಕ್ಯಾಟರರ್ಸ್, ಪುನೀತ್  ಶೆಟ್ಟಿ ನಂದ್ರೊಳ್ಳಿ, ಅನಿಲ್ ಶೆಟ್ಟಿ ಹೋಟೆಲ್ ಸಂದೀಪ್, ಭಾಸ್ಕರ ಶೆಟ್ಟಿ ಹೋಟೆಲ್ ಸಾದನ, ಮೇಳದ ಸಂಚಾಲಕ  ವಕ್ವಾಡಿ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು. 

ಇದೇ ವೇದಿಕೆಯಲ್ಲಿ ಪ್ರಸಿದ್ಧ ಭಾಗವತ ಹೊಸಂಗಡಿ ರವೀಂದ್ರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.


Powered by Blogger.