ಮಲಾಡ್ ಲಕ್ಷ್ಮಣ್ ನಗರ ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ
ಜುಲೈ 16 ರಂದು: "ಶ್ರೀ ಶನೀಶ್ವರ ಮಹಾತ್ಮೆ" ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ'
ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಕುರಾರ್ ವಿಲೇಜ್ ಲಕ್ಷ್ಮಣ್ ನಗರ ಮಲಾಡ್ ಇಲ್ಲಿಯ ಸ್ವರ್ಣ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದ ಜುಲೈ ತಿಂಗಳ ಕಾರ್ಯಕ್ರಮವು ಜುಲೈ 16ನೇ ರವಿವಾರದಂದು ಸಾಯಂಕಾಲ 3 ಗಂಟೆಗೆ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಊರಿನ ಪ್ರಬುದ್ಧ ಕಲಾವಿದರಾದ ಶನೀಶ್ವರ ಭಕ್ತವಂದ ಪಕ್ಷಿಕೆರೆ ಮಂಗಳೂರು ಇವರು "ಶ್ರೀ ಶನೀಶ್ವರ ಮಹಾತ್ಮೆ" ಎಂಬ ಪೌರಾಣಿಕ ಕಥೆಯನ್ನು ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಆಡಿ ತೋರಿಸಲಿರುವರು.
ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಹೆಬ್ರಿ ಗಣೇಶ್. ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ಸದಾನಂದ ಶೆಟ್ಟಿಗಾರ್ ಮಿಜಾರು, ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ವಿಜಯಕುಮಾರ್ ಶೆಟ್ಟಿ ಮೈಲೊಟ್ಟು, ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು, ಸದಾಶಿವ ಆಳ್ವ ತಲಪಾಡಿ, ಗಣೇಶ ಶೆಟ್ಟಿ ಕನ್ನಡಿಗಟ್ಟೆ, ಪ್ರಸನ್ನ ಶೆಟ್ಟಿ ಅತ್ತೂರು ಭಾಗವಹಿಸಲಿದ್ದಾರೆ.
ಶನೀಶ್ವರ ದೇವಸ್ಥಾನದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕಾಗಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ.ಪಿ.ಸಾಪಲ್ಯ, ತಂಡದ ಮುಂಬೈ ಸಂಚಾಲಕ ದಿನೇಶ್ ಶೆಟ್ಟಿ ಕಾಪು ಕಲ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment