ಸಾಹಿತಿ ನಕ್ರೆ ಯಶವಂತಿ ಎನ್ ಸುವರ್ಣ ನಿಧನ ; ಸಂಪೂರ್ಣ ದೇಹ ಮಣಿಪಾಲ ಆಸ್ಪತ್ರೆಗೆ ದಾನ
ಕಾರ್ಕಳ: ನಕ್ರೆ ನಂದ್ರಬೆಟ್ಟು ನಿವಾಸಿ ಸಾಹಿತಿ ಯಶವಂತಿ ಎನ್. ಸುವರ್ಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಜುಲೈ 13) ಬೆಳಿಗ್ಗೆ ನಿಧನರಾದರು.
ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಯಶವಂತಿ ಸುವರ್ಣ ಕುಕ್ಕುಂದೂರು ಗ್ರಾಮ ಪಂಚಾಯಿತಿನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಾಹಿತಿಯಾಗಿ ಸುಮಾರು 14 ಪುಸ್ತಕಗಳನ್ನು ಇವರು ಬರೆದಿದ್ದು ನವಭಾರತ ಪತ್ರಿಕೆಯಲ್ಲಿ ಪ್ರಥಮವಾಗಿ ವರದಕ್ಷಿಣೆ ವಿರೋಧಿ ಲೇಖನವನ್ನು ಬರೆದಿದ್ದು ಸಾಮಾಜಿಕ ಪಿಡುಗುಗಳ ಬಗ್ಗೆ ಹೋರಾಟ ಮಾಡಿದ್ದರು. ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಯಶವಂತಿ ಸುವರ್ಣರು ಜೀವಿತದ ಅವಧಿಯಲ್ಲೇ ತನ್ನ ನಿಧನ ನಂತರ ತನ್ನ ದೇಹವನ್ನು ಮಣಿಪಾಲ ಆಸ್ಪತ್ರೆಗೆ ನೀಡುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಅವರ ಆಶಯದಂತೆ ಕುಟುಂಬಸ್ಥರು ಇಂದು ಅವರ ದೇಹವನ್ನು ಆಸ್ಪತ್ರೆಗೆ ದಾನ ನೀಡಿದ್ದಾರೆ.
ಮೃತರು ಪುತ್ರಿಯರಾದ ಎಂ. ಜಿ. ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕಿ ಉಷಾರಾಣಿ ಹಾಗೂ ಮಂಗಳೂರು ಗೋಕರ್ಣಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಆಶಾಲತಾ, ಸಹೋದರ ಕಾಂಗ್ರೆಸ್ ಜಿಲ್ಲಾ ವಕ್ತರರಾದ ಬಿಪಿನ್ ಚಂದ್ರಪಾಲ್, ಅಳಿಯಂದಿರಾದ ಉಡುಪಿ ಎಸ್.ಪಿ ಕಚೇರಿಯ ನಿವೃತ್ತ ಆಡಳಿತ ಅಧಿಕಾರಿ ದಿವಾಕರ ಪೂಜಾರಿ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Post a Comment