ಹಿರಿಯಡ್ಕ:- ಮನೆಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು : 242 ಗ್ರಾಂ ಚಿನ್ನಾಭರಣ, 20,000 ರೂ. ನಗದು ,40,000 ಮೌಲ್ಯದ ಕ್ಯಾಮರಾ ಕಳವು
ಮನೆಯೊಂದಕ್ಕೆ ನುಗ್ಗಿದ ಕಳ್ಳರು 8.50 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಹಿರಿಯಡ್ಕ ರಾಣಾ ವ್ಯಾಪ್ತಿಯ ಅಂಜಾರು ಗ್ರಾಮದ ಓಂತಿಬೆಟ್ಟು ಶಾಲೆಯ ಸಮೀಪದ ಶಂಕರ ಟಿ. ಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ
ನಿನ್ನೆ ಮಧ್ಯಾಹ್ನದ ವೇಳೆ ಪತ್ನಿಯೊಂದಿಗೆ ಹಿರಿಯಡ್ಕ ದೇವಸ್ಥಾನಕ್ಕೆ ಹೋಗಿದ್ದರು. ಬಳಿಕ ವಾಪಾಸು ಮಧ್ಯಾಹ್ನ 1:00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಕಂಡು ಬಂದಿದೆ.
ಮನೆಯ ಅಡುಗೆ ಕೋಣೆಯ ಕಡೆಯ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು, ಕೋಣೆಗಳಲ್ಲಿ ಇದ್ದ ಕಪಾಟಿನ ಡ್ರಾವರ್ ತೆರೆದು ಅದರ ಒಳಗಡೆ. ಇದ್ದ 8,50,000 ರೂ. ಮೌಲ್ಯದ 242 ಗ್ರಾಂ ಚಿನ್ನಾಭರಣಗಳು, 20,000 ರೂ. ನಗದು ಮತ್ತು 40,000 ಮೌಲ್ಯದ ಕ್ಯಾಮರಾವನ್ನು ಕಳವುಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಶಂಕರ ಟಿ. ಶೆಟ್ಟಿ ಅವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment