Home
>
Unlabelled
>
ಮುದ್ದಾಗಿ ಬೆಳೆಸಿದ ಚಿನ್ನದಂತ ಮಗಳ ಅತ್ಯಾಚಾರ, ಭೀಕರ ಕೊಲೆ; ಮಗಳ ಅಂತ್ಯಕ್ರಿಯೆ ವೇಳೆ ಚಿತೆಗೆ ಹಾರಿದ ತಂದೆ

ರಾಜಸ್ಥಾನದ ಭಿಲ್ವಾರಾದಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕುಲುಮೆಗೆ ಎಸೆದ ಆಘಾತಕಾರಿ ಘಟನೆಯಿಂದ ಗಲಾಟೆ ನಿಂತಿಲ್ಲ. ಈ ಹೃದಯ ವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸುಮಾರು 6 ದಿನಗಳಿಂದ ಧರಣಿ ನಡೆಸಿದ್ದರು. ಭಿಲ್ವಾರಾ: ರಾಜಸ್ಥಾನದ ಭಿಲ್ವಾರಾದಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕುಲುಮೆಗೆ ಎಸೆದ ಆಘಾತಕಾರಿ ಘಟನೆಯಿಂದ ಗಲಾಟೆ ನಿಂತಿಲ್ಲ.
ಈ ಹೃದಯ ವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸುಮಾರು 6 ದಿನಗಳಿಂದ ಧರಣಿ ನಡೆಸಿದ್ದರು. ಅಂತಿಮವಾಗಿ ಸರ್ಕಾರ ಮತ್ತು ಆಡಳಿತ ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕ ಕುಟುಂಬಸ್ಥರು ಘಟನೆ ನಡೆದು 6 ದಿನಗಳ ಬಳಿಕ ಬಾಲಕಿಯ ಅರ್ಧ ಸುಟ್ಟ ಶವದ ಅಂತಿಮ ಸಂಸ್ಕಾರ ನೆರವೇರಿಸಿದರು. ಹೆಣ್ಣು ಮಗುವಿನ ಅಂತಿಮ ಸಂಸ್ಕಾರದ ಪ್ರಕ್ರಿಯೆ ನಡೆಯುತ್ತಿರುವಾಗಲೇ ತಂದೆಯ ತಾಳ್ಮೆಯ ಕಟ್ಟೆ ಒಡೆದಿತ್ತು. ಮಗಳ ಉರಿಯುತ್ತಿರುವ ಚಿತೆಗೆ ಹಾರಿ ಪ್ರಾಣ ಬಿಡುವ ನಿರ್ಣಯ ಮಾಡಿ ಹಾರಿಬಿಟ್ಟರು.
ಆದರೆ ಅಷ್ಟರಲ್ಲೇ ಸಂಬಂಧಿಕರು ಅವರನ್ನು ಬೆಂಕಿಯಿಂದ ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇಡೀ ಘಟನೆ ಕೊಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರದ ನಂತರ ಆಕೆಯನ್ನು ಜೀವಂತವಾಗಿ ಸುಟ್ಟ ವಿಷಯ ಆಗಸ್ಟ್ 2ರಂದು ಬೆಳಕಿಗೆ ಬಂದಿದೆ. ಕೆಲವು ತಿಂಗಳ ಹಿಂದೆ ಬಾಲಕಿಯ ಸಂಬಂಧಿಕರು ತಮ್ಮ ಜಮೀನಿನ ಬಳಿ ಇರಲು ಜಾಗ ಕೊಟ್ಟಿದ್ದವರೇ ಈ ಘಟನೆ ನಡೆಸಿದ್ದರು.
ಅದೇ ಕುಟುಂಬದವರು ತಮ್ಮ ಕಾಮತೃಷೆಗೆ ಬಾಲಕಿಯನ್ನು ಬಲಿಪಶು ಮಾಡಿದರು. ತಡರಾತ್ರಿ, ವೈದ್ಯಕೀಯ ಮಂಡಳಿಯ ತಂಡದಿಂದ ಅರ್ಧ ಸುಟ್ಟ ಬಾಲಕಿಯ ಶವದ ಮರಣೋತ್ತರ ಪರೀಕ್ಷೆಯ ನಂತರ, ಸಂಬಂಧಿಕರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಿದರು. ಇನ್ನು ಘಟನೆ ವೇಳೆ ಗಾಯಗೊಂಡಿದ್ದ ಮೃತ ಬಾಲಕಿಯ ತಂದೆಯನ್ನು ಅಲ್ಲಿದ್ದ ಆಂಬ್ಯುಲೆನ್ಸ್ ಸಹಾಯದಿಂದ ಕೊಟ್ರಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಮಗುವಿನ ತಂದೆಯ ಪ್ರಾಣಾಪಾಯದಿಂದ ಪಾರಾಗಿದೆ ಎಂದು ಸರ್ಕಾರಿ ಮಹಾತ್ಮ ಗಾಂಧಿ ಆಸ್ಪತ್ರೆಯ ಅಧೀಕ್ಷಕ ಡಾ.ಅರುಣ್ ಗೌರ್ ತಿಳಿಸಿದ್ದಾರೆ.

Post a Comment