".

Header Ads

ಮುಂಬೈ:- ಸೊಸೆಗೆ ತನ್ನ ಮೂತ್ರಪಿಂಡವನ್ನೇ ದಾನ ಮಾಡಿದ ಅತ್ತೆ !

 


 ಅತ್ತೆ- ಸೊಸೆಯ ಕಥೆ ತ್ಯಾಗ ಹಾಗೂ ಸ್ಫೂರ್ತಿಯ ಮೈನವಿರೇಳಿಸುವ ಕಥೆ. ತಮ್ಮ 43 ವರ್ಷದ ಸೊಸೆಗೆ 70 ವರ್ಷದ ಅತ್ತೆ ಮೂತ್ರಪಿಂಡಗಳನ್ನು ದಾನ ಮಾಡಿದ್ದಾರೆ.

ಮುಂಬಯಿಯ ಕಂಡಿವ್ಲಿಯಲ್ಲಿ ಈ ಸ್ಫೂರ್ತಿದಾಯಕ ಘಟನೆ ನಡೆದಿದೆ. ಗಂಡ- ಹೆಂಡತಿ, ಪೋಷಕರು- ಮಕ್ಕಳು, ಸಹೋದರ- ಸಹೋದರಿಯರ ನಡುವೆ ಅಂಗಾಂಗ ದಾನ ನಡೆಯುತ್ತವೆ.

ಅದರಲ್ಲಿ ಭಾರತದಲ್ಲಿ ಮಹಿಳಾ ದಾನಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಸೊಸೆಗೆ ಅತ್ತೆ ಕಿಡ್ನಿ ದಾನ ಮಾಡುವುದು ಬಹಳ ಅಪರೂಪದ ಘಟನೆ. ನನ್ನ ವೃತ್ತಿ ಜೀವನದಲ್ಲಿ ಇಂತಹ ದಾನ ನೋಡುತ್ತಿರುವುದು ಇದು ಕೇವಲ ಮೂರನೇ ಸಲ" ಎಂದು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸೊಸೆ ಅಮಿಶಾ ಮೋಟಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಮೂತ್ರಪಿಂಡ ತಜ್ಞ ಡಾ. ಜತಿನ್ ಕೊಠಾರಿ ತಿಳಿಸಿದ್ದಾರೆ.

ಅತ್ತೆ ಪ್ರಭಾ ಮೋಟಾ ಅವರು ಸೊಸೆಗೆ ಕಿಡ್ನಿ ದಾನ ಮಾಡಿರುವ ಸಂಗತಿ ವ್ಯಾಪಕ ಮೆಚ್ಚುಗೆಗೆ ಒಳಗಾಗಿದೆ. "ಮೋಟಾ ಕುಟುಂಬ ಆದರ್ಶವನ್ನು ಸೃಷ್ಟಿಸಿದೆ. ಮುಖ್ಯವಾಗಿ ಪ್ರಭಾ ಅವರನ್ನು ಜಗತ್ತಿನ ಪ್ರತಿ ಅತ್ತೆಯಂದಿರೂ ಅನುಸರಿಸಬೇಕು" ಎಂದು ಮೋಟಾ ಕುಟುಂಬ ವಾಸವಿರುವ ಕಾಲೋನಿಯಲ್ಲಿಯೇ ವಾಸಿಸುತ್ತಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಹೇಳಿದ್ದಾರೆ.

Powered by Blogger.