ಕುಲಾಲ ಸಂಘ ಮುಂಬಯಿ ಸಂಚಾಲಕತ್ವದ ಜ್ಯೋತಿ ಕೊ-ಅಪ್ ಕ್ರೆಡಿಟ್ ಸೊಸೈಟಿ - ಸೆ. 23 ರಂದು 42ನೇ ವಾರ್ಷಿಕ ಮಹಾಸಭೆ.
ಮುಂಬಯಿ, ಸೆ. – ಕುಲಾಲ ಸಂಘ ಮುಂಬಯಿ ಸಂಚಾಲತ್ವದ ಜ್ಯೋತಿ ಕೊ-ಅಪ್ ಕ್ರೆಡಿಟ್ ಸೊಸೈಟಿಯ 42ನೇ ವಾರ್ಷಿಕ ಮಹಾಸಭೆಯು ಸೆ. 23ರ ಶನಿವಾರದಂದು ಅಪರಾಹ್ನ 4.00 ರಿಂದ ಆರ್ಯ ಸಮಾಜ ಭವನ, 232 ಪರಿನ್ ನರಿಮನ್ (ಬಜಾರಗೇಟ್) ಸ್ಟ್ರೀಟ್, ಅರ್ಯ ಸಮಾಜ ಮುಂಬಯಿ ಚೌಕ್, ಕೋಟೆ, ಮುಂಬಯಿ-400001 ಇಲ್ಲಿ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ ಬಿ. ಸಾಲ್ಯಾನ್ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸೊಸೈಟಿಯ ಶೇರುದಾರರಿಗೆ ಈಗಾಲೇ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳ ಪಿಡಿಎಫ್ ಪೈಲ್‌ನ ಲಿಂಕ್ ನ್ನು ಎಸ್.ಎಮ್.ಎಸ್. ಮೂಲಕ ಕಳುಹಿಸಲಾಗಿದ್ದು ವರದಿಯ ಮುದ್ರಣ ಪ್ರತಿ ಬೇಕಾಗಿದ್ದಲ್ಲಿ ಸೊಸೈಟಿಯ ಎಲ್ಲಾ ಶಾಖೆಗಳಲ್ಲಿ ಉಪಲಬ್ಧವಿರುವುದಾಗಿ ಸೊಸೈಟಿಯ ಪ್ರಕಟಣೆ ತಿಳಿಸಿದೆ.
ಜ್ಯೋತಿ ಕೊ-ಅಪ್ ಕ್ರೆಡಿಟ್ ಸೊಸೈಟಿ: ಮುಂಬಯಿ ಮಹಾನಗರದ ಪ್ರತಿಷ್ಠಿತ ಕುಲಾಲ ಸಂಘ ಮುಂಬಯಿ ಇವರ ವತಿಯಿಂದ 1981ರಲ್ಲಿ ಸ್ಥಾಪಿಸಲ್ಪಟ ಜ್ಯೋತಿ ಕೊ-ಅಪ್ ಕ್ರೆಡಿಟ್ ಸೊಸೈಟಿಯು ಕಳೆದ 42 ವರ್ಷಗಳಿಂದ ಮುಂಬಯಿ, ಥಾಣೆ, ನವಿ ಮುಂಬಯಿ ಮತ್ತು ಪುಣೆ ಮಹಾನಗರಗಳಲ್ಲಿ ತನ್ನ ಆರ್ಥಿಕ ಸೇವೆ ಸಲ್ಲಿಸುತ್ತಿದ್ದು ಒಟ್ಟು 6 ಶಾಖೆಗಳನ್ನು ಹೊಂದಿಕೊoಡು ಅತ್ಯುತ್ತಮ ಸೇವೆ ನೀಡಿ ಜನಮಾನ್ಯರ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗ್ರಾಹಕರಿಗೆ ದೊರಕುವ ತ್ವರಿತ ಸೇವೆಗಳು: ದಿ. ಡಾ| ಎಚ್. ಎಂ. ಸುಬ್ಬಯ್ಯ, ದಿ. ಬಂಟ್ವಾಳ ಬಾಬು ಸಾಲ್ಯಾನ್, ದಿ. ಅರ್ ಎಂ, ಮಡ್ವ, ಎನ್. ಜಿ. ಮೂಲ್ಯ ಹಾಗೂ ಗಿರೀಶ ಬಿ. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ, ದಕ್ಷ ಆಡಳಿತ ಮಂಡಳಿ ಮತ್ತು ನಿಪುಣ ಸಿಬ್ಬಂದಿ ವರ್ಗ ಹಾಗೂ ನಿಷ್ಠಾವಂತ ಪಿಗ್ಮಿ ಎಜಂಟರುಗಳನ್ನು ಹೊಂದಿರುವ ಈ ಸೊಸೈಟಿಯು ತನ್ನ ಉತ್ತಮ ರೀತಿಯ ವಿವಿಧ ಸೇವೆಗಳೊಂದಿಗೆ ಗ್ರಾಹಕರ ಮನೆ-ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ವರ್ಷದ ವ್ಯವಹಾರ ಪಕ್ಷಿನೋಟ: ಒಟ್ಟು ಸೇರುದಾರರು: 5897; ಶೇರು ಬಂಡವಾಳ: 348.29 ಲಕ್ಷ; ಒಟ್ಟು ಮೀಸಲು: 364.23 ಲಕ್ಷ; ಒಟ್ಟು ಠೇವಣಿ: 2753.60 ಲಕ್ಷ; ಒಟ್ಟು ಮುಂಗಡ: 2130.59; ಒಟ್ಟು ಹೂಡಿಕೆ: 1130.57 ಲಕ್ಷ; ದುಡಿಯುವ ಬಂಡವಾಳ: 3588.53 ಲಕ್ಷ; ನಿವ್ವಳ ಲಾಭ: 6.70 ಲಕ್ಷ; ಎನ್ ಪಿ ಎ: ಶೇ.4.29; ಅಡಿಟ್ ವರ್ಗೀಕರಣ ‘ಎ’; ಪ್ರಾಸ್ತಾವಿಕ ಲಾಭಾಂಶ: ಶೇ.4 ಆಗಿದೆ.
ಸರ್ವ ಸದಸ್ಯರು ಮಹಾಸಭೆಯಲ್ಲಿ ಕ್ಲಪ್ತ ಸಮಯದಲ್ಲಿ ಉಪಸ್ಥಿತರಿದ್ದು ಸಭೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಉಪ ಕಾರ್ಯಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಗೌ. ಕಾರ್ಯದರ್ಶಿ ಪಿ. ಶೇಖರ ಮೂಲ್ಯ, ಗೌ. ಕೋಶಾಧಿಕಾರಿ ಭಾರತಿ ಪಿ. ಆರ್ಕ್ಯನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡೊಂಬಯ್ಯ ಐ ಮೂಲ್ಯ, ಚಂದು ಕೆ ಮೂಲ್ಯ, ಸುರೇಖಾ ಕರ್ಕೆರ, ಕರುಣಾಕರ ಬಿ. ಸಾಲ್ಯಾನ್, ಗಿರೀಶ್ ವಿ. ಕರ್ಕೇರ, ನ್ಯಾಯವಾದಿ ಉಮಾನಾಥ ಕೆ. ಮೂಲ್ಯ, ದೇವದಾಸ ಎಮ್. ಬಂಜನ್, ನ್ಯಾಯವಾದಿ ಸೋಪನ್ ಎಸ್. ವಾಂಖೇಡೆ, ನ್ಯಾಯವಾದಿ ಪವಿತ್ರಾ ಮನೇಶ್, ವೇಣುಗೋಪಾಲ ಡಿ. ಕರ್ಕೇರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
Post a Comment