".

Header Ads

ಚಂದ್ರಯಾನ-3ರ ಕೌಂಟ್‌ಡೌನ್‌ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ಹೃದಯಾಘಾತದಿಂದ ನಿಧನ

 


ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿ, ಚಂದ್ರಯಾನ -3ರ ರಾಕೆಟ್ ಉಡಾವಣೆ ವೇಳೆ ಕೌಂಟ್‌ಡೌನ್ ಹಿಂದಿನ ಧ್ವನಿಯಾಗಿದ್ದ ಎನ್‌. ವಲರ್ಮತಿ(64) (N Valarmathi) ಅವರು ಹೃದಯಾಘಾತದಿಂದ ನಿಧಾನರಾಗಿದ್ದಾರೆ.

ಮೂಲತಃ ತಮಿಳುನಾಡಿನ ಅರಿಯಾಲೂರ್‌ನವರಾದ ಇವರು, ಶನಿವಾರ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಚಂದ್ರಯಾನ -3 ರಾಕೆಟ್‌ ಉಡಾವಣೆ ವೇಳೆ ಅಂತಿಮ ಕ್ಷಣಗಳಿಗೆ ಅವರು ಕೊನೆಯ ಬಾರಿ ಧ್ವನಿ ನೀಡಿದ್ದರು.

ಇಸ್ರೊ ಮಾಜಿ ನಿರ್ದೇಶಕ ಪಿ.ವಿ ವೆಂಕಟಕೃಷ್ಣನ್‌ ಅವರು ಟ್ವಿಟರ್‌ ಖಾತೆಯಲ್ಲಿ, 'ಶ್ರೀಹರಿಕೋಟಾದಿಂದ ಇಸ್ರೊ ಭವಿಷ್ಯದ ಮಿಷನ್‌ಗಳ ಕ್ಷಣಗಣನೆಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3ರ ಅಂತಿಮ ಕ್ಷಣಗಣನೆ ಅವರ ಕೊನೆಯ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮಗಳು' ಎಂದು ಬರೆದುಕೊಂಡಿದ್ದಾರೆ.

31 ಜುಲೈ 1959 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ‌ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಅವರು RISAT-1 ರ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದರು, ಇದು ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹ (RIS) ಮತ್ತು ದೇಶದ ಎರಡನೇ ಉಪಗ್ರಹವಾಗಿದೆ. ಏಪ್ರಿಲ್ 2012 ರಲ್ಲಿ RISAT-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

Powered by Blogger.