".

Header Ads

ಮಾಳ:- ಕಾರ್ಕಳ ತಾಲೂಕು ಮಟ್ಟದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ




ಕಾರ್ಕಳ ತಾಲೂಕು ಮಟ್ಟದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ಸ.ಹಿ.ಪ್ರಾ. ಶಾಲೆ ಕೂಡಬೆಟ್ಟು ಮಾಳ ಇಲ್ಲಿ ನಡೆಯಿತು.

ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಉಮೇಶ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭಾಶಂಸನೆಗೈದರು.ಮಾಳ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಿಮಲಾ ಪೂಜಾರಿ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ಶಶಿಧರ್ ಭಟ್,ಉಪಾಧ್ಯಕ್ಷೆ ಶ್ರೀಮತಿ ಸುನೀತಾ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀ ರವಿಚಂದ್ರ ಕಾರಂತ್,ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಭಾವತಿ,ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಶ್ರೀ ಅನಿಲ್ ಎಸ್ ಪೂಜಾರಿ,ಶಾಲೆಯ ನಿಕಟಪೂರ್ವ ಮುಖ್ಯ ಶಿಕ್ಷಕ ಶ್ರೀ ಕೃಷ್ಣ ಮೊಯ್ಲಿ,ಮಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ಅಜಿತ್ ಹೆಗ್ಡೆ,ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಶ್ರೀ ಶಾಂತಾರಾಮ‌ ಮೆಹೆಂದಳೆ‌,ಇತರ ಗಣ್ಯರು ಹಾಜರಿದ್ದರು.

ಶ್ರೀಮತಿ ಪ್ರಭಾವತಿ ಸ್ವಾಗತಿಸಿದರು,ಮಕ್ಕಳು ಪ್ರಾರ್ಥಿಸಿದರು,ಶ್ರೀ ರಾಧಾಕೃಷ್ಣ ಜೋಶಿ ನಿರೂಪಿಸಿದರು,ಶ್ರೀಮತಿ ಹೇಮಾ ಸ್ವಾಗತಿಸಿದರು.

ಸಂಜೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಎಸ್ ಅಧ್ಯಕ್ಷರಾದ ಶ್ರೀ ಶಶಿಧರ್ ಭಟ್ ವಹಿಸಿದ್ದರು.ಇಲಾಖೆಯ ಅಧಿಕಾರಿಗಳು, ಊರ ಹಿರಿಯರು,ಶಾಲಾ ಅಭಿಮಾನಿಗಳು ಹಾಜರಿದ್ದರು.

ಶಿಕ್ಷಕಿ ಶ್ರೀಮತಿ ಸ್ಟೆಫಿ ಶೈನಿ ಫೆರ್ನಾಂಡಿಸ್ ಬಹುಮಾನ ವಿಜೇತ ಮಕ್ಕಳ ವಿವರ ಓದಿದರು.ಶಿಕ್ಷಕಿ ಶ್ರೀಮತಿ ಹರಿಣಿ ಧನ್ಯವಾದ ಅರ್ಪಿಸಿದರು.ಶ್ರೀ ರಾಧಾಕೃಷ್ಣ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

ಬಾಲಕರ ತಂಡದಲ್ಲಿ ಮುನಿಯಾಲು,ಮಾಳ ಗುರುಕುಲ,ಬಾಲಕಿಯರಲ್ಲಿ ನಿಟ್ಟೆ,ಪೆರ್ವಾಜೆ ಶಾಲೆಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವು.ಪ್ರಥಮ ಸ್ಥಾನಿಯಾದವರು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

ಶಾಲೆಯ ಶಿಕ್ಷಕ ವೃಂದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



Powered by Blogger.