".

Header Ads

ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸ್ಯಾಟಿ ಲಿಮಿಟೆಡ್ 35ನೇ ವಾರ್ಷಿಕ ಮಹಾಸಭೆ,


ರಾಷ್ಟ್ರೀಯ ಬ್ಯಾಂಕ್ ಗಳು ನೀಡುವ ಸೌಲಭ್ಯಗಳು ಮಾತೃಭೂಮಿಯಲ್ಲಿ ಗ್ರಾಹಕರಿಗೆ ಲಭ್ಯ: ಉಳ್ತುರು ಮೋಹನದಾಸ್ ಶೆಟ್ಟಿ

ಚಿತ್ರ ವರದಿ : ದಿನೇಶ್ ಕುಲಾಲ್

ಮುಂಬಯಿ : ಬಂಟರ ಸಂಘ ಮುಂಬೈಯ 
 ಸಂಚಾಲಕತ್ವದಲ್ಲಿರುವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸ್ಕಾಟಿ ಲಿಮಿಟೆಡ್ ಇದರ 35ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 2 ರ ಶನಿವಾರದಂದು  ಕುರ್ಲಾ ಪೂರ್ವದ ಬಂಟರ ಭವನ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಮಾತೃಭೂಮಿಯ ಕಾರ್ಯಾಧ್ಯಕ್ಷ ಉಳ್ತುರು ಮೋಹನದಾಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ  ಕೆ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. 

 ಅಧ್ಯಕ್ಷತೆಯನ್ನು ವಹಿಸಿದ  ಉಳ್ತುರು ಮೋಹನ್‌ದಾಸ್‌ ಶೆಟ್ಟಿ ಗ್ರಾಹಕರನ್ನು , ಶೇರ್  ದಾರರು  ಮತ್ತು ಹಿತೈಷಿಗಳನ್ನು ಸ್ವಾಗತಿಸುತ್ತಾ, ಮಾತೃಭೂಮಿ  ತಂಡ ರೂಪಗೊಳ್ಳುವಾಗ   ಬಂಟರ ಸಂಘದ  ಅಧ್ಯಕ್ಷರ, ಜಾಗತಿಕ ಬಂಟರ ಸಂಘದ ಅಧ್ಯಕ್ಷರು ಈ ಇಂದಿನ ಎಲ್ಲಾ ಕಾರ್ಯಾಧ್ಯಕ್ಷರ , ಮಾರ್ಗದರ್ಶನದಲ್ಲಿ ಸಮರ್ಥ ರೀತಿಯ ತಂಡ ಮಾರ್ಗದರ್ಶನ ನೀಡಿದ್ದಾರೆ. ಅವರೆಲ್ಲರ ಸಮರ್ಥ ಮಾರ್ಗದರ್ಶನದಲ್ಲಿ ಈ ಸಂಸ್ಥೆಯನ್ನು ನನ್ನ ತಂಡ ಮುನ್ನಡೆಸುತ್ತಿದೆ ,ನಮ್ಮ ತಂಡದಲ್ಲಿ ವಿದ್ಯಾವಂತರು, ಸಂಘಟಕರು, ಲೆಕ್ಕ ಪರಿಶೋಧಕರು ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ,ಮಾತೃಭೂಮಿ ಕೋ ಆಪರೇಟಿವ್ ಮಟ್ಟದಲ್ಲಿ ಬೆಳೆಸಬೇಕೆನ್ನುವ ನಮ್ಮ ತಂಡದ ಯೋಚನೆಯಾಗಿದೆ, ಎಲ್ಲಾ ರಾಷ್ಟ್ರೀಕೃತ  ಬ್ಯಾಂಕುಗಳಂತೆ ಸಮಾನ ರೀತಿಯ ಲೋನ್ ಬಡ್ಡಿ ಮತ್ತು ಠೇವಣಿದಾರರಿಗೆ ಬಡ್ಡಿ ನೀಡುವ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇವೆ ,ನಮ್ಮ ಸಮಾಜದಲ್ಲಿ ಬಹಳಷ್ಟು ಜನ ಉದ್ಯಮಿಗಳಿದ್ದಾರೆ, ಅವರೆಲ್ಲರೂ ಮಾತೃಭೂಮಿ ವ್ಯವಹಾರ ನಡೆಸಬೇಕು, ಅಲ್ಲದೇ ಚಾರ್ಟೆಡ್ ಅಕೌಂಟೆಂಟ್ ನವರು ಕೂಡ ಬಹಳಷ್ಟು ಜನ ಬಂಟ ಸಮಾಜದ ಅವರಿದ್ದಾರೆ ಅವರೆಲ್ಲರೂ ಮಾತೃಭೂಮಿ ಲೋನ್ ಪಡೆಯಲು ಸಮಾಜದ ಬಾಂಧವರಿಗೆ ತಿಳಿಸಬೇಕು ಆ ಮೂಲಕ ನಮ್ಮ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸುವುದಕ್ಕೆ ಸಾಧ್ಯವಾಗುತ್ತದೆ, ಬಂಟರ ಸಂಘ ದ ಪ್ರತಿ ಪ್ರಾದೇಶಿಕ ಸಮಿತಿಗಳು ಬಹಳಷ್ಟು ಸಹಕಾರವನ್ನು ನೀಡುತ್ತ ಬಂದಿದೆ ಮುಂದಿನ ದಿನಗಳಲ್ಲಿ ಕೂಡ ತಮ್ಮೆಲ್ಲರ ಸಹಕಾರ ಅಗತ್ಯ ಬೇಕಾಗಿದೆ. ನಮ್ಮ ಸಂಸ್ಥೆಯಲ್ಲಿ ಠೇವಣಿ ಬಹಳಷ್ಟು ಇದೆ ಆದ್ದರಿಂದ ಗ್ರಾಹಕರಿಗೆ  ವಿಶೇಷ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನೆಲ್ಲ ರೂಪಿಸಿಕೊಂಡಿದ್ದೇವೆ ,ಅದೆಲ್ಲವೂ ಯಶಸ್ವಿಯಾಗಬೇಕೆಂದರೆ ಸಮಾಜದ ಬಂಧುಗಳೆಲ್ಲರೂ ನಮ್ಮೊಂದಿಗೆ ವ್ಯವಹಾರ ನಡೆಸಬೇಕು. ನಮ್ಮ ಸಂಸ್ಥೆಯ ಸಿಬ್ಬಂದಿ  ವರ್ಗದವರಿಗೆ ಕೂಡ ವಿಶೇಷ ಮಾರ್ಗದರ್ಶನ   ನೀಡಿ ರಾಷ್ಟ್ರೀಯ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸೌಲಭ್ಯದಷ್ಟೇ ನಮ್ಮ ಕೋ ಆಪರೇಟಿವ್ ಸೊಸೈಟಿ ಯು ಮಾಡಲಿದೆ.  ಸಮಾಜ ಬಾಂಧವರೆಲ್ಲರ ಬೆಂಬಲದಿಂದ ಒಳ್ಳೆಯ ಸ್ಕೀಮ್ ಅನ್ನು  ಗ್ರಾಹಕರಿಗೆ ನೀಡಲು ಸಾಧ್ಯವಾಯಿತು.  ಗ್ರಾಹಕರಿಗೆ ಲೋನ್ ನೀಡುವಾಗ ಅದನ್ನು ಅಲಂಕಶವಾಗಿ ಅಧ್ಯಯನ ಮಾಡಿ ನೀಡುತ್ತೇವೆ, ಆದ್ದರಿಂದ ಅದು ಸರಿಯಾದ ವ್ಯವಸ್ತೆಯಲ್ಲಿ ಹಿಂದೆ ಬರುತ್ತದೆ, ಅಲ್ಲದೆ. ಲೋನ್ ರಿಕವರಿ ತಂಡ ಕೂಡ ಸಮರ್ಥ ರೀತಿಯಲ್ಲಿ ಸೇವಾ ಕಾರ್ಯವನ್ನು ಮಾಡುತ್ತಿದೆ., ರಾಷ್ಟ್ರೀಯ ಬ್ಯಾಂಕ್ ಗಳು ನೀಡುವ ಸೌಲಭ್ಯಗಳು ಮಾತೃಭೂಮಿಯಲ್ಲಿ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಲಭ್ಯ, ಎಂದು   ಶೇಕಡಾ 12ರಷ್ಟು, ಡಿವಿಡೆಂಡ್ ನೀಡುವುದಾಗಿ ಘೋಷಿಸಿ ದರು,

ಮಾತೃಭೂಮಿಯ ಉಪ ಕಾರ್ಯಾಧ್ಯಕ್ಷ ಡಾ. ಆರ್. ಕೆ. ಶೆಟ್ಟಿ, ಸೊಸೈಟಿಯ ಲೋಗೋ ಮತ್ತು ವೆಬ್ಸೈಟ್ನ ಬಗ್ಗೆ ಮಾಹಿತಿ ನೀಡಿ,  ಹೊಸ ಸ್ಕೀಮಿನ ಬಗ್ಗೆ ಮುಂಗಡ ಸಾಲ  ಕನಿಷ್ಠ ಬಡ್ಡಿದರದಲ್ಲಿ ಕೊಡುವುದಾಗಿ .
ವಿವಾರವನ್ನು ಸಭೆಗೆ ನೀಡಿದರು,


 ಗೌರವ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ವಾರ್ಷಿಕ ವರದಿಯನ್ನು ಮಂಡಿಸಿದರು,ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿಲೆಕ್ಕಪತ್ರವನ್ನು ನೀಡಿದರು,

  ವೇದಿಕೆಯಲ್ಲಿ ನಿರ್ದೇಶಕರುಗಳಾದ ಮಹೇಶ್ ಎಸ್. ಶೆಟ್ಟಿ, ಶಶಿಧರ್ ಕೆ. ಶೆಟ್ಟಿಇನ್ನಂಜೆ , ಸಿಎ ಜಗದೀಶ್ ಬಿ. ಶೆಟ್ಟಿ, ಕಿಶೋರ್‌ಕುಮಾರ್ ಕುತ್ಕಾರು, ಸುನಂದ ಶೆಟ್ಟಿ, ಸಿಎ ರಾಜಶ್ರೀ ಜಿ. ಶೆಟ್ಟಿ, ಉಪಸ್ಥರಿದ್ದರು.

  ಮಾತೃಭೂಮಿಯ  ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಅವರು ಹೆಚ್ಚು ಠೇವಣಿ ಸಂಗ್ರಹ ಮಾಡಿದ ಬಂಟರ ಸಂಘದ ಮಾಜಿ ಅಧ್ಯಕ್ಷ ಸಿಎ ಶಂಕರ ಶೆಟ್ಟಿ. ಮತ್ತು ಬಂಟರ ಸಂಘದ ಕಾರ್ಯದರ್ಶಿ ಮಾತೃಭೂಮಿಯ ಉಪ ಕಾರ್ಯಧ್ಯಕ್ಷ ಡಾ ಆರ್ ಕೆ ಶೆಟ್ಟಿ,
ಹಾಗೂ ವಿವಿಧ ಶಾಖೆಗಳಲ್ಲಿ ಅತಿ ಹೆಚ್ಚು ಡೈಲಿ ಪಿಗ್ಮಿ ಕಲೆಕ್ಷನ್ ಮಾಡಿದ ಏಜೆಂಟರ ಹೆಸರನ್ನು ಸಭೆಗೆ ತಿಳಿಸಿದರು ಮತ್ತು ಅವರೆಲ್ಲರನ್ನು ಗೌರವಿಸಲಾಯಿತು.,

     ಸಭೆಯಲ್ಲಿ ಉಪಸ್ತರಿಂದ ಮಾತೃಭೂಮಿಯ ಮಾಜಿ ಕಾರ್ಯಧ್ಯಕ್ಷ   ರತ್ನಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ ಮಾತೃಭೂಮಿಯ ಕಾರ್ಯ ಧ್ಯಕ್ಷ ನಿರ್ಗಮಿಸುವ   ಸಂದರ್ಭದಲ್ಲಿ ಉತ್ತಮ ತಂಡವನ್ನು   ರಚಿಸಿದ್ದೇವೆ ಅದು ಈಗ ಯಶಸ್ವಿಯ ಹಾದಿಯಲ್ಲಿ ನಡೆಯುತ್ತಿದೆ  ಇದೀಗ ಈ ತಂಡ ಸಮರ್ಥ ರೀತಿಯಲ್ಲಿ ಸಂಸ್ಥೆಯನ್ನು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವ ಉದ್ದೇಶದಿಂದ ಒಳ್ಳೆಯ ಯೋಜನೆಗಳನ್ನು ರೂಪಿಸಿಕೊಂಡಿದೆ. ವ್ಯವಹಾರವನ್ನು ಭದ್ರತೆಯಿಂದ ನಡೆಸುತ್ತಿದ್ದಾರೆ. ಸಾಲ ನೀಡುವಾಗ ಮತ್ತು ಪಡೆಯುವಾಗ ಬಹಳ ಜಾಗೃತೆಯಿಂದ ಕಾರ್ಯನಿರ್ವಹಿಸುತ್ತಾರೆ .ಈ ಸಂಸ್ಥೆಯಲ್ಲಿ ಇದ್ದಷ್ಟು ಅನುಭವಿ ತಂಡ ಯಾವುದೇ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಕೂಡ ಕಾಣಸಿಗದು.  ಇಂದಿನ ಸಭೆಯಲ್ಲಿ ಗ್ರಾಹಕರು ಕಡಿಮೆ ಇರಬಹುದು ಅವರೆಲ್ಲರಿಗೂ ವಿಶ್ವಾಸ ಮತ್ತು ನಂಬಿಕೆ ಈ ಸಂಸ್ಥೆಯ ಮೇಲೆದೆ. ಬಂಟ ಸಮಾಜದ ಬಂಧುಗಳೆಲ್ಲರೂ ಸಮಾಜ ದ  ಅಭಿಮಾನವನ್ನು ಇಟ್ಟು ಮಾತೃಭೂಮಿಯಲ್ಲಿ ವ್ಯವಹಾರವನ್ನು ಮಾಡಬೇಕು ಎಂದು ನುಡಿದರು ,

  ಸಭೆಯಲ್ಲಿ ಉಪಸ್ತರಿಂದ ಮಾತೃಭೂಮಿಯ ಮಾಜಿ ಕಾರ್ಯಧ್ಯಕ್ಷ ಕೆ ಡಿ ಶೆಟ್ಟಿ ಮಾತನಾಡುತ್ತಾ ಬ್ಯಾಂಕ್ ಮಾಡುವ ವ್ಯವಹಾರವನ್ನು ಮಾತೃಭೂಮಿ ಮಾಡುತ್ತಿದೆ, ನಮಗೆ ಬ್ಯಾಂಕಿನ ಅಗತ್ಯತೆ ಇಲ್ಲ ಅದರಷ್ಟೇ ಸೇವೆಗಳನ್ನು ಸೊಸೈಟಿ ನೀಡುತ್ತಿದೆ, ಸೊಸೈಟಿಯಲ್ಲಿ 12 ವರ್ಷಗಳ ಕಾಲ ನಿಸ್ವಾರ್ಥ ಸೇವೆಯನ್ನು ಮಾಡಿದ್ದೇನೆ, ಅಂದಿನ ದಿನಗಳಲ್ಲಿ ತುಂಬಾ ಕಷ್ಟಗಳಾಗಿದ್ದವು.  ಇಂದಿನ ದಿನಗಳಲ್ಲಿ ಈ ಸಂಸ್ಥೆ ಎತ್ತರಕ್ಕೆ ಬೆಳೆದಿದ್ದನ್ನು ಕಂಡಾಗ ತುಂಬಾ ಸಂತೋಷವಾಗುತ್ತಿದೆ, ನಮ್ಮ ಸಮಾಜದ ಬಂಧುಗಳು ವ್ಯವಹಾರಗಳನ್ನು ಬೇರೆಬ್ಯಾಂಕುಗಳಲ್ಲಿ ಮಾಡುತ್ತಿದ್ದಾರೆ ಅವರಿಗೆ ಒಂದು ರೀತಿಯ ಹಂಚಿಕೆಯ ಇರಬಹುದು ,ಪ್ರತಿಯೊಬ್ಬ ಸಮಾಜ ಬಾಂಧವರು  ಮಾತೃಭೂಮಿಯಲ್ಲಿ ವ್ಯವಹಾರವನ್ನು ಮಾಡಬೇಕು. ಬ್ಯಾಂಕಿನಲ್ಲಿ ಹೆಚ್ಚು ಆದಾಯ ಬಂದರೆ ನಮಗೆ ಡಿವಿಡೆಂಡ್ ರೂಪದಲ್ಲಿ ಆದಾಯ ಸಿಗುತ್ತದೆ ,   ನಮ್ಮ ಹಣವನ್ನು ನಾವೇ  ಪಡೆಯುವಂತೆ ಆಗುತ್ತದೆ. ಸೊಸೈಟಿಯ ಸಿಬ್ಬಂದಿಗಳಿಗೆ ಉತ್ತಮ ಸೌಲಭ್ಯವನ್ನು ನೀಡುವ ಕೆಲಸ ಆಗಬೇಕು ಎಂದು ನುಡಿದರು,
 ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಅಧ್ಯಕ್ಷ ಮಾತೃಭೂಮಿಯ  ಮಾಜಿ ನಿರ್ದೇಶಕ ಕರ್ನಿರೆ ವಿಶ್ವನಾಥ್ ಶೆಟ್ಟಿ ಮಾತನಾಡುತ್ತಾ ಹಿಂದೆ ಈ ಸಂಸ್ಥೆ ಕಾರ್ಯ ಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರೆಲ್ಲರೂ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಿದ್ದಾರೆ ಅದರ ಸೇವೆಯಫಲ ಇಂದು ನಮಗೆಲ್ಲರಿಗೆ ಲಭಿಸುವಂಥಾಗಿದೆ, ನಾನು ತುಂಬಾ ಸಮಯ ಈ ಸಂಸ್ಥೆಯಲ್ಲಿ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ, ನನ್ನ ಮುಖಾಂತರ ವಸೈ ತಾಲೂಕಿನಲ್ಲಿ ನೀಡಿದ  ಸಾಲಗಳು  ಅದು ಎಲ್ಲವೂ  ಸಮಯದೊಳಗೆ ಮುಗಿದಿರುತ್ತದೆ. ಅದಕ್ಕೆ ನನ್ನ ಕರ್ತವ್ಯದ ಸೇವೆಯನ್ನು ಮಾಡಿದ್ದೇನೆ.  ಯಾವಾಗ ನಮ್ಮಲ್ಲಿ  ಸಮಾಜ ಸೇವೆಗೆ ಸಮಯವಿಲ್ಲ  ಎಂದು ತಿಳಿದಾಗ ನಾವು ಅದರಿಂದ ದೂರವಿರಬೇಕು , ಪ್ರಸ್ತುತ ಈಗಿನ ತಂಡ ಈ ಸಂಸ್ಥೆಯನ್ನು ಒಳ್ಳೆ ರೀತಿಯಲ್ಲಿ ನಡೆಸುತ್ತಿದೆ ಹಾಗೂ ಸಿಬ್ಬಂದಿ ವರ್ಗ ಕೂಡ ಇದರಲ್ಲಿ ಅಪಾರವಾದ ಶ್ರಮವನ್ನು ವಹಿಸಿದೆ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು,

ಬಂಟರ ಸಂಘದ ಜೊತೆ ಕೋಶಧಿಕಾರಿ ಮುಂಡಪ್ಪ ಎಸ್ ಪೈಯಾಡೆ ಮಾತನಾಡುತ್ತಾ ಮಾತೃಭೂಮಿ ವ್ಯವಹಾರಗಳನ್ನು ನೋಡುವಾಗ ಕೇಳುವಾಗ ಬಹಳ ಸಂತೋಷವಾಗುತ್ತಿದೆ , ನಾನು ಕೂಡ ಈ ಸಂಸ್ಥೆಯಲ್ಲಿ ನಿರ್ದೇಶಕನಾಗಿ ಸೇವೆ ಮಾಡಿದ್ದೇನೆ ನನ್ನ ಕಾಲದ ಸಂದರ್ಭದಲ್ಲಿ ಅತಿ ಹೆಚ್ಚು  ಶೇರುದವರನ್ನು ಮಾಡಿದ ಹೆಮ್ಮೆ ನನಗಿದೆ, ಈ ಸಂಸ್ಥೆಗೆ  ಇನ್ನಷ್ಟು ನಿರ್ದೇಶಕರನ್ನು ಸೇರಿಸಿಕೊಳ್ಳಬೇಕು ಏಕೆಂದರೆ ಅಭಿವೃದ್ಧಿ ಕೊಳ್ಳುತ್ತಿರುವ ಸೊಸೈಟಿಗೆ ಸೇವೆ ಮಾಡುವುದಕ್ಕೆ ತುಂಬವಿದೆ, ಸೊಸೈಟಿಯ ಸಿಬ್ಬಂದಿಗಳು ಒಳ್ಳೆ ರೀತಿಯ ಸೇವೆಗಳನ್ನು ನೀಡುತ್ತಾರೆ ಅವರ ಸೇವೆಗಳಿಂದಾಗಿ ಸಂಸ್ಥೆಗೆ ಹೆಚ್ಚು ಕೀರ್ತಿ ಬಂದಿದೆ. ಬ್ಯಾಂಕಿಗಿಂತ ಅತಿ ಸುಲಭದಲ್ಲಿ ನಮ್ಮ ಸೊಸೈಟಿ ಸಾಲವನ್ನು ನೀಡುತ್ತದೆ ,ಆದ್ದರಿಂದ ಸಮಾಜ ಬಾಂಧವರು ಇಲ್ಲಿಯೇ ವ್ಯವಹಾರವನ್ನು ಮಾಡಿ ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಎಂದು ನುಡಿದರು,
ಬಂಟರ ಸಂಘದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ ಮಾತನಾಡಿ  ಪ್ರತಿ ವರ್ಷ ಉತ್ತಮ ಡಿವಿಡೆಂಡ್ ನೀಡುತ್ತಾ ಬಂದಿದೆ ,ಸೊಸೈಟಿಯ ನಿರ್ದೇಶಕರಿಂದ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರ ತ್ಯಾಗದ ಸೇವೆಯಿಂದಾಗಿ ನಮಗೆ ಡಿವಿಡೆಂಡ್ ಸಮಯದಲ್ಲಿ ಸಿಗುತ್ತಿದೆ. ಸೊಸೈಟಿಯ ಹೆಚ್ಚುವರಿ ಸಿಬ್ಬಂದಿಗಳಿಗೆ ಹೆಚ್ಚು ಮಾರ್ಗದರ್ಶನ ನೀಡಿ ಸಂಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ಎಂದು ನುಡಿದರು.
 ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಕಲಾ ಪುಂಜ ಅಭಿಪ್ರಾಯಗಳನ್ನು ತಿಳಿಸುತ್ತಾ   ಬಂಟರ ಸಂಘದ ಬೋರವಿಲಿ ಶಿಕ್ಷಣ ಸಂಸ್ಥೆಗೆ  ಸಹಕಾರ ನೀಡಲು  ಸೊಸೈಟಿಯ ಡಿವಿಡನ  ನನ್ನು  ಸಮಾಜ ಬಾಂಧವರು ನೀಡುವಂತೆ ಪ್ರೇರೇಪಿಸಬೇಕು ಎಂದರು,

ಸೊಸೈಟಿಯ ಕಾರ್ಯಾಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ ಸಭೆಯನ್ನುಮುನ್ನಡೆಸಿದರು, ಗೌರವ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಅವರ ಅನ್ನಿಸಿದರು ಪ್ರಮೀಳ ಶೆಟ್ಟಿ ಪ್ರಾರ್ಥನೆ ಮಾಡಿದರು

ಸಂಘದ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಸಂಘ ಸಂಸ್ಥೆಯ ಅಧ್ಯಕ್ಷರು ,ಪದಾಧಿಕಾರಿಗಳು ವಿವಿಧ ಸೊಸೈಟಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು
 
++++++++++++

ಡಿವಿಡೆಂಡ್ ಘೋಷಿಸಿದ ಕ್ಷಣದಲ್ಲಿ
ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ,

ಆಡಳಿತ ಮಂಡಳಿಯ ನಿರ್ಧಾರದ ಪ್ರಕಾರ ಗ್ರಾಹಕರಿ  ಶೇಕಡಾ 12ರಷ್ಟು  ಡಿವಿಡೆಂಡ್ ನೀಡುವುದಾಗಿ ಘೋಷಿತ  ಕ್ಷಣಮಾತ್ರದಲ್ಲಿ ಬ್ಯಾಂಕ್ ಖಾತೆಗೆ ಜಮಾ ಗಿದೆ.
ಡಿವಿಡೆಂಡ್, ಮಾತೃಭೂಮಿಯ ಸೇವಾ ಕಾರ್ಯಗಳ ಬಗ್ಗೆ ಗ್ರಾಹಕರೆಲ್ಲರೂ ಸಂತೋಷದ ವಿಚಾರವನ್ನು ಮಾತನಾಡಿದರು, ಆದ್ದರಿಂದ ಡಿವಿಡೆಂಡ್ ಪಾವತಿಗಾಗಿ ತಮ್ಮ ಕೆವೈಸಿ ಮತ್ತು ಬ್ಯಾಂಕ್‌ ಖಾತೆಯ ವಿವರಗಳನ್ನು ಕಡ್ಡಾಯವಾಗಿ ನವೀಕರಿಸಲು ಸದಸ್ಯರನ್ನು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆ 74001 87906 / 88288 00735 ಸಂಪರ್ಕಿಸಬಹುದು ತಿಳಿಸಿದ್ದಾರೆ



--------
ಕಾರ್ಪೊರೇಟಿವ್ ಲೆವೆಲ್ ನಲ್ಲಿ ಸೊಸೈಟಿ ಬೆಳೆದಿದೆ : ಚಂದ್ರಹಾಸ ಕೆ. ಶೆಟ್ಟಿ
ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಮಾತೃಭೂಮಿ ವೆಬ್ ಸೈಟನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು ಮಾತೃಭೂಮಿ ಪ್ರತಿ ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಿದೆ, ಸಮಾಜ ಬಾಂಧವರ ಅಪೇಕ್ಷೆಯಂತೆ ಬೆಳೆದು ನಿಂತಿದೆ. ಸಂಸ್ಥೆಯ ಆಡಳಿತ ಮಂಡಳಿಯ ಪ್ರತಿಯೊಬ್ಬರು ಕೂಡ ಕರ್ತವ್ಯವನ್ನು ನೆನಪಿಸಿಕೊಂಡು ಸೇವೆ ಮಾಡುತ್ತಿದ್ದಾರೆ ಆದ್ದರಿಂದ ಬಲಿಷ್ಠಗೊಂಡಿದೆ. ಬ್ಯಾಂಕ್ ಅಥವಾ ಸೊಸೈಟಿ ವ್ಯವಹಾರ ಅಭಿವೃದ್ಧಿಗೊಳ್ಳುವುದು  ಸಾಲಗಾರರಿಗೆ ನೋಟಿಸು ನೀಡಿ ನಡೆಯುವುದಲ್ಲ. ಅದು ವೈಯಕ್ತಿಕ  ಸಂಬಂಧಗಳಿಂದ  ಸಾಲದ ಮರುಪಾವತಿ ಯಿಂದ. ಸಾಲ ಪಡೆದವರೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡು ಕಾಲಕಾಲಕ್ಕೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸಾಲವನ್ನು ಹಿಂದೆ  ಪಡೆಯುವುದರಿಂದ ಯಶಸ್ವಿಯಾಗುತ್ತದೆ. ನಮ್ಮ ಸಂಸ್ಥೆಯ ಅಭಿವೃದ್ಧಿ ಗೊಂಡಿದ್ದು ಸರಿಯಾದ ರೀತಿಯಿಂದ ಸಾಲಗಾರರಿಂದ ಇಂದೇ ಪಡೆಯುವುದರಿಂದಾಗಿ, ಸೊಸೈಟಿಯ ಸಿಬ್ಬಂದಿ ಗಳಿಗೆ  ಇನ್ನಷ್ಟು ಮಾರ್ಗದರ್ಶನದ ಮಾಹಿತಿಯನ್ನು ನೀಡಿ. ಕಾರ್ಪೊರೇಟಿವ್ ಲೆವೆಲ್ ನಲ್ಲಿ ಸೊಸೈಟಿ ಬೆಳೆ ಬೇಕು, ಈಗ  ರಾಷ್ಟ್ರೀಯ ಬ್ಯಾಂಕಿನಲ್ಲಿ ಸ್ಪರ್ಧಾತ್ಮಕವಾದ ವ್ಯವಹಾರಗಳು ನಡೆಯುತ್ತಿದೆ  . ನಮ್ಮ ಸಮಾಜಕ್ಕೆ ಬ್ಯಾಂಕಿನ ಅಗತ್ಯಕ್ಕೆ ಇಲ್ಲ ಯಾಕೆಂದರೆ ಬ್ಯಾಂಕ್ ಮಾಡುವ ವ್ಯವಹಾರಕ್ಕಿಂತ ಹೆಚ್ಚು ವ್ಯವಹಾರವನ್ನು ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಮಾಡುತ್ತಿದೆ. ನಮ್ಮೆಲ್ಲರ ಸಹಕಾರದಿಂದ ಇದನ್ನೇ ಎತ್ತರಕ್ಕೆ ಬೆಳೆಸುವ , ಸಮಾಜದ ಜನರಿಗೆ ವ್ಯವಹಾರ ಮಾಡುವುದಕ್ಕೆ ಸೊಸೈಟಿ ಸಾಕಾರವಾಗಲಿ ನಮ್ಮೆಲ್ಲರ ಸಹಕಾರದಿಂದ ಸೊಸೈಟಿ ಅತ್ಯುತ್ತಮ ಸೊಸೈಟಿಯಾಗಿ ಗುರುತಿಸುವಂತಾಗಲಿಎಂದು ನುಡಿದರು,
--------- 

ಮಾತೃಭೂಮಿ ಸೊಸ್ಯಾಟಿ ಸಂಸ್ಥೆ ಗಟ್ಟಿಯಾಗಿದ್ದರೆ ಬಂಟರ ಸಂಘ ಕೂಡ ಬಲಿಷ್ಠವಾಗುತ್ತದೆ : ಐಕಳ ಹರೀಶ್ ಶೆಟ್ಟಿ 
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸೊಸೈಟಿಯ ನೂತನ ಲೋಗೋವನ್ನು ಅನಾವರಣಗೊಳಿಸಿ ಮಾತನಾಡುತ್ತಾ ಈ ಸಂಸ್ಥೆ ಎತ್ತರಕ್ಕೆ ಬೆಳೆಯುವುದಕ್ಕೆ ಠೇವಣಿದಾರರು, ಶೇರುದಾರರ  ಮತ್ತು ಮಾಜಿ ಕಾರ್ಯಾಧ್ಯಕ್ಷರು ಶ್ರಮವಿದೆ, ನಾನು ಕೂಡ ಈ ಸಂಸ್ಥೆಯ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ .  ಸಂಸ್ಥೆ ಬೆಳೆಯುವುದಕ್ಕೆ ಈ ಹಿಂದಿನ ದಿನಗಳಲ್ಲಿ ಸಹಕರಿಸಿದ್ದೇನೆ. ಹಣಕಾಸಿನ ಸಂಸ್ಥೆ ಗಟ್ಟಿಯಾಗಿದ್ದರೆ ಬಂಟರ ಸಂಘ ಕೂಡ ಬಲಿಷ್ಠವಾಗುತ್ತದೆ. ಬಂಟರ ಸಂಘದಲ್ಲಿ ಕಾಲೇಜಿಗೆ. ಬೇರೆ ಬೇರೆ  ವಿಭಾಗದಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ ಜಗತ್ತಿನಲ್ಲಿ ಬಂಟರ ಸಂಘಕ್ಕೆ ಸಮಾಜ ಸೇವೆಯಲ್ಲಿ ಪ್ರಥಮ ಸ್ಥಾನವಿದೆ ಅದಕ್ಕೆ ಕಾರಣ ಹಣಕಾಸಿನ ಸಹಕಾರದಿಂದಾಗಿ.ಆದ್ದರಿಂದ ನಮ್ಮ ಮಾತೃಭೂಮಿಯ ತಂಡ ಸಮರ್ಥ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿದೆ. ಬಂಟರ ಸಮಾಜದಲ್ಲಿ ಚಾರ್ಟೆಡ್ ಅಕೌಂಟೆಂಟ್ ಗಳು ಬಹಳಷ್ಟು ಜನ ಇದ್ದಾರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಮ್ಮವರು ಬೆಳೆದು ನಿಂತಿದ್ದಾರೆ ಅವರೆಲ್ಲರೂ ಸೊಸೈಟಿ ಬೆಳೆಯುವುದಕ್ಕೆ ಸಹಕಾರ ನೀಡಬೇಕು. ಬಹಳ ಉತ್ತಮ ರೀತಿಯಲ್ಲಿ ಇಂದಿನ ಮಹಾಸಭೆಯನ್ನು ನಡೆಸಿದ್ದಾರೆ ಇದು ಸೊಸೈಟಿಯ ನಾಯಕತ್ವ ವಹಿಸಿಕೊಂಡ ಯವರಸಂಘಟನಾ ಚತುರ್ಥಿಯನ್ನು ತೋರಿಸುತ್ತದೆ. ಇದೇ ರೀತಿಯಲ್ಲಿ ಬಂಟರ ಸಂಘದ ಎಲ್ಲಾ ಕೆಲಸಗಳು ನಡೆಯಬೇಕು. ಸಮಾನ ಮನಸ್ಸಿನಿಂದ ಸಮಾಜವನ್ನು ಬೆಳೆಸಬೇಕು ನಮಗೆ ಎಲ್ಲರಿಗೂ ಬಹಳಷ್ಟು ಕರ್ತವ್ಯಗಳಿದೆ. ಬಂಟರ ಸಂಘಕ್ಕೆ ಮುಂದಿನ ದಿನಗಳಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಅದಕ್ಕೆ ಕೂಡ ಸಮಾನ ಮನಸ್ಸಿನಿಂದ ಕಾರ್ಯ ನಿರ್ವಹಿಸಬೇಕು ,ಎಲ್ಲರಿಗೂ ಕೂಡ ಸಮಯ ಬಂದಾಗ ಅಧಿಕಾರ ಸಿಗುತ್ತದೆ ,ತಾಳ್ಮೆ ಮತ್ತು ತ್ಯಾಗಬೇಕು. ಸೊಸೈಟಿಯ ಸಿಬ್ಬಂದಿಗಳಿಗೆ ಕೂಡಲೇ ಅವರಗೆ ಸೌಲಭ್ಯಗಳನ್ನು ನೀಡುವ ಕೆಲಸವನ್ನು ಪ್ರಾರಂಭಿಸಬೇಕು, ಮಾತಿನಿಂದ ಪ್ರಾರಂಭಿಸಿದರೆ ಸಾಲದು ಕಾರ್ಯಗತವನ್ನು ಕೂಡಲೇ ಮಾಡಬೇಕು ಎಂದು ಅಕ್ಟೋಬರ್ ತಿಂಗಳಲ್ಲಿ ವಿಶ್ವ ಬಂಟ ಸಮ್ಮಿಲನ ಮತ್ತು ಕ್ರೀಡಾಕೂಟದಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕು ಎಂದು ನುಡಿದರು,


Powered by Blogger.