ಕೌಡೂರು : ಶ್ರೀ ಮಾರುತಿ ಫ್ರೆಂಡ್ಸ್ ಅನ್ಯಾರ್ ಕಟ್ಟೆ : ಸೆಪ್ಟೆಂಬರ್ 9 ಮತ್ತು 10 ರಂದು 25 ನೇ ವರ್ಷದ ಮೊಸರು ಕುಡಿಕೆ ಉತ್ಸವ
ಶ್ರೀ ಮಾರುತಿ ಫ್ರೆಂಡ್ಸ್ ಅನ್ಯಾರ್ ಕಟ್ಟೆ, ಮಾರುತಿ ನಗರ, ಕೌಡೂರು ವತಿಯಿಂದ 25 ನೇ ವರ್ಷದ ಮೊಸರು ಕುಡಿಕೆ ಉತ್ಸವವು ಇದೆ ಬರುವ ಸೆಪ್ಟೆಂಬರ್ 9 ಮತ್ತು 10 ನೇ ತಾರೀಕಿನಂದು ಅನ್ಯಾರ್ ಕಟ್ಟೆಯಲ್ಲಿ ಜರುಗಲಿದೆ.
ಸೆಪ್ಟೆಂಬರ್ 9 ರ ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಗೋಪೂಜೆ, ಮಧ್ಯಾನ್ಹ 2.30 ರಿಂದ ವಿವಿಧ ಆಟೋಟ ಸ್ಪರ್ಧೆಗಳು, ಸಂಜೆ 6 ರಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ (ಊರ ಸ್ಥಳೀಯ ಪ್ರತಿಭೆಗಳಿಂದ) ರಾತ್ರಿ 8.30 ರಿಂದ ಕಣಂಜಾರು ದಿನಕರ ಭಂಡಾರಿ ರಚಿಸಿ ನಿರ್ದೇಶಿಸಿದ, ರಂಗ ಕಲಾವಿದರು ರಂಗನಪಲ್ಕೆ ಇವರು ಅಭಿನಯಿಸುವ ತುಳು ಹಾಸ್ಯಮಯ ನಾಟಕ "ಪಿರ ಬನ್ನಗ -2" ಜರುಗಲಿದೆ.
ಅದೇ ರೀತಿ ಸೆ.10 ರ ಭಾನುವಾರ ಮಧ್ಯಾನ್ಹ 3.00 ರಿಂದ ಮುದ್ದು ಕೃಷ್ಣ ಸ್ಪರ್ಧೆ (ಸ್ಥಳೀಯ ಮಕ್ಕಳಿಗೆ), ಮಧ್ಯಾನ್ಹ 4.00 ರಿಂದ ವಿವಿಧ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂಜೆ 7.00 ರಿಂದ ಅನ್ನ ಸಂತರ್ಪಣೆ, ರಾತ್ರಿ 8.00 ರಿಂದ ಸಭಾ ಕಾರ್ಯಕ್ರಮ, 9.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ (ಸ್ಥಳೀಯರಿಂದ), ರಾತ್ರಿ 9.30 ಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಮಾಣ ಪತ್ರ ಪುರಸ್ಕೃತ ಸಿಂಗಾರ ಕಲಾವಿದೆರ್ ಬಜಗೋಳಿ ಇವರಿಂದ ತುಳು ಜನಪದ ಶೈಲಿಯ ನಾಟಕ 'ನಂಬುಗೆದ ಬೊಲ್ಪು' ಜರುಗಲಿದೆ. ನಾಟಕದ ಪ್ರಾಯೋಜಕತ್ವವನ್ನು ಅನ್ಯಾರ್ ಕಟ್ಟೆಯ ರಾಜೇಶ್ ಆಚಾರ್ಯ ವಹಿಸಿ ಕೊಂಡಿದ್ದಾರೆ.
ಊರ ಹಾಗೂ ಪರವೂರ ಮಹನೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಡಬೇಕಾಗಿ ಮಾರುತಿ ಫ್ರೆಂಡ್ಸ್ ಅನ್ಯಾರ್ ಕಟ್ಟೆ ಇದರ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ವಿನಂತಿಸಿಕೊಂಡಿದ್ದಾರೆ.

Post a Comment