".

Header Ads

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂದಿರ - 46 ನೇ ವಾರ್ಷಿಕ ಮಹಾ ಸಭೆ

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂದಿರ - 46 ನೇ ವಾರ್ಷಿಕ ಮಹಾ ಸಭೆ 
ಮುಂಬ್ರಾ ಮಿತ್ರ ಭಜನಾ ಮಂಡಳಿಯ 46  ನೇ ವಾರ್ಷಿಕ ಮಹಾಸಭೆಯು 10 ಅಕ್ಟೋಬರ್ ರಂದು  ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ  ಡೊಂಬಿವಿಲಿ ಪೂರ್ವದ ಯಶವಂತ್ ನಗರದ ರಾಮಚಂದ್ರ ನಿವಾಸ್ ದಲ್ಲಿರುವ ಮಂದಿರದ ಸಭಾಗ್ರಹದಲ್ಲಿ ಅಧ್ಯಕ್ಷರಾದ  ಶ್ರೀ ಇಂದುಶೇಖರ್ ಸುವರ್ಣ ರವರ ಅಧ್ಯಕ್ಷತೆಯಲ್ಲಿ ಜರಗಿತು.  ಗತ ವರ್ಷದಲ್ಲಿ ನಿಧನರಾದ ಸದಸ್ಯರುಗಳಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಮಹಾಸಭೆಯಲ್ಲಿ  ಮಂದಿರದ  ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಸಚಿನ್ ಜಿ. ಪೂಜಾರಿ   ರವರು  ಸ್ವಾಗತಿಸಿ ಮತ್ತು ಗತ ವರ್ಷದ ವರದಿ ಹಾಗೂ ಗತ ಮಹಾಸಭೆಯ ಟಿಪ್ಪಣಿಯನ್ನು ಓದಿ ಮಂಜೂರು  ಮಾಡಲಾಯಿತು . ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ   ಆಯಾ ವ್ಯಯ ಪಟ್ಟಿ ಮಂಡಿಸಿದರು.  


ಸಭೆಯಲ್ಲಿ  ಅಕ್ಟೋಬರ್ ತಿಂಗಳಲ್ಲಿ ದಾಸರ ಭಜನಾ ಸ್ಪರ್ಧೆ ಮಕ್ಕಳಿಗಾಗಿ ಆಯೋಜಿಸುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಹಾಗು ನವೆಂಬರ್ ತಿಂಗಳಲ್ಲಿ ಏಕಾಹ ಭಜನೆ ಹಾಗು ಡಿಸೆಂಬರ್ ತಿಂಗಳಲ್ಲಿ ಕಾರ್ತೀಕ ದೀಪೋತ್ಸವ ಹಾಗು ರಕ್ತ ದಾನ ಶಿಬಿರ ಕೈಗೊಳ್ಳುವುದಾಗಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈ ಗೊಳ್ಳಲಾಯಿತು. 
  

ಮಂದಿರದ ವತಿಯಿಂದ ಜರಗುವ ಧಾರ್ಮಿಕ , ಸಾಮಾಜಿಕ , ಶೈಕ್ಷಣಿಕ ಕಾರ್ಯಕ್ರಮಗಳಿಗೆ ತನು-ಮನ-ಧನ ದ ಸಹಾಯವನ್ನು ನೀಡುತಾ ಬಂದಿರುವ ದಾನಿಗಳಿಗೆ , ಸದಸ್ಯರುಗಳಿಗೆ ಕೃತಜ್ಞತೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು. ಹೊಸದಾಗಿ ಮಂದಿರದ ಸದಸ್ಯತನವನ್ನು ಪಡೆದ ಎಲ್ಲ ಸದಸ್ಯರನ್ನು ಅಭಿನಂದಿಸಲಾಯಿತು . 

 

  ಮಂದಿರದ ಕಾರ್ಯಕಲಾಪದ  ಬಗ್ಗೆ  ಸದಸ್ಯರ ಪರವಾಗಿ  ಸುರೇಶ್ ನಾಯ್ಕ್ , ರತ್ನಾಕರ ಬಂಗೇರ,  ಲತೇಶ್ ಸಾಲಿಯಾನ್  ,  ಚಂದ್ರಶೇಖರ್ ಸಾಲಿಯಾನ್, ಜಗನಾಥ್ ಶೆಟ್ಟಿ , ಹರೀಶ್ ಪದ್ಮಶಾಲಿ , ದಿನೇಶ್ ಕೋಟಿಯನ್ , ಲೀಲೆಶ್ ಸುವರ್ಣ , ಸವಿತಾ ಸಾಲಿಯಾನ್  ಸಲಹೆ ನೀಡಿ ಸಹಕರಿಸಿದರು.  ನಂತರ  ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಪೂಜಾರಿ  ರವರು  ಸರ್ವರನ್ನು ವಂದಿಸಿದರು.  

Powered by Blogger.