ನಾಲಾಸೋಪಾರ ದಲ್ಲಿ "ರಾಮ ಪಟ್ಟಾಭಿಷೇಕ ' ಪೌರಾಣಿಕ ಕನ್ನಡ ಯಕ್ಷಗಾನ ತಾಳಮದ್ದಳೆಯು
ನಾಲಾಸೋಪಾರ ದಲ್ಲಿ "ರಾಮ ಪಟ್ಟಾಭಿಷೇಕ ' ಪೌರಾಣಿಕ ಕನ್ನಡ ಯಕ್ಷಗಾನ ತಾಳಮದ್ದಳೆಯು .
ಜೀವನದಲ್ಲಿ ಯಾವುದನ್ನ ಅನುಕರಣೆ ಮಾಡುತ್ತೇವೆ ಅದೇ ಬದುಕಿನಲ್ಲಿ ಲಭಿಸುತ್ತದೆ: ಶಶಿಧರ ಕೆ. ಶೆಟ್ಟಿ ಇನ್ನಂಜೆ
ಚಿತ್ರ ವರದಿ : ದಿನೇಶ್ ಕುಲಾಲ್,
ನಾಲಾಸೋಪಾರ ಸೆ. 15- ನಾಲಾಸೋಪಾರ ಪೂರ್ವ ದ.ಅಗರ್ವಾಲ್ ಸರ್ಕಲ್ ನ ಹತ್ತಿರ ಫೈರ್ ಬ್ರಿಗೇಡ್ ಎದುರು ಶಶಿಧರ ಕೆ. ಶೆಟ್ಟಿ ಇನ್ನಂಜೆ ಆಡಳಿತದ ರೀಜೆನ್ಸಿ ಬ್ಯಾಂಕ್ವೆಟ್ ಸಭಾಂಗಣಇಲ್ಲಿ ಸೆ. 14 ರಂದು ವಸಯಿ ತಾಲೂಕಿನ ಕಲಾಭಿಮಾನಿಗಳ ಪ್ರೋತ್ಸಾ ದಿಂದ ಪ್ರಕಾಶ್ ಶೆಟ್ಟಿ, ಸುರತ್ಕಲ್ ಅವರ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಸಂಯೋಜನೆಯ ತವರೂರಿನ ಪ್ರಸಿದ್ದ ಕಲಾವಿದರ ಕೂಡಿಕೆಯಲ್ಲಿ “. ರಾಮ ಪಟ್ಟಾಭಿಷೇಕ ' ಎಂಬ ಪೌರಾಣಿಕ ಕನ್ನಡ ಯಕ್ಷಗಾನ ತಾಳಮದ್ದಳೆಯು ಜರಗಿತು.
ತಾಳಮದ್ದಲೆ ಯ ಮಧ್ಯಂತರದಲ್ಲಿ ನಡೆದ ಕಿರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರ ದ ಅಧ್ಯಕ್ಷ
ಶಶಿಧರ ಕೆ. ಶೆಟ್ಟಿ ಇನ್ನಂಜೆ ಮಾತನಾಡುತ್ತಾತಾಳಮದ್ದಲೆ ಎಂದಾಗ ಜನ ಕಡಿಮೆ ಸೇರುತ್ತಿದ್ದರು. ಇದೀಗ ಅದರ ಅಭಿರುಚಿ ಪಡೆದುಕೊಂಡ ಕೊಂಡಕಲಾಭಿಮಾನಿಗಳು ಬಹಳ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ರಾಮಾಯಣದ ಕಥೆಯ ಪಾತ್ರಗಳು ನಮ್ಮ ಬದುಕಿಗೆ ಅವಲಂಬಿತವಾಗಿರುತ್ತದೆ. ನಮ್ಮ ಜೀವನದಲ್ಲಿ ನಾವು ಯಾವ ರೀತಿ ನಡೆಯುತ್ತೇವೆ ಯಾವುದನ್ನ ಅನುಕರಣೆ ಮಾಡುತ್ತೇವೆ ಅದೇ ನಮ್ಮ ಬದುಕಿನಲ್ಲಿ ಮುಂದೆ ಲಭಿಸುತ್ತದೆ ಎಂಬುದು ರಾಮಾಯಣ ತಿಳಿಸುತ್ತದೆ. ನಮ್ಮ ಸಂಸ್ಕೃತಿ ಸಂಸ್ಕಾರಗಳು ಮುಂದಿನ ಪೀಳಿಗೆ ತಿಳಿಯಬೇಕಿದ್ದರೆ ಮಕ್ಕಳನ್ನು ಇಂಥ ಕಾರ್ಯಕ್ರಮಗಳಿಗೆ ಕರೆತರಬೇಕು. ಊರಿನ ಯಕ್ಷಗಾನಗಳು ನಾಟಕಗಳು ನಾವು ನೋಡುವಂತಾಗಲು ಪ್ರಕಾಶ್ ಶೆಟ್ಟಿ ಸುರತ್ಕಲ್ ಸಂಘಟಕರಿಂದ ಸಾಧ್ಯವಾಗಿದೆ. ಮುಂದಿನ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯ ಮಾಡುತ್ತೇವೆ ಎಂದು ನುಡಿದರು,
ವಸಾಯಿ ಕರ್ನಾಟಕ ಸಂಘಉಪಾಧ್ಯಕ್ಷರುಕರ್ನೂರು ಶಂಕರ ಆಳ್ವ ಮಾತನಾಡುತ್ತ ಶ್ರಾವಣ ತಿಂಗಳ ಪುಣ್ಯ ದಿನದಲ್ಲಿ ರಾಮನ ಚರಿತ್ರೆಯನ್ನು ಕೇಳುವ ಭಾಗ್ಯ ನಮಗೆಲ್ಲರಿಗೂ ಒದಗಿ ಬಂದಿದೆ, ರಾಮಾಯಣದ ಕಥೆಯಲ್ಲಿ ಶ್ರೀ ರಾಮನ ತ್ಯಾಗ ಕಂಡು ಬರುತ್ತದೆ ತ್ಯಾಗದ ಮನೋಭಾವನೆ ಇದ್ದವರು ದೇವರಾಗುತ್ತಾರೆ ಎಂದು ರಾಮಾಯಣ ತಿಳಿಸುತ್ತದೆ , ಶ್ರೀರಾಮಚಂದ್ರ ತನ್ನ ಹಕ್ಕನ್ನು ಬಿಟ್ಟು ಕಾಡಿಗೆ ಹೊರಡುತ್ತಾನೆ ಅದು ರಾಮಾಯಣವಾಯಿತು, ಮತ್ತೊಬ್ಬನ ಹಕ್ಕು ಪಡೆಯುವುದಕ್ಕೆ ಕೌರವರು ಪ್ರಯತ್ನಿಸುತ್ತಾನೆ ಅದು ಮಹಾಭಾರತ ಎಂದು ತಿಳಿಸಿದರು,
ವಸಾಯಿ ಕರ್ನಾಟಕ ಸಂಘ ಅಧ್ಯಕ್ಷರುದ ದೇವೇಂದ್ರ ಬುನ್ನನ್ ಪೆರ್ಮುದೆ ಮಾತನಾಡುತ್ತ ಶ್ರೀ ರಾಮನ ಪಟ್ಟಾಭಿಷೇಕ ಎಂಬ ಯಕ್ಷಗಾನ ತಾಳ ಮದ್ದಳೆ ನಮ್ಮೆಲ್ಲರನ್ನು ಧರ್ಮದ ಹಾದಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಕಲೆಗೆ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುವ ಎಂದು ನುಡಿದರು,
ಬಂಟರ ಸಂಘ ಮುಂಬಯಿ ವಸಯಿ ಡಹಣು ಪ್ರಾದೇಶಿಕ ಸಮಿತಿಮಹಿಳಾ ವಿಭಾಗ ಕಾರ್ಯಧ್ಯಕ್ಷ ಉಷಾ ಶ್ರೀಧರ ಶೆಟ್ಟಿ ಮಾತನಾಡುತ್ತಾ ಸುದೀರ್ಘಕಾಲದಿಂದ ಸಂಘಟಕರಾಗಿ ತವರೂರಿನ ಕಲಾವಿದರನ್ನು ಈ ನಗರಕ್ಕೆ ಬರಮಾಡುವಲ್ಲಿ ಶ್ರಮಿಸುತ್ತಿರುವ ಪ್ರಕಾಶ್ ಶೆಟ್ಟಿ ಸುರತ್ಕಲ್ ರವರ ಕಲಾ ಸೇವೆಗೆ ನಾವೆಲ್ಲರೂ ಸದಾ ಪ್ರೋತ್ಸಾಹ ನೀಡಬೇಕು, ತಾಳ ಮದ್ದಳೆ ಮೂಲಕ ನಮ್ಮ ಜ್ಞಾನಭ್ಯವಾಗುತ್ತದೆ ಎಂದು ನುಡಿದರು,
ವೇದಿಕೆಯಲಿ ಶ್ರೀ ಕಟೀಲು ಯಕ್ಷ ಕಲಾ ವೇದಿಕೆ ವಸಾಯಿ ಅಧ್ಯಕ್ಷರುಪಾಂಡು ಎಲ್. ಶೆಟ್ಟಿ,ಬಂಟರ ಸಂಘ ಮುಂಬಯಿ ವಸಯಿ ಡಹಣ ಪ್ರಾದೇಶಿಕ ಸಮಿತಿ ಉಪ ಕಾರ್ಯಾಧ್ಯಕ್ಷ,ಮಂಜುನಾಥ್ ಶೆಟ್ಟಿ ಕೊಡ್ಲಾಡಿ ,, ಬಿಲ್ಲವರ ಆಸೋಸಿಯೇಶನ್ ವಸಾಯಿ ಸ್ಥಳೀಯ ಕಚೇರಿ
ಕಾರ್ಯಾಧ್ಯಕ್ಷರು ಕರುಣಾಕರ್ ಅಮೀನ್, ಹಿರಿಯಹೋಟೆಲ್ಉದ್ಯಮಿ ಮೋಹನ್ ಬಿ ಶೆಟ್ಟಿ,
ಉದ್ಯಮಿ ಕಲಾ ಪೋಷಕರು ಸುರೇಶ್ ಶೆಟ್ಟಿ ಕೊಪ್ಪ ,
ತುಳು ಕೂಟ ಫೌಂಡೇಶನ್ (ರಿ) ನಾಲಾಸೋಪಾರ
ಮಹಿಳಾ ವಿಭಾಗ ಸಲಹೆಗಾರರಾದ ಶಶಿಕಲಾ ಶಶಿಧರ್ ಶೆಟ್ಟಿ ಉಪಸ್ಥರಿದ್ದರು,
ಅತಿಥಿ ಗಣ್ಯರನ್ನುಕಲಾ ಪ್ರಕಾಶ ಪ್ರತಿಷ್ಠಾನ (ರಿ) ಮುಂಬಯಿ,ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್,ಸುಪ್ರೀತ್ ಶೆಟ್ಟಿ ನೀರೆ ಸುನಿಲ್ ಅಮೀನ್ ಗೌರವಿಸಿದರು,
ಕಾರ್ಯಕ್ರಮ ನಿರೂಪಣೆಪ್ರವೀಣ್ ಶೆಟ್ಟಿ ಕಣಂಜಾರು ಮತ್ತು ವಿಜಯ್ ಶೆಟ್ಟಿ ಕುತ್ತೆತ್ತೂರು ನಿರೂಪಿಸಿದರು,
ಯಕ್ಷಗಾನ ತಾಳಮದ್ದಳೆ ಯ ಕಲಾವಿದರಗಿ ಹಿಮ್ಮೇಳ ಭಾಗವತರುಬಲಿಪ ಶಿವಶಂಕರ ಭಟ್, ಚಂಡ ವಿಶ್ವನಾಥ ಶೆಣೈ ಪಳ್ಳಿ, ಮದ್ದಳೆ ಗಣೇಶ್ ಮಯ್ಯ ವರ್ಕಾಡಿ,ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ, ಪ್ರೊ. ಪವನ್ ಕಿರಣ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸುರೇಶ್ ಶೆಟ್ಟಿ ನಂದೊಳ್ಳಿ, ಸುನಿಲ್ ಹೊಲಾಡು (ವಂಡ್ಸ್) ಇವರು ಪಾಲ್ಗೊಂಡಿದ್ದರು,
Post a Comment